/newsfirstlive-kannada/media/post_attachments/wp-content/uploads/2025/02/Kerala-GST-Commissioner-1.jpg)
ಕೇರಳದ ಕೊಚ್ಚಿಯಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದು, 4 ದಿನದ ಬಳಿಕ ಮನೆಯಿಂದ ಕೆಟ್ಟ ವಾಸನೆ ಬಂದು ಘೋರ ದುರಂತವೊಂದು ಬೆಳಕಿಗೆ ಬಂದಿದೆ. ಮೃತರನ್ನು GST ಅಡಿಷನಲ್ ಕಮಿಷನರ್ ಮನೀಶ್ ಅವರ ಕುಟುಂಬ ಎಂದು ಗುರುತಿಸಲಾಗಿದೆ.
GST ಅಡಿಷನಲ್ ಕಮಿಷನರ್ ಮನೀಶ್ ಅವರು 4 ದಿನವಾದರೂ ಕಚೇರಿಗೆ ಬಂದಿರಲಿಲ್ಲ. ಅನುಮಾನಗೊಂಡ ಸಹೋದ್ಯೋಗಿ ಸಂಪರ್ಕಿಸಿದರೂ ಸಾಧ್ಯವಾಗಿಲ್ಲ. ಕೊನೆಗೆ ಮನೆ ಬಳಿ ಹೋಗಿ ನೋಡಿದಾಗ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮನೆಯನ್ನು ಪರಿಶೀಲಿಸಿದಾಗ ಮೂವರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಮೊದಲಿಗೆ ತಾಯಿಯನ್ನು ಹತ್ಯೆಗೈದು ಬಳಿಕ ಮನೀಶ್, ಶಾಲಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಅಡಿಷನಲ್ ಕಮಿಷನರ್ ಮನೀಶ್ ಕೊಚ್ಚಿಯಲ್ಲಿ ನೆಲೆಸಿದ್ದು, ತಾಯಿ ಮತ್ತು ಸಹೋದರಿ ಶಾಲಿನಿ ಜೊತೆ ಸಾವಿಗೆ ಶರಣಾಗಿದ್ದಾರೆ. ಒಂದೇ ಕುಟುಂಬದ ಮೂವರ ಈ ದುರಂತ ಬೆಚ್ಚಿ ಬೀಳಿಸುವಂತಿದೆ.
ಇದನ್ನೂ ಓದಿ: Elephants: ದಾರುಣ ಘಟನೆ.. ಭೀಕರ ರೈಲು ಡಿಕ್ಕಿಗೆ 6 ಆನೆಗಳು ಸ್ಥಳದಲ್ಲೇ ಸಾವು
ಘೋರ ದುರಂತಕ್ಕೆ ಕಾರಣವೇನು?
ಜಾರ್ಖಂಡ್ ರಾಜ್ಯದವರಾದ ಮನೀಶ್ ಕೇರಳದ ಕೊಚ್ಚಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮನೀಶ್ ಸಹೋದರಿ ಶಾಲಿನಿ ಅವರು ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆ ಪಾಸಾಗಿದ್ದರು. ಆದರೆ ಆ ಪರೀಕ್ಷೆಯಲ್ಲಿ ಹಗರಣ ಬೆಳಕಿಗೆ ಬಂದು ಸಿಬಿಐ ತನಿಖೆ ನಡೆಯುತ್ತಿತ್ತು. ಇದರಿಂದ ನೊಂದು ಇಡೀ ಕುಟುಂಬ ಈ ನಿರ್ಧಾರಕ್ಕೆ ಬಂದಿರುವ ಸಾಧ್ಯತೆ ಇದೆ.
ಮನೀಶ್ ಸೋದರ, ಸೋದರಿಯರು ವಿದೇಶದಲ್ಲಿದ್ದು, ಅವರ ಆಗಮನಕ್ಕಾಗಿ ಕೊಚ್ಚಿ ಪೊಲೀಸರು ಕಾಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ವಿದೇಶದಲ್ಲಿರುವ ಸೋದರ, ಸೋದರಿಯರಿಗೆ ಶವ ಹಸ್ತಾಂತರ ಮಾಡಲು ನಿರ್ಧಾರ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ