ಮೋದಿ ಸ್ಟೇಡಿಯಂನಲ್ಲಿ ರನ್​ಗಳ ಹೊಳೆ ಪಕ್ಕಾ.. ಗುಜರಾತ್ vs​ ಪಂಜಾಬ್​ಗೆ ಟಾಸ್ ಮುಖ್ಯ ಆಗುತ್ತಾ?

author-image
Bheemappa
Updated On
ಮೋದಿ ಸ್ಟೇಡಿಯಂನಲ್ಲಿ ರನ್​ಗಳ ಹೊಳೆ ಪಕ್ಕಾ.. ಗುಜರಾತ್ vs​ ಪಂಜಾಬ್​ಗೆ ಟಾಸ್ ಮುಖ್ಯ ಆಗುತ್ತಾ?
Advertisment
  • ಚೇಸಿಂಗ್​ನಲ್ಲಿ ಗೆಲ್ಲುವ ಹಾಟ್ ಫೇವರಿಟ್ ಟೀಮ್ ಯಾವುದು?
  • ಮೋದಿ ಸ್ಟೇಡಿಯಂನಲ್ಲಿ ಬೌಂಡರಿ, ಸಿಕ್ಸರ್​ಗಳ ಸುರಿಮಳೆ ಪಕ್ಕಾ
  • ಶ್ರೇಯಸ್ ಅಯ್ಯರ್ vs ಶುಭ್​ಮನ್​ ಗಿಲ್​ ಫೈಟ್​ ಹೇಗಿರುತ್ತದೆ?

ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್​ ಈ ಎರಡು ತಂಡಗಳು ಇಂದು ಸಂಜೆ 7:30ಕ್ಕೆ ಕಾದಾಟಕ್ಕೆ ಇಳಿಯಲಿವೆ. 2 ತಂಡದಲ್ಲೂ ಬಲಷ್ಠ ಬ್ಯಾಟಿಂಗ್ ಪಡೆ ಇದ್ದು ಮೋದಿ ಸ್ಟೇಡಿಯಂನಲ್ಲಿ ಬೌಂಡರಿ, ಸಿಕ್ಸರ್​ಗಳ ಸುರಿಮಳೆ ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು. ಈ ಪಂದ್ಯಕ್ಕೆ ಟಾಸ್ ಮುಖ್ಯ ಪಾತ್ರ ವಹಿಸುತ್ತಾ ಎಂದು ನೋಡುವುದಾದ್ರೆ..

ಅಹ್ಮದಾಬಾದ್​ ನರೇಂದ್ರ ಮೋದಿ ಸ್ಟೇಡಿಯಂ ಎಂದರೆ ಬ್ಯಾಟರ್​ಗಳಿಗೆ ಹೇಳಿ ಮಾಡಿಸಿದಂತ ಪಿಚ್. ಚೆಂಡು ಯಾವ ಕಡೆಯಿಂದಲೂ ಬಂದರೂ ಬೌಂಡರಿಗೆ ಬಾರಿಸುವುದು ಈ ಮೈದಾನದಲ್ಲಿ ತುಂಬಾ ಸರಳ. ಹೈಸ್ಕೋರಿಂಗ್ ಗೇಮ್ ಆಗಿದ್ದರಿಂದ ಪಂದ್ಯದಲ್ಲಿ ಟಾಸ್ ಯಾವುದೇ ಪರಿಣಾಮ ಬೀರಲ್ಲ. ಆದರೆ ಟಾಸ್ ಗೆದ್ದ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಈ ಸೀಸನ್​ನಲ್ಲಿ ಗುಜರಾತ್, ಪಂಜಾಬ್​ ಮೊದಲ ಪಂದ್ಯವಾಡುತ್ತಿವೆ. ಗುಜರಾತ್ ಟೀಮ್​ಕ್ಯಾಪ್ಟನ್​ ಶುಭ್​ಮನ್ ಗಿಲ್​, ಜೋಶ್ ಬಟ್ಲರ್, ಗ್ಲೇನ್ ಫಿಲಿಪ್ಸ್​, ಸಾಯಿ ಸುದರ್ಶನ್ ಬ್ಯಾಟಿಂಗ್ ಬಲವಾಗಿದ್ರೆ, ಕಗಿಸೋ ರಬಾಡ, ಸಿರಾಜ್, ರಶೀದ್ ಖಾನ್ ಬೌಲಿಂಗ್ ಶಕ್ತಿಯಾಗಿದ್ದಾರೆ.

ಇದನ್ನೂ ಓದಿ:ನೋವು, ವೇದನೆ, ಅಪಮಾನ.. ಇಶಾನ್ ಕಿಶನ್ ಬ್ಯಾಟಿಂಗ್ ಆರ್ಭಟದ ಹಿಂದಿದೆ ಆಕ್ರೋಶದ ಜ್ವಾಲೆ!

publive-image

ಗುಜರಾತ್ ಎದುರಾಳಿ ಪಂಜಾಬ್ ಕೂಡ ಬಲಿಷ್ಠವಾಗಿದ್ದು ಹೊಸ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಅಖಾಡಕ್ಕೆ ಇಳಿಯುತ್ತಿದೆ. ಅಯ್ಯರ್, ಶಶಾಂಕ್ ಸಿಂಗ್, ಮ್ಯಾಕ್ಸ್​ವೆಲ್​, ನೆಹಾಲ್ ವಧೇರಾ, ಜಾನ್ಸನ್, ಸ್ಟೋನಿಸ್​ ಬ್ಯಾಟಿಂಗ್​ನಲ್ಲಿ ಮಿಂಚು ಹರಿಸಲಿದ್ದಾರೆ. ಅರ್ಷದೀಪ್ ಸಿಂಗ್, ಚಹಾಲ್, ವಿಜಯ್ ಕುಮಾರ್ ವೈಶಾಕ್, ಪ್ರವೀಣ್ ದುಬೆ, ಲಾಕಿ ಫರ್ಗುಸನ್ ಬೌಲಿಂಗ್​ನಲ್ಲಿ ಪರ್ಫಾಮೆನ್ಸ್ ತೋರಲಿದ್ದಾರೆ.

ಇಂದು ಚೇಸಿಂಗ್​ನಲ್ಲಿ ಗೆಲ್ಲುವ ಹಾಟ್ ಫೇವರಿಟ್ ಟೀಮ್ ಗುಜರಾತ್ ಆಗಿದೆ. ಇದಕ್ಕೆ ಕಾರಣ ಎಂದರೆ ಈ ಹಿಂದೆ ಆಡಿರುವ 24 ಪಂದ್ಯಗಳಲ್ಲಿ 17 ಮ್ಯಾಚ್​ಗಳನ್ನ ಚೇಸಿಂಗ್​ನಲ್ಲೇ ವಿನ್ ಆಗಿದೆ. ಶೇಕಡಾ 70.83 ರಷ್ಟು ಚೇಸಿಂಗ್​ನಲ್ಲಿ ಗೆಲ್ಲುವ ಪೇವರಿಟ್ ಟೀಮ್ ಎಂದರೆ ಅದು ಗುಜರಾತ್ ಆಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment