ಗುಜರಾತ್​ನ ಈ ಸ್ಟಾರ್​ಗೆ RCB ಮೇಲೆ ಸಿಟ್ಟು.. ಸೇಡು ತೀರಿಸಿಕೊಳ್ಳಲು ಬಿಗ್ ಪ್ಲಾನ್​..!

author-image
Ganesh
Updated On
ಗುಜರಾತ್​ನ ಈ ಸ್ಟಾರ್​ಗೆ RCB ಮೇಲೆ ಸಿಟ್ಟು.. ಸೇಡು ತೀರಿಸಿಕೊಳ್ಳಲು ಬಿಗ್ ಪ್ಲಾನ್​..!
Advertisment
  • ಬೆಂಗಳೂರಿನಲ್ಲಿ ನಾಳೆ ಆರ್​ಸಿಬಿ vs ಜಿಟಿ ಪಂದ್ಯ
  • ರೋಚಕ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಎಕ್ಸೈಟ್
  • ಸೇಡು ತೀರಿಸಿಕೊಳ್ಳಲು ಆರ್​​ಸಿಬಿ ಮಾಜಿ ಆಟಗಾರ ರೆಡಿ

ನಾಳೆ ಗುಜರಾತ್ ಟೈಟನ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳ ನಡುವೆ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೈ-ವೋಲ್ಟೇಜ್ ಪಂದ್ಯ ನಡೆಯಲಿದೆ. ಸತತ ಎರಡು ಪಂದ್ಯಗಳನ್ನು ಗೆದ್ದುಕೊಂಡಿರುವ, ಆರ್​ಸಿಬಿ ಗುಜರಾತ್​ ಮಣಿಸಿ ಹ್ಯಾಟ್ರಿಕ್ ಗೆಲುವಿನ ಕನಸು ಕಾಣ್ತಿದೆ.

ಇತ್ತ, ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದುಕೊಂಡಿರುವ ಗಿಲ್ ಪಡೆ, ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಇದರ ಮಧ್ಯೆ, ಗುಜರಾತ್ ಟೈಟನ್ಸ್​ ತಂಡದ ಸ್ಟಾರ್ ವೇಗಿ ಮೊಹ್ಮದ್ ಸಿರಾಜ್​ಗೆ ಪ್ರತಿಷ್ಠೆಯ ಪಂದ್ಯವಾಗಿದೆ. ಆರ್​ಸಿಬಿ ವಿರುದ್ಧ ಸೇಡು ತೀರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.

ಇದನ್ನೂ ಓದಿ:‘ನೀವು ಬ್ಯಾಟ್ ಮಾಡಿ, ಬೌಲಿಂಗ್ ಮಾಡ್ತೇನೆ’ ಎಂದ ಪಡಿಕ್ಕಲ್ -ಸವಾಲ್ ಹಾಕಿದ್ದು ಯಾರಿಗೆ..? VIDEO

publive-image

2017ರಿಂದ ಐಪಿಎಲ್ ಆಡ್ತಿರುವ ಸಿರಾಜ್, 2018ರಲ್ಲಿ ಆರ್​ಸಿಬಿ ಫ್ರಾಂಚೈಸಿ ಸೇರಿದ್ದರು. ಅಲ್ಲಿಂದ 7 ಸೀಸನ್​​ಗಳನ್ನು ಆರ್​ಸಿಬಿಗಾಗಿ ಆಡಿದ್ದರು. 2025ರಲ್ಲಿ ಸಿರಾಜ್ ಅವರನ್ನು ಫ್ರಾಂಚೈಸಿ ಕೈಬಿಟ್ಟಿತು. ನಂತರ ನಡೆದ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್, 12.5 ಕೋಟಿ ರೂಪಾಯಿ ನೀಡಿ ಸಿರಾಜ್​ರನ್ನ ಖರೀದಿಸಿದೆ.

ಇನ್ನು ಸಿರಾಜ್ ಆರ್​ಸಿಬಿಯಲ್ಲಿದ್ದಾಗ 87 ಪಂದ್ಯಗಳನ್ನು ಆಡಿ 83 ವಿಕೆಟ್ ಕಿತ್ತಿದ್ದರು. ಆರ್​ಸಿಬಿಯ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದ ಸಿರಾಜ್​ರನ್ನು ಕೈಬಿಟ್ಟಿರೋದು ಭಾರೀ ಚರ್ಚೆಯಾಗಿತ್ತು. ಹೀಗಾಗಿ ನಾಳೆ ನಡೆಯುವ ಪಂದ್ಯ ಮೊಹ್ಮದ್ ಸಿರಾಜ್​ಗೆ ಪ್ರತಿಷ್ಠೆಯಾಗಿದೆ. ಕೈಬಿಟ್ಟಿದ ತಪ್ಪಿಗೆ ಜಬರ್ದಸ್ತ್ ಪ್ರದರ್ಶನ ನೀಡುವ ಮೂಲಕ ಆರ್​ಸಿಬಿ ಮೇಲೆ ಸೇಡು ತೀರಿಸಿಕೊಳ್ಳಲು ಕಾದು ಕೂತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ನಾಳೆಯೇ RCB ಪಂದ್ಯ; ಟಿಕೆಟ್ ಬೇಕು ಅಂದ್ರೆ ಏನು ಮಾಡಬೇಕು..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment