/newsfirstlive-kannada/media/post_attachments/wp-content/uploads/2024/10/MYS_DASARA_HDK.jpg)
ಮೈಸೂರು: ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟು ಸಿಎಂ ಸಿದ್ದರಾಮಯ್ಯ ಪರ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಬ್ಯಾಟ್ ಬೀಸಿದ್ದಾರೆ.
ಮೈಸೂರಿನ ದಸರಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ.ಟಿ ದೇವೇಗೌಡ.. ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ರಾಜೀನಾಮೆ ಕೊಡುವುದಾದರೆ ಎಫ್ಐಆರ್ ಆಗಿರುವ ಎಲ್ಲಾ ನಾಯಕರೂ ರಾಜೀನಾಮೆ ಕೊಡಲಿ. ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು? ಕೇಂದ್ರ ಸಚಿವರಾದ ಹೆಚ್​.ಡಿ ಕುಮಾರಸ್ವಾಮಿ ರಾಜೀನಾಮೆ ಕೊಡುತ್ತಾರಾ ಎಂದು ರಾಜ್ಯಪಾಲ ಹಾಗೂ ಮೈತ್ರಿ ನಾಯಕರ ವಿರುದ್ಧ ಸಮಾರಂಭದಲ್ಲಿ ಜಿ.ಟಿ ದೇವೇಗೌಡ ಕಿಡಿಕಾರಿದ್ದಾರೆ.
ಇದನ್ನೂ ಓದಿ:ವಿಶ್ವವಿಖ್ಯಾತ ದಸರಾಗೆ ಸಂಭ್ರಮದ ಚಾಲನೆ.. ಕೆಂಪು ಸೀರೆ, ಹೂವುಗಳಲ್ಲಿ ಕಂಗೊಳಿಸಿದ ತಾಯಿ ಚಾಮುಂಡೇಶ್ವರಿ
ಸಿದ್ದರಾಮಯ್ಯ ಯಾವತ್ತೂ ಕುಟುಂಬ ನೋಡಿದವರಲ್ಲ. ಈಗ ಎಲ್ಲಾ ಗಾಜಿನ ಮನೆಯಲ್ಲಿ ಕುಳಿತ್ತಿದ್ದಾರೆ. ಎಫ್​ಐಆರ್ ಆದವರು ರಾಜೀನಾಮೆ ಕೊಡಬೇಕಾಗಿದ್ದರೆ ಜೆಡಿಎಸ್​ನಲ್ಲಿ ಇರುವರು ಕೊಡಲಿ. ರಾಜೀನಾಮೆ ಕೊಡು ಅಂತ ಕೋರ್ಟ್​ ಹೇಳಿದೆಯಾ? ಕೇಂದ್ರದಲ್ಲಿ ಮಂತ್ರಿ ಆದವರಿಗೆ ಜವಾಬ್ದಾರಿ ಬೇಡವಾ? ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿಗೆ ರಾಜೀನಾಮೆ ಕೊಡು ಅಂದರೆ ಕೊಡುತ್ತಾರಾ? ಎಂದು ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.
136 ಸ್ಥಾನ ಗೆದ್ದು ಸಿಎಂ ಆಗಿರುವ ಸಿದ್ದರಾಮಯ್ಯ ರಾಜೀನಾಮೆ ಕೊಡಲು ಆಗುತ್ತಾ? ರಾಜೀನಾಮೆ ಕೊಡಿ, ರಾಜೀನಾಮೆ ಕೊಡಿ ಅಂದರೆ ಕೊಡುವುದಕ್ಕೆ ಆಗುತ್ತಾ? ಯಾರ ಯಾರ ಮೇಲೆ ಎಫ್​ಐಆರ್ ಆಗಿದೆಯೋ ಅವರೆಲ್ಲ ರಾಜೀನಾಮೆ ಕೊಡಲಿ. ಎಲ್ಲರೂ ವಿಧಾನಸೌಧದ ಮುಂದೆ ನಿಂತುಕೊಳ್ಳಿ. ಕೇಂದ್ರದಿಂದ ರಾಜ್ಯಕ್ಕೆ ಏನೇನು ಅನುದಾನ ತರಬೇಕು ಅದನ್ನು ನೋಡಿ. ಅದು ಬಿಟ್ಟು ಬರೀ ರಾಜೀನಾಮೆ ರಾಜೀನಾಮೆ ಕೇಳುತ್ತಾ ಕುಳಿತರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಮೈಸೂರು ಮಹರಾಜರು ಕಟ್ಟಿದ್ದ ನಾಡು. ದಸರಾ ಉದ್ಘಾಟಕರ ಆಯ್ಕೆ ಮುಖ್ಯಮಂತ್ರಿಗಳಿಗೆ ಬಿಟ್ಟು ಕೊಡಲಾಗಿತ್ತು. ಹಂ.ಪ ನಾಗರಾಜಯ್ಯ ಅವರ ಆಯ್ಕೆ ಉತ್ತಮವಾಗಿದೆ. ಯಾವುದೇ ವಿವಾದಗಳಿಲ್ಲದ ಸಾಹಿತಿ. ಅವರಿಗೆ ಚಾಮುಂಡೇಶ್ವರಿ ತಾಯಿ ಆಯಸ್ಸು, ಆರೋಗ್ಯ ಕರುಣಿಸಲಿ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಮೂಲ ಕಾರಣ. ಸಚಿವ ಮಹದೇವಪ್ಪ ಎಲ್ಲಾ ಸಚಿವ ಸ್ಥಾನವನ್ನ ಪಡೆದಿದ್ದಾರೆ. ಒಬ್ಬ ದಲಿತ ನಾಯಕನನ್ನ ರಾಜ್ಯ ಮಟ್ಟಕ್ಕೆ ತಂದಿದ್ದು ಸಿದ್ದರಾಮಯ್ಯ ಎಂದು ದಸರಾ ವೇದಿಕೆಯಲ್ಲಿ ಕಾಂಗ್ರೆಸ್ ನಾಯಕರನ್ನು ಜಿ.ಟಿ ದೇವೇಗೌಡ ಅವರು ಹಾಡಿ ಹೊಗಳಿದ್ದಾರೆ.
ಇದನ್ನೂ ಓದಿ: ಮುಡಾ ಪ್ರಕರಣ; ಪಾರ್ವತಿ ಸಿದ್ದರಾಮಯ್ಯ ಬರೆದ ಪತ್ರದಲ್ಲಿ ಏನಿದೆ.. ಪತ್ನಿಗೆ CM ಏನಂದ್ರು?
ಸಿದ್ದರಾಮಯ್ಯ ಚಾಮುಂಡೇಶ್ವರಿ ತಾಯಿಯ ವರಪುತ್ರರು ಹೌದು. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕಾಲಿಟ್ಟ ದಿನಗಳಿಂದ ಸಿದ್ದರಾಮಯ್ಯ ಸಚಿವರಾಗಿ, ಡಿಸಿಎಂ ಆಗಿ, 2 ಭಾರಿ ಸಿಎಂ ಆಗಿದ್ದಾರೆ ಎಂದರೆ ಅದಕ್ಕೆ ಕಾರಣ ತಾಯಿ ಚಾಮುಂಡೇಶ್ವರಿ ಆಶೀರ್ವಾದ. ಎಂತಹ ಸಂದರ್ಭದಲ್ಲಿಯೂ ಚಾಮುಂಡಿ ಅವರ ಪಾಲಿಗೆ ನಿಂತಿದ್ದಾಳೆ. ಸಿದ್ದರಾಮಯ್ಯರನ್ನು ಉಪಚುನಾವಣೆಯಲ್ಲಿ ಸೋಲಿಸಲು ತೀರ್ಮಾನ ಆಗಿತ್ತು. ಆದರೆ ಬೈ-ಎಲೆಕ್ಷನ್​ನಲ್ಲಿ ಅವರು ಗೆದ್ದರು. ಇದಕ್ಕೆಲ್ಲ ಕಾರಣ ದೇವಿ ಚಾಮುಂಡಿ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ