ಪಂಚೆ ತೊಟ್ಟ ರೈತನಿಗೆ G T ಮಾಲ್​ ಅಪಮಾನ; ತಕ್ಕಪಾಠ ಕಲಿಸಿದ BBMP; 7 ದಿನಗಳ ಕಾಲ ಬಂದ್​​!

author-image
AS Harshith
Updated On
ಪಂಚೆ ಅನ್ನೋ ಹೆಸರು ಹುಟ್ಟಿಕೊಂಡಿದ್ದು ಹೇಗೆ? ಪವರ್​​ಫುಲ್​​​ ಪಂಚೆ ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು?
Advertisment
  • ಪಂಚೆ ಉಟ್ಟು ಮಾಲ್​ ಸುತ್ತಲು ಬಂದ ರೈತನಿಗೆ ಅಪಮಾನ
  • ಧೋತಿ ಉಟ್ಟಿದ್ದಕ್ಕೆ ಮಾಲ್​ ಒಳಕ್ಕೆ ನೋ ಎಂಟ್ರಿ ಎಂದ ಸೆಕ್ಯುರಿಟಿ
  • ರೈತನಿಗೆ ಅಪಮಾನ ಮಾಡಿದಕ್ಕೆ ತಕ್ಕಪಾಠ ಕಲಿಸಿದ ಬಿಬಿಎಂಪಿ

ಬೆಂಗಳೂರು: ಧೋತಿ ಉಟ್ಟು ಬಂದ ರೈತನಿಗೆ ಜಿ.ಟಿ ಮಾಲ್​ ಪ್ರವೇಶ ನಿರಾಕರಿಸಿ ಅಪಮಾನ ಮಾಡಿತ್ತು. ಪಂಚೆ ತೊಟ್ಟ ಪ್ರಾಯಸ್ತ ವ್ಯಕ್ತಿಗೆ ನೋ ಎಂಟ್ರಿ ಎಂದು ಹೇಳಿತ್ತು. ಆದರೀಗ ರೈತನಿಗೆ ಅಪಮಾನ ಮಾಡಿದ ಜಿ.ಟಿ ಮಾಲ್​ಗೆ ಸರ್ಕಾರ ತಕ್ಕಪಾಠ ಕಲಿಸಲು ಮುಂದಾಗಿದೆ.

ಹೌದು. ರೈತನಿಗೆ ಅಪಮಾನ ಮಾಡಿದ ಜಿ.ಟಿ. ಮಾಲ್ ವಿರುದ್ಧ ಬಿಬಿಎಂಪಿ ಕ್ರಮ ಕೈಗೊಂಡಿದೆ. 7 ದಿನಗಳ ಕಾಲ ಮಾಲ್​ ಕ್ಲೋಸ್ ಮಾಡಲು ಬಿಬಿಎಂಪಿ ಮುಂದಾಗಿದೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ಪ್ರಕರಣ: 7ನೇ ಮೃತದೇಹ ಪತ್ತೆ, ನದಿ ನೀರಿನಲ್ಲಿ ಸಿಕ್ತು ಟ್ಯಾಂಕರ್​​ ಚಾಲಕನ ಶವ 

ಸರ್ಕಾರ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ ಸೂಚನೆ ಮೇರೆಗೆ ಜಿ.ಟಿ.ಮಾಲ್ ಮೇಲೆ ಕ್ರಮ ಕೈಗೊಳ್ಳಲಿದ್ದಾರೆ. ವಲಯ ಆಯುಕ್ತರ ತಂಡ ಕೆಲವೇ ಹೊತ್ತಲ್ಲಿ ಜಿ.ಟಿ. ಮಾಲ್ ಗೆ ತೆರಳಲಿದ್ದು, ಬಳಿಕ ಜಿ.ಟಿ ಮಾಲ್​ ಅನ್ನು ಒಂದು ವಾರಗಳ ಕಾಲ ಲಾಕ್​ ಮಾಡಲಿದ್ದಾರೆ.

ವಿಧಾನ ಸೌಧ ಮೆಟ್ಟಿಲೇರಿದ ಪಂಚೆ ಮ್ಯಾಟ್ರು

ಇಂದು ನಡೆದ ಸದನದಲ್ಲೂ ಇದೇ ವಿಚಾರದ ಕುರಿತು ಚರ್ಚೆ ನಡೆದಿದೆ. ಸಚಿವ ಭೈರತಿ ಸುರೇಶ್ ಕೂಡ ಈ ವಿಚಾರವಾಗಿ ಮಾತನಾಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇದೆ ಎಂದು ಹೇಳಿದ್ದಾರೆ ಎಂದು ಸದನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ನಿಲ್ಲದ ಮಳೆರಾಯನ ಅಟ್ಟಹಾಸ: ಉ.ಕನ್ನಡ ಜಿಲ್ಲೆಯಲ್ಲಿ ಕುಸಿಯಲಿವೆಯಾ ಮತ್ತಷ್ಟು ಗುಡ್ಡಗಳು..?

ಏನಿದು ಘಟನೆ?

ಹಾವೇರಿ ಜಿಲ್ಲೆಯ ಅರೇಮಲ್ಲಾಪುರ ಗ್ರಾಮದ ನಾಗರಾಜ್​ ತಮ್ಮ ತಂದೆ ತಾಯಿ ಜೊತೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರೋ ಜಿ.ಟಿ. ಮಾಲ್‌ಗೆ ಸಿನಿಮಾ ನೋಡೋಕೆ ಬಂದಿದ್ರು. ಹೀಗೆ ಮಾಲ್‌ ಒಳಗೆ ಎಂಟ್ರಿ ಕೊಡ್ತಿದ್ದಂತೆ ಸೆಕ್ಯೂರಿಟಿ ಸಿಬ್ಬಂದಿ ನಾಗರಾಜ್ ತಂದೆ ಪಂಚೆ ತೊಟ್ಟಿದ್ದಾರೆ. ಮಾಲ್‌ನ ಒಳಗೆ ಪಂಚೆ ತೊಟ್ಟವರಿಗೆ ಪ್ರವೇಶವಿಲ್ಲ ಅಂತ ಅಲ್ಲೇ ತಡೆದಿದ್ದಾರೆ. ಇದನ್ನ ಪ್ರಶ್ನಿಸಿದ ಬಳಿಕ ಎಂಟ್ರಿ ಕೊಟ್ಟ ಮಾಲ್ ಮ್ಯಾನೇಜರ್‌ ಕೂಡಾ ಅದೇ ರಾಗ ತೆಗೆದಿದ್ದರು.

style="display:block; text-align:center;"
data-ad-layout="in-article"
data-ad-format="fluid"
data-ad-client="ca-pub-5961669566246184"
data-ad-slot="4722125161">

ಇದನ್ನೂ ಓದಿ: ಅದಕ್ಕೆಲ್ಲ ನೋ ಟೆನ್ಶನ್​! ಯಾಕಂದ್ರೆ ಏಕ್ಸ್​ಪೆನ್ಸಿವ್​ ಟೈಮನ್ನೇ ಹಿಡಿದಿಟ್ಟುಕೊಂಡಿದ್ದಾರೆ ಪಾಂಡ್ಯ​!

ಅಷ್ಟೇ ಅಲ್ಲ. ಸುಮಾರು ಅರ್ಧ ಗಂಟೆಗಳ ಕಾಲ ಮಾಲ್ ಒಳಗೆ ಬಿಡದೇ ಸಿಬ್ಬಂದಿ ಸತಾಯಿಸಿದ್ದಾರೆ. ಸಿನಿಮಾ ವೀಕ್ಷಣೆಗೆ ಹೋಗಲೂ ಬಿಡದೇ ಗೇಟ್ ಬಳಿಯೇ ಕೂರಿಸಿ ಅವಮಾನ ಮಾಡಿದ್ದಾರೆ. ಇದನ್ನೆಲ್ಲಾ ಕಂಡು ವೃದ್ಧನ ಪುತ್ರ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದರು. ಮಾಲ್‌ ಸಿಬ್ಬಂದಿ ತೋರಿದ ದರ್ಪವನ್ನೆಲ್ಲಾ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದ್ದರು.

ಇಷ್ಟೆಲ್ಲಾ ಆದ್ಮೇಲೆ ಕಾಯಿಸಿ ಸತಾಯಿಸಿ ಒಳಬಿಟ್ಟಿದ್ದಾರೆ. ಬಳಿಕ ನ್ಯೂಸ್‌ಫಸ್ಟ್ ಜೊತೆ ಮಾತನಾಡಿದ ತಂದೆ-ಮಗ ತಮಗಾದ ಅಪಮಾನವನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು.


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment