newsfirstkannada.com

ಡಬಲ್ ಹೆಡ್ಡರ್​​ನಲ್ಲಿ ಮುಂಬೈ vs ಗುಜರಾತ್ ಬಿಗ್ ಫೈಟ್​.. ಎಲ್ಲರ ಕಣ್ಣು ಈ ಸ್ಟಾರ್​ ತ್ರಿಮೂರ್ತಿಗಳ ಮೇಲೆ!

Share :

Published March 24, 2024 at 12:39pm

    ಕ್ಯಾಪ್ಟನ್​ ಹಾರ್ದಿಕ್ ಮೇಲೆ​ ರೋಹಿತ್ ಶರ್ಮಾ ಮುನಿಸಿಕೊಂಡ್ರಾ?

    ಈ ಮೂವರು ಆಟಗಾರರು ಪಂದ್ಯದಲ್ಲಿ ಸೆಂಟರ್​ ಆಫ್​ ಆಟ್ರಾಕ್ಷನ್​

    ನಾಯಕ ಪಟ್ಟ ಕೈತಪ್ಪಿರೋ ಬೇಸರದಲ್ಲೇ ರೋಹಿತ್ ಶರ್ಮಾ ಕಣಕ್ಕೆ

ಇವತ್ತಿನ ಡಬಲ್ ಹೆಡ್ಡರ್ ಫೈಟ್​​​​ನಲ್ಲಿ ಮುಂಬೈ ಇಂಡಿಯನ್ಸ್​​ ಹಾಗೂ ಗುಜರಾತ್ ಟೈಟನ್ಸ್​​ ನಡುವಿನ ಕಾಳಗ ಮಾತ್ರವಲ್ಲ. ಮೂವರು ಆಟಗಾರರು ಕೂಡ ಸೆಂಟರ್​ ಆಫ್​ ಆಟ್ರಾಕ್ಷನ್​ ಆಗಿದ್ದಾರೆ. ಅವರ ಮೇಲೆ ವಿಶ್ವ ಕ್ರಿಕೆಟ್​​ ಲೋಕದ ಕುತೂಹಲದ ಕಣ್ಣುಗಳು ನೆಟ್ಟಿವೆ.

ಈ ಸೀಸನ್​ ಐಪಿಎಲ್​ ಟೂರ್ನಿಯ 5ನೇ ಪಂದ್ಯದ ಮೇಲೆ ಇಡೀ ವಿಶ್ವ ಕ್ರಿಕೆಟ್​ ಲೋಕದ ಕಣ್ಣುಗಳು ನೆಟ್ಟಿವೆ. ಮೈದಾನಕ್ಕಿಳಿತಾ ಇರೋ ತ್ರಿಮೂರ್ತಿಗಳು ಹೇಗೆ ಪರ್ಫಾಮ್​ ಮಾಡ್ತಾರೆ ಅನ್ನೋದು ಎಲ್ಲರ ಕುತೂಹಲ. ಅಂದಹಾಗೆ ಆ ಮೂವರು ಬೇರಾರೂ ಅಲ್ಲ.. ಹಾರ್ದಿಕ್ ಪಾಂಡ್ಯ, ಶುಭ್​ಮನ್ ಗಿಲ್, ರೋಹಿತ್ ಶರ್ಮಾ.

ಈ ಮೂವರೇ ಇಂದಿನ ಸೆಂಟರ್ ಆಫ್ ಅಟ್ರಾಕ್ಷನ್. ಇದಕ್ಕೆ ಕಾರಣ ಪ್ರಸಕ್ತ ಆವೃತ್ತಿಯಲ್ಲಿ ಈ ತ್ರಿಮೂರ್ತಿಗಳು ನಿರ್ವಹಿಸ್ತಿರುವ ಪಾತ್ರ. ಇವು ಒಬ್ಬರಿಗಿಂತ ಒಬ್ಬರಿಗೆ ಈ ಸೀಸನ್​​ನಲ್ಲಿ ಟಫ್​ ಆ್ಯಂಡ್ ಡಿಫರೆಂಟ್​​ ಚಾಲೆಂಜ್​ಗಳು ಎದುರಾಗಲಿವೆ.

ಕ್ಯಾಪ್ಟನ್ಸಿ ಹೊಸದಲ್ಲ.. ಚಾಲೆಂಜ್​ ತಪ್ಪಿಲ್ಲ..!

ಹಾರ್ದಿಕ್ ಪಾಂಡ್ಯ. ಮುಂಬೈ ಇಂಡಿಯನ್ಸ್ ತಂಡದ ನ್ಯೂ ಕ್ಯಾಪ್ಟನ್. ಈ ಕ್ಯಾಪ್ಟನ್ಸಿ ರೋಲ್​ ಹಾರ್ದಿಕ್​ಗೆ ಹೊಸದಲ್ಲ. ಸಿಕ್ಕ ಅವಕಾಶದಲ್ಲೇ ಕಪ್ ಗೆಲ್ಲಿಸಿಕೊಟ್ಟು, ಇದೊಂದು ಟೀಮಾ ಎಂದು ಟೀಕಿಸಿದವರ ಬಾಯಲ್ಲೇ ಬೇಷ್​​ ಎನಿಸಿಕೊಂಡಿದ್ದಾರೆ. ಆದ್ರೆ, ಈಗ ಫ್ರಾಂಚೈಸಿ ಬದಲಾಗಿದೆ. ಮುಂಬೈ ಕ್ಯಾಪ್ಟನ್​ ಆಗಿ ಸವಾಲಿಗೆ ಸಿದ್ಧನಾಗಿರುವ ಪಾಂಡ್ಯ ಮುಂದೆ ಹೆಜ್ಜೆ ಹೆಜ್ಜೆಗೂ ಚಾಲೆಂಜ್ ಇದೆ.

ಹಾರ್ದಿಕ್ ಮುಂದಿರೋ ಸವಾಲು​

  • ಮನಸ್ತಾಪಕ್ಕೆ ಇತಿಶ್ರೀ ಹಾಡಿ, ಸಮನ್ವಯತೆ ಕಾಪಾಡಬೇಕು
  • ನಾಯಕತ್ವದ ಜತೆ ಬ್ಯಾಟಿಂಗ್, ಬೌಲಿಂಗ್​ನಲ್ಲಿ ಉತ್ತರಿಸಬೇಕು
  • T20 ವಿಶ್ವಕಪ್ ದೃಷ್ಟಿಯಿಂದ ಇಂಜುರಿ ಫ್ರೀ ಆಗಿ ಉಳಿಯಬೇಕು
  • ಮುಂಬೈ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸುವುದು ಒಂದು

ಆರೆಂಜ್ ಕ್ಯಾಪ್​ ವಿನ್ನರ್​ಗೆ ಕಪ್ ಗೆಲ್ಲೋ ಟಾಸ್ಕ್..!

ಶುಭ್​ಮನ್ ಗಿಲ್​.. ಗುಜರಾತ್ ಟೈಟನ್ಸ್​​ ನ್ಯೂ ಕ್ಯಾಪ್ಟನ್, ಮೊದಲ ಪಂದ್ಯದಲ್ಲಿ ಮಾಜಿ ನಾಯಕನ ಸವಾಲನ್ನ ಎದುರಿಸಿ ಕ್ಯಾಪ್ಟನ್ಸಿ ಜರ್ನಿ ಆರಂಭಿಸ್ತಿದ್ದಾರೆ. ಗಿಲ್ ಸಕ್ಸಸ್​ಫುಲ್ ಓಪನರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ, ಕಳೆದ ಬಾರಿ ಈ ಆರೆಂಜ್ ಕ್ಯಾಪ್ ವಿನ್ನರ್​​ಗೆ ಈ ಬಾರಿ, ಬ್ಯಾಟಿಂಗ್​ ಜೊತೆ ನಾಯಕತ್ವದ ಜವಾಬ್ದಾರಿ ನಿರ್ವಹಿಸಬೇಕಿದೆ. ಒತ್ತಡ ನಿಭಾಯಿಸೋದು, ಆಟಗಾರರನ್ನ ಹ್ಯಾಂಡೆಲ್​ ಮಾಡೋದು, ಗೇಮ್​ಪ್ಲಾನ್​, ಟ್ಯಾಕ್ಸಿಕ್ಸ್​ ಎಲ್ಲ ಸವಾಲಾಗಿದೆ.

ರೋಹಿತ್ ಬ್ಯಾಟ್​ ಘರ್ಜಿಸುತ್ತಾ ಈ ಸಲ..?

ಈ ಬಾರಿ ರೋಹಿತ್​ ಶರ್ಮಾ ಈ ಬಾರಿ ಕೇವಲ ಆಟಗಾರ ಮಾತ್ರ. ನಾಯಕನ ಪಟ್ಟ ಕೈತಪ್ಪಿರೋ ಬೇಸರಕ್ಕೆ, ತಮ್ಮೊಳಗಿನ ಜ್ವಾಲೆಗೆ ತಕ್ಕ ಉತ್ತರವನ್ನ ರೋಹಿತ್​​​​​​​​​​ ಬ್ಯಾಟ್​ನಿಂದ ನೀಡಬೇಕಿದೆ. ಕಳೆದ ಎರಡು ಸೀಸನ್​​ನಿಂದ ರೋಹಿತ್​ ಬ್ಯಾಟಿಂಗ್​ನಲ್ಲಿ ವೈಫಲ್ಯ ಅನುಭವಿಸಿದ್ದಾರೆ. ನಾಯಕತ್ವ ಒತ್ತಡವಿಲ್ಲದ ಹಿಟ್​ಮ್ಯಾನ್​ ಈ ಬಾರಿ ಘರ್ಜಿಸ್ತಾರಾ ಅನ್ನೋ ಕುತೂಹಲವಿದೆ. ಜೊತೆಗೆ ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಿಂದ ರೋಹಿತ್​​ ಸ್ಟ್ರೈಕ್​ರೇಟ್​ನತ್ತ ಗಮನ ಹರಿಸಬೇಕಿದೆ.

ನ್ಯೂ ರೋಲ್​​ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ತ್ರಿಮೂರ್ತಿಗಳಿಗೆ, ಈ ಐಪಿಎಲ್ ಟೂರ್ನಿಯಲ್ಲಿ ಡಿಫರೆಂಟ್ ಟಾಸ್ಕ್ ಎದುರಾಗಲಿದೆ. ಈ ಸವಾಲುಗಳು ಇವ್ರು ಹೇಗೆ ಮೆಟ್ಟಿ ನಿಲ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಡಬಲ್ ಹೆಡ್ಡರ್​​ನಲ್ಲಿ ಮುಂಬೈ vs ಗುಜರಾತ್ ಬಿಗ್ ಫೈಟ್​.. ಎಲ್ಲರ ಕಣ್ಣು ಈ ಸ್ಟಾರ್​ ತ್ರಿಮೂರ್ತಿಗಳ ಮೇಲೆ!

https://newsfirstlive.com/wp-content/uploads/2024/03/ROHIT_GILL_PANDYA.jpg

Load More