ಮುಂಬೈಯಲ್ಲಿ ಹಿಟ್​ಮ್ಯಾನ್ ಅಟ್ಯಾಕ್ ಮಾಡ್ತಿಲ್ಲ, ಸೂರ್ಯ ಬೆಳಗ್ತಿಲ್ಲ.. ಗಿಲ್ ತಂಡದಲ್ಲೂ ವೀಕ್ನೆಸ್!

author-image
Bheemappa
Updated On
ರೋಹಿತ್ ​ಸೂಚನೆಯಂತೆ ರಿಟೈನ್ ಲಿಸ್ಟ್ ಹೊರ ಬಿತ್ತಾ.. ಈ ಪ್ಲೇಯರ್ಸ್ ಹೆಸರು ಆಯ್ಕೆ ಆಗಿದ್ದು ಹೇಗೆ?
Advertisment
  • ಮುಂಬೈ ಇಂಡಿಯನ್ಸ್​ಗೆ ರೋಹಿತ್ ಶರ್ಮಾನೇ ವಿಲನ್ ಆಗುತ್ತಿದ್ದಾರಾ?
  • ಜೋಸ್​​​​​​​​​​ ಬಟ್ಲರ್, ಕ್ಯಾಪ್ಟನ್​ ಶುಭ್​ಮನ್ ಬ್ಯಾಟಿಂಗ್ ಅಬ್ಬರ ಕನ್ಫ್​ರ್ಮ್​
  • ಗುಜರಾತ್ ಟೈಟನ್ಸ್​ ಬ್ಯಾಟಿಂಗ್ ಓಕೆ, ಆದರೆ, ಬೌಲಿಂಗ್​ನಲ್ಲಿ ಹೇಗಿದೆ..?

ಇವತ್ತು ಐಪಿಎಲ್​ ಅಖಾಡದಲ್ಲಿ ಸೋತವರ ಕದನ ನಡೀತಿದೆ. ಗುಜರಾತ್ ಟೈಟನ್ಸ್​, ಮುಂಬೈ ಇಂಡಿಯನ್ಸ್ ತಂಡಗಳು ಇಂದು ಮುಖಾಮುಖಿ ಆಗಲಿವೆ. ಇವತ್ತಿನ ಈ ಕದನಲ್ಲಿ ಸೂಪರ್​ ಸ್ಟಾರ್ ಆಟಗಾರರೇ ಸೆಂಟರ್ ಆಫ್ ಅಟ್ರಾಕ್ಷನ್. ಸ್ಟಾರ್​ಗಳ ಈ ಬ್ಯಾಟಲ್​ನಲ್ಲಿ ಯಾರಿಗೆ ಗೆಲುವು ಅನ್ನೋದೆ ಕುತೂಹಲ.

ಒಂದೆಡೆ ತವರಿನಲ್ಲಿ ಪಂಜಾಬ್ ಪವರ್ ಮುಂದೆ ಸೋಲಿನ ಮುಖಭಂಗ ಅನುಭವಿಸಿದ ಗುಜರಾತ್ ಟೈಟನ್ಸ್​. ಮತ್ತೊಂದ್ಕಡೆ ಚೆಪಾಕ್​ನಲ್ಲಿ ಚೆನ್ನೈ ಎದುರು ಚಿಂದಿಯಾಗಿ ಮಕಾಡೆ ಮಲಗಿರೋ ಮುಂಬೈ ಇಂಡಿಯನ್ಸ್​. ಈ ಸೋತವರ ಕದನಕ್ಕೆ ಇಂದು ವೇದಿಕೆ ಸಜ್ಜಾಗಿದೆ. ಅಹ್ಮದಬಾದ್​​ನ ಮೋದಿ ಸ್ಟೇಡಿಯಂ ಈ ಕಾದಾಟಕ್ಕೆ ಸಾಕ್ಷಿಯಾಗಲಿದೆ.

publive-image

ಮೊದಲ ಗೆಲುವಿನ ಹುಡುಕಾಟದಲ್ಲಿರುವ ಮುಂಬೈ ಇಂಡಿಯನ್ಸ್​ ಚೆನ್ನೈನಿಂದ ಅಹ್ಮದಬಾದ್​ಗೆ ಬಂದಿಳಿದಿದೆ. ತವರಿನಲ್ಲೇ ಸೋತಿರುವ ಗುಜರಾತ್, ಸೋತಲ್ಲೇ ಗೆಲುವಿನ ಕನಸು ಕಾಣ್ತಿದೆ. ಹೀಗೆ ಗೆಲುವಿನ ಹುಡುಕಾಟದಲ್ಲಿರುವ ಉಭಯ ತಂಡಗಳ ನಡುವಿನ ಇಂದಿನ ಫೈಟ್​​ನಲ್ಲಿ ಸ್ಟಾರ್ ಆಟಗಾರರೇ ಸೆಂಟರ್ ಆಫ್ ಅಟ್ರಾಕ್ಷನ್.

ಮುಂಬೈ, ಗುಜರಾತ್​ಗೆ ರೋಹಿತ್ ಶರ್ಮಾದ್ದೇ ಟೆನ್ಶನ್..!

ಮುಂಬೈ ಹಾಗೂ ಗುಜರಾತ್ ಟೈಟನ್ಸ್​ ಎರಡೂ ತಂಡಗಳಿಗೂ ಸದ್ಯ ರೋಹಿತ್ ಶರ್ಮಾದ್ದೇ ಟೆನ್ಶನ್. ಕಳೆದ 7 ಐಪಿಎಲ್​ ಪಂದ್ಯಗಳಿಂದ ರೋಹಿತ್​, ಒಂದಂಕಿ ರನ್ ಗಡಿ ದಾಟಿರೋದು ಜಸ್ಟ್ ಮೂರೇ 3 ಬಾರಿ ಮಾತ್ರ. ಹೀಗಾಗಿ ರೋಹಿತ್ ಇವತ್ತಾದ್ರೂ ಅಬ್ಬರಿಸ್ತಾರಾ ಇಲ್ವಾ ಅನ್ನೋ ಚಿಂತೆ ಮುಂಬೈ ತಂಡದಲ್ಲಿದೆ. ಅತ್ತ ಗುಜರಾತ್​​ ಪಾಳಯದಲ್ಲಿ ಫ್ಲಾಟ್ ಟ್ರ್ಯಾಕ್​ನಲ್ಲಿ ಇವತ್ತು ರೋಹಿತ್ ರೌದ್ರವತಾರ ತಾಳಿದ್ರೆ, ಹೇಗಪ್ಪಾ ತಡೆಯೋದು ಟೆನ್ಶನ್​ ಕಾಡ್ತಿದೆ.

13 ಸೋಲು.. ಹಾರ್ದಿಕ್ ಕಮ್​​ ಬ್ಯಾಕ್.. ಸಿಗುತ್ತಾ ಗೆಲುವು..?

ಪ್ರತಿಯೊಬ್ಬ ಮುಂಬೈ ಅಭಿಮಾನಿಯ ಮನದ ಪ್ರಶ್ನೆಯಿದು. ಸತತ 13 ಪಂದ್ಯ ಸೋತಿರುವ ಮುಂಬೈ, ಗುಜರಾತ್ ಟೈಟನ್ಸ್​ ಎದುರಾದರೂ ಗೆಲುವಿನ ದಡ ಸೇರುತ್ತಾ ಅನ್ನೋ ಕುತೂಹಲ ಎಲ್ಲರಲ್ಲಿದೆ. ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಫುಲ್ ಟೈಮ್ ಕ್ಯಾಪ್ಟನ್​ ಹಾರ್ದಿಕ್ ಇಂದು ಕಮ್​ಬ್ಯಾಕ್ ಮಾಡಲಿದ್ದು ಮುಂಬೈ ಬಲ ಹೆಚ್ಚಲಿದೆ. ಹಿಂದೆ ಇದೇ ಗುಜರಾತ್ ನಾಯಕನಾಗಿ ತಂಡವನ್ನ ಚಾಂಪಿಯನ್​ ಮಾಡಿದ್ದ ಹಾರ್ದಿಕ್, ತವರಿನ ಗುಜರಾತ್​ಗೆ ಟಕ್ಕರ್ ನೀಡುವ ತವಕದಲ್ಲಿದ್ದಾರೆ.

ಸೂರ್ಯ-ತಿಲಕ್ ಅಬ್ಬರಿಸಿದರೆ ಗೆಲುವು ಕಷ್ಟವೇನಲ್ಲ..!

ಸತತ ಸೋಲುಂಡಿರುವ ಮುಂಬೈ ಇಂಡಿಯನ್ಸ್​, ಇವತ್ತು ಗೆಲ್ಲಬೇಕಾದ್ರೆ ಸೂರ್ಯ ಕುಮಾರ್​ ರೋಲ್ ಇಂಪಾರ್ಟೆಂಟ್. 2024ರ ಬಳಿಕ ಟಿ20ಯಲ್ಲಿ ಸೂರ್ಯ ಫಾರ್ಮ್​ ಕಳೆದುಕೊಂಡಿದ್ದಾರೆ. ತಿಲಕ್ ವರ್ಮಾ ಕೂಡ ಕಳೆದ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಇವತ್ತು ಇವರಿಬ್ಬರ ಅಬ್ಬರ ನಡೆದ್ರೆ, ಗುಜರಾತ್ ಟೈಟನ್ಸ್​ ಉಡೀಸ್ ಪಕ್ಕಾ.

ಶುಭ್​ಮನ್, ಬಟ್ಲರ್​ಗೆ​​ ಮುಂಬೈ ಇಂಡಿಯನ್ಸ್ ಅಂದ್ರೆ ‘ಲವ್​’..!

ಪಂಜಾಬ್ ಎದುರಿನ ಮೊದಲ ಪಂದ್ಯದಲ್ಲಿ ಗುಜರಾತ್ ಸೋತ್ರೂ, ಶುಭ್​ಮನ್ ಗಿಲ್, ಸಾಯಿ ಸುದರ್ಶನ್, ಜೋಸ್ ಬಟ್ಲರ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸಾಲಿಡ್ ಫಾರ್ಮ್​ನಲ್ಲಿರುವ ಈ ತ್ರಿಮೂರ್ತಿಗಳು, ಮುಂಬೈಗೆ ಸವಾಲಾಗಲಿದ್ದಾರೆ. ಅದ್ರಲ್ಲೂ, ಮುಂಬೈ ಇಂಡಿಯನ್ಸ್​ ಎಂದ್ರೆ. ಮತ್ತಷ್ಟು ಅಬ್ಬರಿಸುವ ಶುಭ್​ಮನ್ ಗಿಲ್​​, ಜೋಸ್ ಬಟ್ಲರ್​​ರಿಂದ ನಮೋ ಮೈದಾನದಲ್ಲಿ ರನ್ ಭರಾಟೆಯ ನಿರೀಕ್ಷೆಯಿದೆ.

ಇದನ್ನೂ  ಓದಿ:ಧೋನಿ ಮಾಡಿದ್ದು ದೊಡ್ಡ ತಪ್ಪು.. ಸಿಎಸ್​ಕೆ ಸೋಲಲು ಪ್ರಮುಖ ಕಾರಣ MSD..!

publive-image

ಮುಂಬೈಗೆ ಜೋಸ್ ಬಟ್ಲರ್, ಶುಭ್​ಮನ್ ಕಂಟಕ..!

ಮುಂಬೈ ಎದುರು 10 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಜೋಸ್ ಬಟ್ಲರ್, 59.22ರ ಬ್ಯಾಟಿಂಗ್ ಅವರೇಜ್​ನಲ್ಲಿ 533 ರನ್ ಸಿಡಿಸಿದ್ದಾರೆ. 4 ಅರ್ಧಶತಕ, 1 ಶತಕ ದಾಖಲಿಸಿರುವ ಬಟ್ಲರ್, 148.05ರ ಸ್ಟ್ರೈಕ್​ರೇಟ್ ಹೊಂದಿದ್ದಾರೆ. ಇನ್ನು 12 ಪಂದ್ಯಗಳಿಂದ 440 ರನ್ ಗಳಿಸಿರುವ ಗಿಲ್, 2 ಅರ್ಧಶತಕ, 1 ಶತಕ ದಾಖಲಿಸಿದ್ದಾರೆ. 149.65 ಬ್ಯಾಟಿಂಗ್ ಸ್ಟ್ರೈಕ್​​ರೇಟ್ ಹೊಂದಿದ್ದಾರೆ.

ಕಮ್​ಬ್ಯಾಕ್ ಮಾಡ್ತಾರಾ ಸಿರಾಜ್, ರಶೀದ್ ಖಾನ್..?

ಗುಜರಾತ್​ ಬ್ಯಾಟಿಂಗ್ ಒಕೆ, ಬಟ್ ಬೌಲಿಂಗ್​ ಡಿಪಾರ್ಟ್​ಮೆಂಟ್​ನದ್ದೇ ಚಿಂತೆ. ಕಳೆದ ಪಂದ್ಯದಲ್ಲಿ ರಶೀದ್ ಖಾನ್, 12ರ ಏಕಾನಮಿಯಲ್ಲಿ ರನ್ ಬಿಟ್ಟು ಕೊಟ್ಟರೆ, ಮಾಜಿ ಆರ್​ಸಿಬಿ ವೇಗಿ ಸಿರಾಜ್, 13.50ರ ಏಕಾನಮಿಯಲ್ಲಿ ರನ್ ಬಿಟ್ಟಿದ್ದಾರೆ. ಕನ್ನಡಿಗ ಪಸಿದ್ಧ್ ಕೃಷ್ಣ ಕೂಡ ಇಂಪ್ರೆಸ್ಸಿವ್​ ಅಟವಾಡಲಿಲ್ಲ. ಹೀಗಾಗಿ ಇವತ್ತು ಈ ತ್ರಿಮೂರ್ತಿಗಳ ಸಂಘಟಿತ ಬೌಲಿಂಗ್ ಮೇಲೆಯೇ ಗುಜರಾತ್ ಗೆಲುವು ನಿಂತಿದೆ. ಸೋತವರ ಬ್ಯಾಟಲ್​ನಲ್ಲಿ ಉಭಯ ತಂಡಗಳು ಗೆಲುವಿನ ಹುಡುಕಾಟದಲ್ಲಿವೆ. ಗೆಲುವಿನ ಹಳಿಗೆ ಮರಳೋದ್ಯಾರು?.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment