ಚಿನ್ನಸ್ವಾಮಿಯಲ್ಲಿ ದತ್ತು ಪುತ್ರನದ್ದೇ ಕಿಂಗ್​ಡಮ್; ಶತಕ ಸರದಾರನ ದಾಖಲೆಗಳೇ ಅದ್ಭುತ..!

author-image
Ganesh
Updated On
ಇವತ್ತು RCB ಗೆಲ್ಲಲು ಪಾಲಿಸಬೇಕು ಐದು ಸೂತ್ರಗಳು.. ರೆಡ್​ ಆರ್ಮಿಗೆ ಟಫ್ ಚಾಲೆಂಜ್..!
Advertisment
  • ಹೋಮ್​ಗ್ರೌಂಡ್​ನಲ್ಲಿ​​ ಮೊದಲ ಪಂದ್ಯಕ್ಕೆ RCB ಸಜ್ಜು
  • ರಾರಾಜಿಸಲಿದೆ ರೆಡ್​ ಜೆರ್ಸಿ..! ಮೊಳಗಲಿದೆ ಕಹಳೆ..!
  • ಕಿಂಗ್​ಡಮ್​ ಚಿನ್ನಸ್ವಾಮಿಗೆ ಕಿಂಗ್​​ ಕೊಹ್ಲಿ ಕಮ್​ಬ್ಯಾಕ್

ರಾಯಲ್​​ ಚಾಲೆಂಜರ್ಸ್​ ಬೆಂಗಳೂರು-ಗುಜರಾತ್​ ಟೈಟನ್ಸ್​ ಹಣಾಹಣಿಯ ಸೆಂಟರ್​ ಆಫ್​ ಅಟ್ರಾಕ್ಷನ್​ ಕಿಂಗ್​ ಕೊಹ್ಲಿ! ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ವಿರಾಟ್​ ಮೇನಿಯಾ ನಡೆಯಲಿದೆ. ಹೋಮ್​​ಗ್ರೌಂಡ್​ಗೆ ವಾಪಸ್ಸಾಗಿರೋ ದತ್ತುಪುತ್ರನ ಅದ್ಧೂರಿ ವೆಲ್​ಕಮ್​ ಮಾಡೋಕೆ ಲಾಯಲ್​​ ಫ್ಯಾನ್ಸ್​​ ರೆಡಿಯಾಗಿದ್ದಾರೆ. ಫ್ಯಾನ್ಸ್​ ಫುಲ್​ ಎಕ್ಸೈಟ್​ ಆಗಿದ್ರೆ ಎದುರಾಳಿ ಗುಜರಾತ್​ ತಂಡದಲ್ಲಿ ನಡುಕ ಶುರುವಾಗಿದೆ.

ರಾರಾಜಿಸಲಿದೆ ರೆಡ್​ ಜೆರ್ಸಿ..
ಇಂದು ಚಿನ್ನಸ್ವಾಮಿ ಸ್ಟೇಡಿಯಂನ ಸುತ್ತ ಆರ್​​ಸಿಬಿ, ಆರ್​​ಸಿಬಿ ಎಂಬ ರಣಕಹಳೆ ಮೊಳಗಲಿದೆ. ಇಡೀ ಸ್ಟೇಡಿಯಂನಲ್ಲಿ ಆರ್​​ಸಿಬಿ ಜೆರ್ಸಿ ರಾರಾಜಿಸಲಿದೆ. ಸ್ಟೇಡಿಯಂ ಕಂಪ್ಲೀಟ್ ಕೆಂಪಾಗೋದ್ರಲ್ಲಿ ಅನುಮಾನವೇ ಬೇಡ. ಇಂದು ಕಾಣಿಸಿಕೊಳ್ಳೋ ಬಹುತೇಕ ಅಭಿಮಾನಿಗಳ ರೆಡ್​ ಜೆರ್ಸಿ ಹಿಂದೆ ನಂಬರ್​ ಇರುತ್ತೆ. ​ಅದುವೇ ನಂಬರ್ 18.

ಇದನ್ನೂ ಓದಿ: ಆರ್​ಸಿಬಿಯ ಇಬ್ಬರು ಬೌಲರ್​ಗಳಿಂದ GTಗೆ ನಡುಕ.. ಇವತ್ತು ಗುಜರಾತ್​ ಬ್ಯಾಟರ್​ಗಳು ಧ್ವಂಸ ಪಕ್ಕಾ..!

publive-image

ಕಿಂಗ್​ಡಮ್​ಗೆ ಕೊಹ್ಲಿ!

ವಿರಾಟ್​ ಕೊಹ್ಲಿ ಹುಟ್ಟಿದ್ದು ಬೆಳೆದಿದ್ದು ಎಲ್ಲಾ ದೆಹಲಿಯಲ್ಲೇ. ಜೀವನ ರೂಪಿಸಿದ್ದು ಬೆಂಗಳೂರು. ಆರ್​​ಸಿಬಿಯಿಂದ ಆರಂಭವಾದ ಕೊಹ್ಲಿ ಜರ್ನಿ ಇಂದು ವಿಶ್ವ ಕ್ರಿಕೆಟ್​ನ ಐಕಾನ್​. ಕೊಹ್ಲಿ ಒಂಥರ ಕರ್ನಾಟಕ ದತ್ತುಪುತ್ರ ಆಗಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂ ಕೊಹ್ಲಿಯ ಕಿಂಗ್​​ಡಮ್​ ಅಂದ್ರೆ ತಪ್ಪೇ ಇಲ್ಲ. ಇಂದೂ ಕೂಡ ಕೊಹ್ಲಿಯನ್ನ ನೋಡಬೇಕು. ವಿರಾಟ್​ ವೀರಾವೇಷ ಕಣ್ತುಂಬಿಕೊಳ್ಳಬೇಕು ಅನ್ನೋ ಉದ್ದೇಶದಿಂದ ಸ್ಟೇಡಿಯಂಗೆ ಬರೋ ಜೀವಗಳು ಅದೆಷ್ಟೋ..

ಇದನ್ನೂ ಓದಿ: GT ವಿರುದ್ಧ ಆರ್​ಸಿಬಿಗೆ ಬಿಗ್​ ಚಾಲೆಂಜ್.. ಈ 6 ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಗೆಲುವು ನಮ್ಮದೇ..!

publive-image

ಫೇವರಿಟ್​​ ಗ್ರೌಂಡ್​​ನಲ್ಲಿ ‘ವಿರಾಟರೂಪ’..!

ಸೀಸನ್​ 18ರ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ವಿರುದ್ಧ ಕಮಾಲ್​ ಮಾಡಿದ ಕೊಹ್ಲಿ ಅಜೇಯ ಅರ್ಧಶತಕ ಸಿಡಿಸಿ ಮಿಂಚಿದ್ರು. ಆ ಬಳಿಕ ಚೆನ್ನೈನ ಚೆಪಾಕ್​ನಲ್ಲಿ ರನ್​ಗಳಿಸಲು ಸ್ಟ್ರಗಲ್​ ಮಾಡಿದ್ರು. ಇವತ್ತು ಮಾತ್ರ ಕಿಂಗ್​ ಕೊಹ್ಲಿ ರಣಾರ್ಭಟ ಪಕ್ಕಾ​. ಇದು ಕೊಹ್ಲಿಯ ಕೋಟೆ, ಪ್ರತಿ ಬಾರಿಯೂ ಈ ಚಿನ್ನಸ್ವಾಮಿ ಮೈದಾನದಲ್ಲಿ ಕೊಹ್ಲಿಯ ಬ್ಯಾಟ್​ ಸಖತ್​ ಸೌಂಡ್​ ಮಾಡಿದೆ. ಬೌಂಡರಿ, ಸಿಕ್ಸರ್​ಗಳ ಸುರಿಮಳೆ ಸುರಿದಿದೆ.

ಚಿನ್ನಸ್ವಾಮಿಯಲ್ಲಿ ಕೊಹ್ಲಿ IPL ಪ್ರದರ್ಶನ

ಚಿನ್ನಸ್ವಾಮಿ ಮೈದಾನದಲ್ಲಿ 86 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಬೀಸಿರುವ ವಿರಾಟ್​ ಕೊಹ್ಲಿ, 40.53ರ ಸರಾಸರಿಯಲ್ಲಿ 3040 ರನ್​ಗಳಿಸಿದ್ದಾರೆ. 142.58 ಸ್ಟ್ರೈಕ್​​ರೇಟ್​ನಲ್ಲಿ ಘರ್ಜಿಸಿರೋ ಕೊಹ್ಲಿ 277 ಬೌಂಡರಿ, 128 ಸಿಕ್ಸರ್​ ಸಿಡಿಸಿದ್ದಾರೆ.

ಚಿನ್ನಸ್ವಾಮಿಯಲ್ಲಿ ಶತಕದ ಸರದಾರ..!

ಚಿನ್ನಸ್ವಾಮಿಯಲ್ಲಿ ರನ್​ ಹೊಳೆಯನ್ನೇ ಹರಿಸಿರುವ ಕೊಹ್ಲಿ ಸೆಂಚುರಿ ಮೇಲೆ ಸೆಂಚುರಿ ಸಿಡಿಸಿದ್ದಾರೆ. ಐಪಿಎಲ್​ ಇತಿಹಾಸದಲ್ಲಿ ಒಂದೇ ಸ್ಟೇಡಿಯಂನಲ್ಲಿ ಅತಿ ಹೆಚ್ಚು ಸೆಂಚುರಿ ಸಿಡಿಸಿದ ರೆಕಾರ್ಡ್​​ ಇರೋದೇ ಕಿಂಗ್​ ಕೊಹ್ಲಿ ಹೆಸರಲ್ಲಿ. ಫೇವರಿಟ್​​ ಚಿನ್ನಸ್ವಾಮಿ ಅಂಗಳದಲ್ಲಿ ಬೊಂಬಾಟ್​ ಬ್ಯಾಟಿಂಗ್​​ ನಡೆಸಿರುವ ಕೊಹ್ಲಿ 4 ಸೆಂಚುರಿ ಸಿಡಿಸಿದ್ದಾರೆ. ಈ ನಾಲ್ಕರಲ್ಲಿ 2 ಸೆಂಚುರಿ ಬಂದಿದ್ದು ಗುಜರಾತ್​​ ಫ್ರಾಂಚೈಸಿ ವಿರುದ್ಧವೇ.
2016ರಲ್ಲಿ ಪುಣೆ ವಿರುದ್ಧದ ಪಂದ್ಯದಲ್ಲಿ 58 ಎಸೆತಗಳಲ್ಲಿ ಅಜೇಯ 108 ರನ್​ಗಳಿಸಿದ್ದ ಕೊಹ್ಲಿ ಚಿನ್ನಸ್ವಾಮಿಯಲ್ಲಿ ಮೊದಲ ಶತಕ ಸಿಡಿಸಿದ್ರು.

publive-image

ಬಳಿಕ ಅದೇ ಸೀಸನ್​ನಲ್ಲಿ ಗುಜರಾತ್​ ಲಯನ್ಸ್​ ಎದುರು 55 ಎಸೆತಗಳಲ್ಲಿ 109 ರನ್ ಕೊಳ್ಳೆ ಹೊಡೆದಿದ್ದ ವಿರಾಟ್​, ಪಂಜಾಬ್​ ಕಿಂಗ್ಸ್​ ಎದುರು 50 ಎಸೆತಗಳಲ್ಲಿ 113 ರನ್​ ಸಿಡಿಸಿದ್ರು. 2023ರಲ್ಲಿ ಗುಜರಾತ್​​ ವಿರುದ್ಧ 61 ಎಸೆತಗಳಲ್ಲಿ ಅಜೇಯ 101 ರನ್​ಗಳ ಇನ್ನಿಂಗ್ಸ್​ ಕಟ್ಟಿದ್ರು.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರನ್​ ಭರಾಟೆ ಸೃಷ್ಟಿಸಿರೋ ಕೊಹ್ಲಿ ಮೇಲೆ ಇಂದು ಕೂಡ ಅಪಾರ ನಿರೀಕ್ಷೆ ಅಭಿಮಾನಿಗಳ ವಲಯದಲ್ಲಿದೆ. ಅಭಿಮಾನಿಗಳ ನಿರೀಕ್ಷೆ ನಿಜವಾಗಲಿ. ಕಿಂಗ್​ಡಮ್​ನಲ್ಲಿ ಕಿಂಗ್​ ಕೊಹ್ಲಿ ಬ್ಯಾಟ್​ ಘರ್ಜಿಸಲಿ. ಆರ್​ಸಿಬಿ ಹ್ಯಾಟ್ರಿಕ್​​ ಗೆಲುವು ಸಾಧಿಸಲಿ.

ಇದನ್ನೂ ಓದಿ: ಲಕ್ಕಿ ಕ್ಯಾಪ್ಟನ್ ರಜತ್..! ಪಾಟೀದಾರ್ ನಾಯಕತ್ವದಲ್ಲಿ RCB ವಾತಾವರಣ ಫುಲ್ ಚೆಂಜ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment