newsfirstkannada.com

GT vs MI: ಇಂದು ನಮೋ ನೆಲದಲ್ಲಿ ಗುರು-ಶಿಷ್ಯನ ಕಾಳಗ! ಮುಂಬೈಗೆ ಶಾಕ್​ ಕೊಡ್ತಾರಾ ಹಾರ್ದಿಕ್​?

Share :

Published May 26, 2023 at 9:20am

Update September 25, 2023 at 10:42pm

    ನಮೋ ಮೈದಾನದಲ್ಲಿ ಗುರು-ಶಿಷ್ಯರ ಮುಖಾಮುಖಿ.!

    ನಾಯಕತ್ವದಲ್ಲಿ ರೋಹಿತ್​ ಶರ್ಮಾ ಪಂಟರ್​​.!

    ಲೈಫ್​ ಕೊಟ್ಟ ಮುಂಬೈಗೆ ಶಾಕ್​ ಕೊಡ್ತಾರಾ ಹಾರ್ದಿಕ್​.?

ಮತ್ತೊಂದು ಗುರು-ಶಿಷ್ಯರ ಸಮರಕ್ಕೆ ಐಪಿಎಲ್​ ಸಜ್ಜಾಗ್ತಿದೆ. ಇಂದು ನಡೆಯೋ 2ನೇ ಕ್ವಾಲಿಫೈಯರ್​ ಫೈಟ್​ನಲ್ಲಿ ಹಾರ್ದಿಕ್ ಪಾಂಡ್ಯ – ರೋಹಿತ್​ ಶರ್ಮಾ ಮುಖಾಮುಖಿಯಾಗ್ತಿದ್ದಾರೆ. ಫೈನಲ್​ ಪ್ರವೇಶದ ಕನವರಿಕೆಯಲ್ಲಿರೋ ಎರಡೂ ತಂಡಗಳ ಪಾಲಿಗೆ ನಾಯಕರೇ ಮ್ಯಾಚ್​​ ವಿನ್ನರ್ಸ್​.! ಇವರಿಬ್ಬರಲ್ಲಿ ಯಾರು ಯಾಮಾರ್ತಾರೋ, ಆ ಟೀಮ್​ನ ಖೇಲ್​ ಖತಂ.!

ಇಂಡಿಯನ್​ ಪ್ರೀಮಿಯರ್​ ಲೀಗ್​ನ ಮಹತ್ವದ ಕದನಕ್ಕೆ ಕೆಲವೇ ಗಂಟೆಗಳು ಬಾಕಿ.! ಗುಜರಾತ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯೋ ಕ್ವಾಲಿಫೈಯರ್​​ ಫೈಟ್​​ನತ್ತ ಎಲ್ಲರ ಚಿತ್ತ ನೆಟ್ಟಿದೆ. ಇವತ್ತಿನ ಪಂದ್ಯದಲ್ಲಿ ಯಾರು ಗೆಲ್ತಾರೋ ಅವರು ಫೈನಲ್​ಗೆ ಎಂಟ್ರಿ ಕೊಟ್ರೆ, ಸೋತವರು ಟೂರ್ನಿಗೆ ಟಾಟಾ ಬೈ ಬೈ ಮಾಡ್ಲೇಬೇಕು. ಡು ಆರ್​ ಡೈ ಕದನದಲ್ಲಿ ಎರಡೂ ತಂಡಗಳು ಫೈನಲ್​ ಪ್ರವೇಶದ ಕನವರಿಕೆಯಲ್ಲಿವೆ. ಹೀಗಾಗಿ ಹೋಮ್​ ಟೀಮ್​ ಗುಜರಾತ್​ VS ಮುಂಬೈ ನಡುವಿನ ಕಾದಾಟದಲ್ಲಿ ಯಾರು ಗೆಲ್ತಾರೆ ಅನ್ನೋದು ಅಭಿಮಾನಿಗಳಲ್ಲಿ ವಿಶೇಷ ಕುತೂಹಲವನ್ನ ಹುಟ್ಟು ಹಾಕಿದೆ.

ನಮೋ ಮೈದಾನದಲ್ಲಿ ಗುರು-ಶಿಷ್ಯರ ಮುಖಾಮುಖಿ.!

ಗುಜರಾತ್​ ಟೈಟನ್ಸ್​​ನ ನಾಯಕ ಹಾರ್ದಿಕ್​ ಪಾಂಡ್ಯ – ಮುಂಬೈ ಇಂಡಿಯನ್ಸ್​ನ ನಾಯಕ ರೋಹಿತ್​ ಶರ್ಮಾ ಇವತ್ತು ಅಹಮದಾಬಾದ್​ನ ರಣಕಣದಲ್ಲಿ ಎದುರು ಬದುರಾಗ್ತಿದ್ದಾರೆ. ಇವತ್ತು ವಿಲನ್​ಗಳಾಗಿ ಕಾದಾಡಲು ಸಜ್ಜಾಗಿರೋ ಇವರಿಬ್ರು, ಒಂದು ಕಾಲದ ಗುರು – ಶಿಷ್ಯರು. ಹೋಮ್​ ಟೀಮ್​ ಗುಜರಾತ್​ನ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಪಳಗಿದ್ದೇ ರೋಹಿತ್​ ಶರ್ಮಾ ಗರಡಿಯಲ್ಲಿ..!

ಹಾರ್ದಿಕ್​ ಪಾಂಡ್ಯ ಇಂದು ಐಪಿಎಲ್​ನ ಮೋಸ್ಟ್​ ಸಕ್ಸಸ್​ಫುಲ್​ ಕ್ಯಾಪ್ಟನ್​ಗಳ ಲಿಸ್ಟ್​ನಲ್ಲಿ ಒಬ್ರು. ಆದ್ರೆ, ಇದೇ ಪಾಂಡ್ಯ ಈ ಹಿಂದೆ ಒಂದೇ ಒಂದು ಅವಕಾಶಕ್ಕಾಗಿ ಪರದಾಡಿದ್ರು. ಆ ಸಮಯದಲ್ಲಿ ಟ್ಯಾಲೆಂಟ್​​ ನಂಬಿ, ಅವಕಾಶ ನೀಡಿ, ಬೆಳೆಸಿದ್ದು ಮುಂಬೈ ಇಂಡಿಯನ್ಸ್​..! ಆದ್ರೆ, ಇದೀಗ ಅದೇ ಮುಂಬೈ ಇಂಡಿಯನ್ಸ್​ ವಿರುದ್ಧ ಪಾಂಡ್ಯ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಲೈಫ್​​ ಕೊಟ್ಟ ಮುಂಬೈಗೆ ಶಾಕ್​ ಕೊಡೋ ಲೆಕ್ಕಾಚಾರದಲ್ಲಿದ್ದಾರೆ.

ನಾಯಕತ್ವದಲ್ಲಿ ರೋಹಿತ್​ ಶರ್ಮಾ ಪಂಟರ್​​.!

ಹಾರ್ದಿಕ್​ ಪಾಂಡ್ಯ ಏನೋ ಮುಂಬೈ ಸೋಲುಣಿಸಿ ಫೈನಲ್​ಗೇರೋ ಕನವರಿಯಲ್ಲಿದ್ದಾರೆ. ಆದ್ರೆ, ಇದಕ್ಕೆ ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಅವಕಾಶ ಮಾಡಿಕೊಡ್ತಾರಾ ಅನ್ನೋದು ಪ್ರಶ್ನೆಯಾಗಿದೆ. ಕ್ಯಾಪ್ಟನ್ಸಿ ವಿಚಾರದಲ್ಲಿ ರೋಹಿತ್​ ಶರ್ಮಾ ಪಂಟರ್​..! ಯಾವ ಕ್ಷಣದಲ್ಲಾದ್ರೂ, ಶಾಕಿಂಗ್​ ನಿರ್ಧಾರ ಕೈಗೊಂಡು ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯ ರೋಹಿತ್​ಗಿದೆ. ಐಪಿಎಲ್​ನ ಇತಿಹಾಸವೇ ರೋಹಿತ್​ ನಾಯಕತ್ವದ ಕ್ವಾಲಿಟಿ ಹಾಗೂ ಸಾಧನೆಗಳನ್ನ ಸಾರಿ ಸಾರಿ ಹೇಳುತ್ತೆ.

ಬ್ಯಾಟಿಂಗ್​ – ಬೌಲಿಂಗ್​ ಎಲ್ಲದಕ್ಕೂ ಹಾರ್ದಿಕ್​ ಸೈ.!

ಈ ಸೀಸನ್​ನ ಟೂರ್ನಿಯಲ್ಲಿ ಹಾರ್ದಿಕ್​ ಪಾಂಡ್ಯ ಕ್ಯಾಪ್ಟೆನ್ಸಿ ಜೊತೆಗೆ ವೈಯಕ್ತಿಕ ಪರ್ಫಾಮೆನ್ಸ್​ನಿಂದಲೂ ಮಿಂಚಿದ್ದಾರೆ. ಬ್ಯಾಟಿಂಗ್​ ಜೊತೆಗೆ ಬೌಲಿಂಗ್​ನಲ್ಲೂ ಜವಾಬ್ದಾರಿ ಮೆರೆದಿದ್ದಾರೆ. ಆಡಿದ 14 ಪಂದ್ಯಗಳಲ್ಲಿ 130.26ರ ಸ್ಟ್ರೈಕ್​ರೇಟ್​ನಲ್ಲಿ 297 ರನ್​ಗಳ ಕಾಣಿಕೆ ನೀಡಿದ್ದಾರೆ. ಇನ್ನು ಬೌಲಿಂಗ್​ನಲ್ಲೂ ಎಕಾನಮಿಕಲ್​ ಪರ್ಫಾಮೆನ್ಸ್​ ನೀಡಿರೋ ಪಾಂಡ್ಯ, 22 ಓವರ್​ಗಳನ್ನ ಹಾಕಿ 3 ವಿಕೆಟ್​​ ಬೇಟೆಯಾಡಿದ್ದಾರೆ. 8.20ರ ಎಕಾನಮಿಯಲ್ಲಿ ರನ್​ ಬಿಟ್ಟು ಕೊಟ್ಟಿದ್ದಾರೆ.

ಹಿಟ್​ಮ್ಯಾನ್​ ರೋಹಿತ್​ಗೆ​ ಬ್ಯಾಟಿಂಗ್​ ಚಿಂತೆ.!

ಒಂದೆಡೆ ಹಾರ್ದಿಕ್​ ಆಲ್​​ರೌಂಡ್​ ಆಟದಿಂದ ಗುಜರಾತ್​ಗೆ ನೆರವಾಗ್ತಿದ್ರೆ, ಮುಂಬೈ ನಾಯಕನದ್ದು ತದ್ವಿರುದ್ಧ ನಡೆ.. ಈ ಸೀಸನ್​ನಲ್ಲಿ ಒಂದೇ ಒಂದು ಧಮ್​ದಾರ್​ ಪ್ರದರ್ಶನ ರೋಹಿತ್​ ಬ್ಯಾಟ್​​ನಿಂದ ಬಂದಿಲ್ಲ.. 2 ಬಾರಿ ಅರ್ಧಶತಕದ ಗಡಿದಾಟಿದ್ರೂ, ಸ್ಟ್ರೈಕ್​ರೇಟ್​ ಸಾಧಾರಣವಾಗಿದೆ. ಆಡಿದ 15 ಇನ್ನಿಂಗ್ಸ್​ಗಳಲ್ಲಿ 21.60ರ ಎಕಾನಮಿಯಲ್ಲಿ ಗಳಿಸಿರೋದು 324 ರನ್​ ಮಾತ್ರ.. ತಾನೇ ಸೆಟ್​​ ಮಾಡಿದ ಸ್ಟ್ಯಾಂಡರ್ಡ್​​ಗೆ ತಕ್ಕಂತೆ ರೋಹಿತ್​ ಆಡದೇ ಇರೋದೆ ಮುಂಬೈ ಪಾಳೆಯದಲ್ಲಿ ಹಿನ್ನಡೆಯ ಆತಂಕ ಹುಟ್ಟುಹಾಕಿದೆ.

ಐಪಿಎಲ್​ನ ಮೋಸ್ಟ್​ ಸಕ್ಸಸ್​ಫುಲ್​ ಕ್ಯಾಪ್ಟನ್​ಗಳ ಲಿಸ್ಟ್​​ನಲ್ಲಿ ಧೋನಿ, ರೋಹಿತ್​ ಜೊತೆಗೆ ಹಾರ್ದಿಕ್​ ಪಾಂಡ್ಯ ಹೆಸರು ಕೂಡ ಇದೀಗ ಸೇರಿಕೊಂಡಿದೆ. ಚೊಚ್ಚಲ ಆವೃತ್ತಿಯಲ್ಲೇ ತಂಡವನ್ನ ಚಾಂಪಿಯನ್​ ಪಟ್ಟಕ್ಕೇರಿಸಿದ ಹೆಗ್ಗಳಿಕೆ ಪಾಂಡ್ಯಾದ್ದು. ಇಷ್ಟೇ ಅಲ್ಲ.. ಸದ್ಯ ರೋಹಿತ್​ ಶರ್ಮಾ ಟೀಮ್​ ಇಂಡಿಯಾದ ನಾಯಕನಾಗಿರೋವಾಗ್ಲೆ, ಹಾರ್ದಿಕ್​ ಪಾಂಡ್ಯ ಉತ್ತರಾಧಿಕಾರಿ ಎಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ರೋಹಿತ್​ ಅಲಭ್ಯತೆಯಲ್ಲಿ ಹಾರ್ದಿಕ್​ ತಂಡವನ್ನ ಮುನ್ನಡೆಸಿ ಸೈ ಎನ್ನಿಸಿಕೊಂಡಿದ್ದಾರೆ ಕೂಡ.. ಹೀಗಾಗಿಯೇ ಇಂದಿನ ಪಂದ್ಯ ಟೀಮ್​ ಇಂಡಿಯಾದ ಹಾಲಿ ನಾಯಕ VS ಭವಿಷ್ಯದ ನಾಯಕ ಎಂದೂ ಬಿಂಬಿತವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

GT vs MI: ಇಂದು ನಮೋ ನೆಲದಲ್ಲಿ ಗುರು-ಶಿಷ್ಯನ ಕಾಳಗ! ಮುಂಬೈಗೆ ಶಾಕ್​ ಕೊಡ್ತಾರಾ ಹಾರ್ದಿಕ್​?

https://newsfirstlive.com/wp-content/uploads/2023/05/GT-vs-MI-2.jpg

Load More