newsfirstkannada.com

ಗೃಹಲಕ್ಷ್ಮಿಗೆ ಗ್ರಹಣ, ಅಖಾಡಕ್ಕಿಳಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್.. 15 ದಿನದಲ್ಲಿ ಬ್ಯಾಂಕ್​ ಅಕೌಂಟ್​ಗೆ ಹಣ ಜಮಾ ಆಗುತ್ತಾ?

Share :

Published November 9, 2023 at 5:56am

    ಗೃಹಲಕ್ಷ್ಮಿ ಪ್ರತಿ ಮನೆಯ ಯಜಮಾನಿಗೆ 2 ಸಾವಿರ ಹಣ ನೀಡುವ ಯೋಜನೆ

    ಬೆಂಗಳೂರು-1​ ಕೇಂದ್ರಕ್ಕೆ ತೆರಳಿ ಪರಿಶೀಲನೆ ನಡೆಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​

    1 ಕೋಟಿ 16 ಲಕ್ಷಕ್ಕು ಹೆಚ್ಚು ಮಹಿಳೆಯರು ಇದಕ್ಕೆ ನೋಂದಾಯಿಸಿಕೊಂಡಿದ್ರು

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಗೃಹಲಕ್ಷ್ಮಿಗೆ ಗ್ರಹಣ ಹಿಡಿದಂತಾಗಿದೆ. ಯೋಜನೆ ಜಾರಿಯಾಗಿ 3 ತಿಂಗಳು ಕಳೆದಿದ್ರೂ ಹಲವರ ಖಾತೆಗೆ ಹಣ ಜಮೆ ಆಗದೇ ಇರೋದು ಗೊಂದಲ ಮೂಡಿಸಿದೆ. ಈ ಮಧ್ಯೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೊಂದಲ ಬಗೆಹರಿಸಲು ಮುಂದಾಗಿದ್ದು, ಎಲ್ಲವೂ ಅಂದುಕೊಂಡಂತೆ ಆದ್ರೆ ಶೀಘ್ರದಲ್ಲೇ ಎಲ್ಲ ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಲಿದೆ.

ಸಿದ್ದರಾಮಯ್ಯ ಸರ್ಕಾರ ನೀಡಿದ್ದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಪ್ರತಿ ಮನೆಯ ಯಜಮಾನಿಗೆ 2 ಸಾವಿರ ಹಣ ನೀಡುವ ಯೋಜನೆ. ಕಳೆದ ಆಗಸ್ಟ್​ 30 ಯೋಜನೆ ಚಾಲನೆ ಸಿಕ್ಕಿದ ಬಳಿಕ 1 ಕೋಟಿ 16 ಲಕ್ಷಕ್ಕೂ ಹೆಚ್ಚು ಮಹಿಳೆಯರು ನೋಂದಾಯಿಸಿಕೊಂಡಿದ್ದರು. ಇದರಲ್ಲಿ ಕೆಲವರಿಗೆ ಮಾತ್ರ ಹಣ ಸಂದಾಯ ಆಗ್ತಿದೆ. ಹಣ ಸಿಗದವರು ಕಚೇರಿಗೆ ಅಲೆದು ಸುಸ್ತಾಗಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಗ್ರಹಣ ಹಿಡಿದಂತಾಗಿದೆ.

ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷ್ಮಿ ಯೋಜನೆಗೆ ಹಿಡಿದಿದ್ದ ಗ್ರಹಣಕ್ಕಿಲ್ವಾ ಮೋಕ್ಷ?

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಯೋಜನೆಗೆ ಶೇ.100ರಷ್ಟು ಯಶಸ್ವಿಯಾಗಿಲ್ಲ ಅನ್ನೋ ಮಾತುಗಳು ಕೇಳಿಬಂದಿವೆ. ಶೇ.88ರಷ್ಟು ಮಹಿಳೆಯರು ಮೊದಲ ತಿಂಗಳ ಹಣ ಪಡೆದುಕೊಂಡಿದ್ದಾರೆ. ಆದ್ರೆ ನಂತರ ಹಣ ತಲುಪಿಲ್ಲ ಅನ್ನೋದು ಬಹುತೇಕ ಮಹಿಳೆಯರ ಅಳಲಾಗಿದ್ದು ಈ ಎಲ್ಲಾ ದೂರುಗಳ ಬಳಿಕ ಖುದ್ದು ಅಖಾಡಕ್ಕಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಇವತ್ತು ಮಲ್ಲೇಶ್ವರಂನಲ್ಲಿರುವ ಬೆಂಗಳೂರು ಒನ್​ ಕೇಂದ್ರಕ್ಕೆ ತೆರಳಿ ಪರಿಶೀಲನೆ ನಡೆಸಿದ್ರು. ತಾಂತ್ರಿಕ ‌ದೋಷ, ಸಿಬ್ಬಂದಿ ಕಾರ್ಯವೈಖರಿ, ಗೃಹಲಕ್ಷ್ಮಿ ಅರ್ಜಿ ವಿಲೇವಾರಿ ವಿಳಂಬದ ಬಗ್ಗೆ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

15 ದಿನಗಳಲ್ಲಿ ಫಲಾನುಭವಿಗಳ ಖಾತೆ ಹಣ ಜಮೆ ಎಂದ ಸಚಿವೆ

ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ 15 ದಿನಗಳಲ್ಲಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆ ಆಗಲಿದೆ ತಾಂತ್ರಿಕ ಸಮಸ್ಯೆಯಿಂದಾಗಿ ಮಹಿಳೆಯರ ಖಾತೆಗೆ ಹಣ ಹೋಗಿಲ್ಲ. ಬ್ಯಾಂಕ್‌ ಖಾತೆಗೆ ಆಧಾರ್ ಲಿಂಕ್ ಆಗದಿರೋದು. ಒಂದಕ್ಕಿಂತ ಹೆಚ್ಚು ಖಾತೆ, ನೋಂದಣಿ ವೇಳೆ ನೀಡಿರುವುದು ಬೇರೊಂದು ಖಾತೆ, ಬ್ಯಾಂಕ್‌ ಖಾತೆಗೆ ಕೆವೈಸಿ ಮಾಡಿಸದಿರುವುದು, ಪಡಿತರ ಚೀಟಿಯಲ್ಲಿ ಯಜಮಾನಿಯರ ಹೆಸರು ಎಲ್ಲರಿಗಿಂತ ಮೊದಲು ಇಲ್ಲದಿರುವುದು ಈ ಕಾರಣಗಳಿಂದ ಗೃಹಲಕ್ಷ್ಮಿ ಹಣ ಕೆಲವರಿಗೆ ತಲುಪಿಲ್ಲ ಈ ಎಲ್ಲ ಲೋಪಗಳನ್ನು ಸರಿಪಡಿಸಿ 10-15 ದಿನಗಳಲ್ಲಿ ಹಣ ಬಿಡುಗಡೆ ಮಾಡಲಾಗುವುದು ಅಂತ ಸಚಿವೆ ಹೇಳಿದ್ದಾರೆ.

ಇನ್ನು ಗೃಹಲಕ್ಷ್ಮಿ ಯೋಜನೆ ಆರಂಭ ಆಗಿ 3 ತಿಂಗಳು ಕಳೆದಿದೆ. ಆಗಸ್ಟ್ 15ರೊಳಗೆ ನೋಂದಣಿ ಮಾಡಿಸಿದವರಿಗೆ ಹಣ ಜಮೆ ಆಗಿದೆ. ಒಂದು ವೇಳೆ ಹಣ ಬಾರದಿದ್ರೆ 3 ತಿಂಗಳ ಬಾಕಿ ಒಟ್ಟು 6 ಸಾವಿರ ಹಣವನ್ನು ಜಮೆ ಮಾಡಲಾಗುತ್ತೆ ಅಂತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಇನ್ನು ಈ ನೂನ್ಯತೆಗಳನ್ನು ಸರಿಪಡಿಸಲು ಇಲಾಖೆ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಮನೆ ಮನೆಗೆ ತೆರಳಿ ಸರಿಪಡಿಸುವಂತೆ ಸೂಚಿಸಿದ್ದಾರೆ.

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಅನ್ನಭಾಗ್ಯ ಹೊರತು ಪಡಿಸಿದರೆ ಗೃಹಲಕ್ಷ್ಮೀ ಯೋಜನೆ ಬಹಳ ಪ್ರಮುಖವಾಗಿದೆ. ಇನ್ನು 15 ದಿನಗಳಲ್ಲಿ ಗೃಹಲಕ್ಷ್ಮಿ ಹಣ ಖಾತೆಗೆ ಬರಲಿದ್ಯಾ ಅನ್ನೋದನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೃಹಲಕ್ಷ್ಮಿಗೆ ಗ್ರಹಣ, ಅಖಾಡಕ್ಕಿಳಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್.. 15 ದಿನದಲ್ಲಿ ಬ್ಯಾಂಕ್​ ಅಕೌಂಟ್​ಗೆ ಹಣ ಜಮಾ ಆಗುತ್ತಾ?

https://newsfirstlive.com/wp-content/uploads/2023/08/GRUHALAXMI-1-1.jpg

Load More