‘ಸಿಎಂ ರಾಜೀನಾಮೆ ಅಗತ್ಯವಿಲ್ಲ’ ಎಂದಿದ್ದೇಕೆ ಜಿಟಿಡಿ? ಈ ಹೇಳಿಕೆ ಹಿಂದಿನ 5 ಸೀಕ್ರೆಟ್ ರಿವೀಲ್

author-image
Ganesh
Updated On
‘ಸಿದ್ದುಗೆ ಚಾಮುಂಡೇಶ್ವರಿ ಆಶೀರ್ವಾದವಿದೆ, ಹೆಚ್​ಡಿಕೆ ರಿಸೈನ್ ಮಾಡ್ತಾರಾ‘? ರಾಜ್ಯ ರಾಜಕಾರಣದಲ್ಲಿ ಜಿಟಿಡಿ ಹೊಸ ಬಾಂಬ್!
Advertisment
  • ಜಿ.ಟಿ. ದೇವೇಗೌಡರ ಹೇಳಿಕೆಯ ಹಿಂದಿನ ಉದ್ದೇಶವೇನು?
  • ಇವತ್ತು ದಸರಾ ಉದ್ಘಾಟನೆ ವೇದಿಕೆಯಲ್ಲಿ ದಿಢೀರ್ ಹೇಳಿಕೆ
  • ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಜಿಟಿ ದೇವೇಗೌಡ

ಮೈಸೂರು: ದಸರಾ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಜೆಡಿಎಸ್​ ನಾಯಕ ಜಿಟಿ ದೇವೇಗೌಡ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿರೋದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಜಿ.ಟಿ.ದೇವೇಗೌಡ ಹೇಳಿರುವ ಉದ್ದೇಶ ಏನು ಅನ್ನೋದ್ರ ಬಗ್ಗೆ ಚರ್ಚೆ ನಡೆಯುತ್ತಿದೆ. ಜಿಟಿ ದೇವೇಗೌಡ ಸಿದ್ದರಾಮಯ್ಯರ ಪರ ಬ್ಯಾಟ್ ಬೀಸಿರುವ ಹಿಂದಿನ ಅಸಲಿ ವಿಚಾರ ಇಲ್ಲಿದೆ.

ಇದನ್ನೂ ಓದಿ:ಸೈಟು ವಾಪಸ್ ಕೊಟ್ಟು ಹಾದಿ ತಪ್ಪಿದ್ರಾ ಸಿದ್ದರಾಮಯ್ಯ? ಮತ್ತಷ್ಟು ಬಿಗಿಯಾಗುತ್ತಾ ಇಡಿ ಇಕ್ಕಳ?

ಜಿಟಿ ದೇವೇಗೌಡ ಹೀಗ್ಯಾಕೆ ಅಂದ್ರು..?

  1. ಹೆಚ್.ಡಿ.ಕುಮಾರಸ್ವಾಮಿ ಸಂಸತ್ ಪ್ರವೇಶಿಸಿದ ಬೆನ್ನಲ್ಲೇ ಜೆಡಿಎಸ್‌‌ನ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ತೆರವಾಗಿತ್ತು. ಪಕ್ಷದಲ್ಲಿ ನಾನು ಹಿರಿಯ ಹಾಗೂ ಪ್ರಬಲ ಒಕ್ಕಲಿಗ ಸಮುದಾಯದವನು. ತಮಗೇ ಜೆಡಿಎಸ್‌ನ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಸಿಗುತ್ತದೆ ಎಂಬ ಕನಸು ಕಂಡಿದ್ದರು ಜಿ.ಟಿ.ದೇವೇಗೌಡ.
  2. ಈ ವಿಚಾರವಾಗಿ ಹೆಚ್.ಡಿ. ದೇವೇಗೌಡರ ಬಳಿ ಜಿ.ಟಿ.ದೇವೇಗೌಡ ಮಾತುಕತೆ ನಡೆಸಿದ್ದರು. ಆದರೆ ಜಿಟಿಡಿ ಬದಲು ಕುಮಾರಸ್ವಾಮಿ ಅವರು ಸುರೇಶ್ ಬಾಬುಗೆ ಮಣೆ ಹಾಕಿದ್ದಾರೆ.
  3. ಜಿ.ಟಿ.ದೇವೇಗೌಡರಿಗೆ ಕೋರ್ ಕಮಿಟಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಈಗ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಏಕೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು. ಇದೇ ವಿಚಾರಕ್ಕೆ ಜಿಟಿ ದೇವೇಗೌಡ ಅಸಮಾಧಾನ ಹೊರ ಹಾಕಿದ್ದರು. ಇದೇ ಕಾರಣಕ್ಕೆ ಕಳೆದ ಅಧಿವೇಶನಕ್ಕೂ ಜಿಟಿ ದೇವೇಗೌಡರು ಗೈರಾಗಿದ್ದರು.
  4. ಇನ್ನು ಮುಡಾದಲ್ಲಿ ಜಿಟಿಡಿಗೂ ನಿವೇಶನವಿದೆ. ಅಲ್ಲಿ ಸ್ಥಳೀಯ ನಾಯಕರ ಬೆಂಬಲಕ್ಕೆ ನಿಲ್ಲದಿದ್ರೆ ಮುಂದೆ ತಮಗೂ ಸಂಕಷ್ಟ ಬರುಬಹುದೆಂಬ ಉದ್ದೇಶ ಇರಬಹುದು.
  5. ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಕೈತಪ್ಪಿದ ದಿನದಿಂದ ಜಟಿಡಿ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಕಳೆದ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ಗೆ ಹೋಗಿದ್ರೆ, ತಾನು ರಾಜಕೀಯವಾಗಿ ಇನ್ನಷ್ಟು ಬೆಳೆಯಬಹುದಾಗಿತ್ತು ಎಂಬ ಕಾರಣ‌
    ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ನಲ್ಲಿ ಇದ್ದಿದ್ರೆ, ಸಚಿವ ಸ್ಥಾನವು ಸಿಗುತ್ತಿತ್ತು. ತಮ್ಮ ಪುತ್ರನ ರಾಜಕೀಯ ಜೀವನ ಮುಂದೆ ಸಾಗಬೇಕಿದೆ. ಈಗಲಾದ್ರೂ ಕಾಂಗ್ರೆಸ್‌ನತ್ತ ಹೋಗೋಣ ಎಂದು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೂಡ ಇದೆ.

ಹೀಗೆ ಸಾಲು ಸಾಲು ಕಾರಣಗಳನ್ನು ಇಟ್ಟುಕೊಂಡು, ನೇರವಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಜಿಟಿ ದೇವೇಗೌಡ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಚುನಾಯಿತ ಸರ್ಕಾರಗಳನ್ನ ಉಳಿಸುವ ಚಿಂತನೆ ಆಗಬೇಕು-ಹಂಪ ನಾಗರಾಜಯ್ಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment