newsfirstkannada.com

Gruha Jyothi Scheme: ಸೇವಾ ಸಿಂಧು ಪೋರ್ಟಲ್ ಡೌನ್​.. ಪರದಾಡಿದ ಜನರು

Share :

18-06-2023

    ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ನಾ ಮುಂದು ತಾ ಮುಂದು

    ಸೇವಾ ಸಿಂಧು ಸರ್ವರ್ ಬ್ಯುಸಿಯಿಂದಾಗಿ ಪರದಾಡಿದ ಜನರು

    ಕಾದು ಕಾದು ಸುಸ್ತು, ಅಧಿಕಾರಿಗಳ ವಿರುದ್ದ ಜನರ ಆಕ್ರೋಶ

ಇಂದಿನಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭಗೊಂಡಿದೆ ಎಂದು ರಾಜ್ಯ ಸರ್ಕಾರ ಪ್ರಕಟನೆ ಹೊರಡಿಸಿತ್ತು. ಗೃಹಜ್ಯೋತಿ ಯೋಜನೆ ಅಡಿ ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿತ್ತು. ಆದರೆ ಪೋರ್ಟಲ್ ಒಪನ್ ಆದ ಕೆಲವೇ ಗಂಟೆಗಳಲ್ಲಿ ವೆಬ್ ಸೈಟ್ ಕ್ಲೋಸ್ ಆಗಿದೆ. ಅರ್ಜಿ ಸಲ್ಲಿಕೆಯ ಆರಂಭದಲ್ಲಿ ಸರ್ವರ್ ಬ್ಯುಸಿ ಎಂದು ಕಾಣಿಸಿಕೊಂಡಿದೆ.

ಸೇವಾ ಸಿಂಧು ಆ್ಯಪ್ ಮೂಲಕ ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಸಬೇಕಿತ್ತು. ಆದರೆ ಎಲ್ಲಾ ಕಚೇರಿಗಳಲ್ಲಿ ಸರ್ವರ್ ಡೌನ್ ಆಗಿದೆ. ಬೆಂಗಳೂರು ಒನ್, ಬೆಸ್ಕಾಂ ಆಫೀಸ್ ಗಳಲ್ಲಿ ಸರ್ವಾರ್ ಡೌನ್ ಆಗಿದೆ. ಇದರಿಂದ ಅರ್ಜಿ ಹಾಕಲು ಬಂದ ಜನರು ಬೇಸತ್ತಿದ್ದಾರೆ. ವೆಬ್​ ಸೈಟ್ ಒಪನ್ ಆಗದೆ ಕಾದು ಕಾದು ಸುಸ್ತಾಗಿದ್ದಾರೆ. ಮಾತ್ರವಲ್ಲದೆ, ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Gruha Jyothi Scheme: ಸೇವಾ ಸಿಂಧು ಪೋರ್ಟಲ್ ಡೌನ್​.. ಪರದಾಡಿದ ಜನರು

https://newsfirstlive.com/wp-content/uploads/2023/06/Seva-Sindhu-1.jpg

Load More