GSLV-F15: ಸಾಧನೆಯಲ್ಲಿ ಇಸ್ರೋ ಮತ್ತೊಂದು ಮೈಲಿಗಲ್ಲು.. ಉಡಾವಣೆಗೆ ಈಗ ಶತಕದ ಸಂಭ್ರಮ

author-image
Ganesh
Updated On
GSLV-F15: ಸಾಧನೆಯಲ್ಲಿ ಇಸ್ರೋ ಮತ್ತೊಂದು ಮೈಲಿಗಲ್ಲು.. ಉಡಾವಣೆಗೆ ಈಗ ಶತಕದ ಸಂಭ್ರಮ
Advertisment
  • NVS-02 ಉಪಗ್ರಹ ಯಶಸ್ವಿ ಉಡಾವಣೆ ಮಾಡಿದ ಇಸ್ರೋ
  • ಶ್ರೀಹರಿಕೋಟದ 2ನೇ ಲಾಂಚ್​​ ಪ್ಯಾಡ್​ನಿಂದ ಉಡಾವಣೆ
  • ಅಧ್ಯಕ್ಷ ವಿ.ನಾರಾಯಣನ್ ನೇತೃತ್ವದ ಮೊದಲ ಕಾರ್ಯಾಚರಣೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಇಸ್ರೋ ಮಹತ್ವಾಕಾಂಕ್ಷೆಯ ನೂರನೇ ರಾಕೆಟ್ NVS-02 ಉಡಾವಣೆ ಮಾಡಿದೆ. ಇಸ್ರೋ ಉಡಾವಣೆಗೆ ಈಗ ಶತಕದ ಸಂಭ್ರಮವಾಗಿದೆ.

ಇಂದು ಬೆಳಗ್ಗೆ ಸರಿಯಾಗಿ 6.23ಕ್ಕೆ NVS-02 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಿದೆ. ನಾವಿಕ್ ಯೋಜನೆಯ ಎರಡನೇ ತಲೆಮಾರಿನ ಉಪಗ್ರಹ ಇದಾಗಿದೆ.

ಇದನ್ನೂ ಓದಿ: ATM ಮೂಲಕ PF ಹಣ ಡ್ರಾ..! ಗ್ರಾಹಕರಿಗೆ ಭರ್ಜರಿ ಗುಡ್​ನ್ಯೂಸ್​..!

ಇಸ್ರೋ ನೂತನ ಅಧ್ಯಕ್ಷ ವಿ.ನಾರಾಯಣನ್ ನೇತೃತ್ವದಲ್ಲಿ ಉಡಾವಣೆಯಾದ ಮೊದಲ ಮಿಷನ್ ಇದಾಗಿದೆ. ‘ನ್ಯಾವಿಗೇಷನ್ ವಿತ್ ಇಂಡಿಯನ್‌ ಕಾನ್‌ಸ್ಟೆಲೇಷನ್’ (NAVIC) ಸರಣಿಯ ಎರಡನೇ ಉಪಗ್ರಹ. ಇದು ಭಾರತೀಯ ಉಪಖಂಡದ ಬಳಕೆದಾರರಿಗೆ ನಿಖರವಾದ ಸ್ಥಾನ, ವೇಗ ಮತ್ತು ಸಮಯದ ಮಾಹಿತಿಯನ್ನು ಒದಗಿಸುವ ಗುರಿ ಹೊಂದಿದೆ.

NVS-02 ಉಪಗ್ರಹ ಎಂದರೇನು?

ಇದನ್ನು NavIC ವ್ಯವಸ್ಥೆಯ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಹೊಸ ಪೀಳಿಗೆಯ ನ್ಯಾವಿಗೇಷನ್ ಉಪಗ್ರಹಗಳಲ್ಲಿ NVS-02 ಎರಡನೆಯ ಉಪಗ್ರಹ. ಬರೋಬ್ಬರಿ 2,250 ಕೆಜಿ ತೂಕವನ್ನು ಹೊಂದಿದೆ. ನಿಖರವಾದ ನ್ಯಾವಿಗೇಷನ್ ಸೇವೆಗಳನ್ನು ಒದಗಿಸುತ್ತದೆ. ಮಿಲಿಟರಿ ಬಳಕೆ ಮತ್ತು ಸಾರಿಗೆ ಮತ್ತು ಕೃಷಿಯಲ್ಲಿ ನಾಗರಿಕ ಬಳಕೆಗೆ ಪ್ರಮುಖ ಸಾಧನೆಯಾಗಿದೆ. NavIC ಎಂಬುವುದು ಏಳು ಉಪಗ್ರಹಗಳ ಸಂಯೋಜನೆಯಾಗಿದೆ.

ಇದನ್ನೂ ಓದಿ: Smart phone, ಸ್ಮಾರ್ಟ್​ TV ಖರೀದಿ ಪ್ಲಾನ್​​ನಲ್ಲಿ ಇದ್ದೀರಾ..? ಸ್ವಲ್ಪ ಕಾಯಿರಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment