ಹೊಸ ವರ್ಷ ಬರಮಾಡಿಕೊಳ್ಳಲು ದಿನಗಣನೆ; ಪಬ್, ರೆಸ್ಟೋರೆಂಟ್​ ಮತ್ತು ಪಿಜಿಗಳಿಗೆ ಮಾರ್ಗಸೂಚಿ

author-image
Gopal Kulkarni
Updated On
ಬ್ರಿಗೇಡ್​ ರೋಡಲ್ಲಿ ಗರ್ಲ್​ ಫ್ರೆಂಡ್​​​ ಜತೆ ಅಸಭ್ಯ ವರ್ತನೆ.. ಪುಂಡನಿಗೆ ಗೂಸಾ ಕೊಟ್ಟ ಪ್ರಿಯಕರ!
Advertisment
  • ಹೊಸ ವರ್ಷ ಬರಮಾಡಿಕೊಳ್ಳಲು ಸಜ್ಜಾಗಿರುವ ಸಿಲಿಕಾನ್ ಸಿಟಿ
  • ಪಿಜಿ, ಪಬ್, ಬಾರ್ ರೆಸ್ಟೋರೆಂಟ್​ಗಳಿಗೆ ಹಲವು ಮಾರ್ಗಸೂಚಿ
  • ಮಾರ್ಗಸೂಚಿಗಳನ್ನು ನೀಡಲು ಸಜ್ಜಾಗಿರುವ ಪೊಲೀಸ್ ಇಲಾಖೆ

ಹೊಸ ವರ್ಷ ಬರಮಾಡಿಕೊಳ್ಳಲು ಇಡೀ ವಿಶ್ವವೇ ಈಗ ಕಾತುರದಿಂದ ಕಾಯುತ್ತಿದೆ. ಬೆಂಗಳೂರಿನಲ್ಲಿ ಹೊಸ ವರ್ಷದ ಆಚರಣೆ ಸಂಭ್ರಮ ಬೇರೆಯದ್ದೇ ಮಟ್ಟಕ್ಕೆ ಹೋಗಿರುತ್ತೆ. ಇದರಿಂದ ಅಲ್ಲಲ್ಲಿ ಕೆಲವು ಸಮಸ್ಯೆಗಳು ಅನುಚಿತ ವರ್ತನೆ, ಗದ್ದಲ ಗಲಾಟೆಗಳು ನಡೆಯುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಆದ್ರೆ ಈ ಬಾರಿ ಅವು ಯಾವುದು ಮರುಕಳಿಸದಂತೆ ಕ್ರಮ ಕೈಗೊಳ್ಳಲು ಬೆಂಗಳೂರು ಪೊಲೀಸರು ಸಜ್ಜಾಗಿದ್ದಾರೆ. ಪಬ್​, ಕ್ಲಬ್​, ಪಿಜಿ ಮಾಲೀಕರು ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಸಭೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ನ್ಯೂಸ್​ಫಸ್ಟ್​ನಲ್ಲಿ ಹೊಸ ವರ್ಷದ ಮಾರ್ಗಸೂಚಿಯ ಪ್ರಮುಖಾಂಶಗಳು ಲಭ್ಯವಾಗಿವೆ.

ಠಾಣಾ ಮಟ್ಟದಲ್ಲಿ ಸಭೆ ನಡೆಸಲಿರುವ ಆಯಾ ಠಾಣೆ ಇನ್ಸ್​ಪೆಕ್ಟರ್​, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಕೆಲವು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ತಪ್ಪಿದಲ್ಲಿ ಕರ್ನಾಟಕ ಸಾರ್ವಜನಿಕ ಸುರಕ್ಷತೆ ಕಾಯ್ದೆ ಅಡಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಪಿಜಿಗಳಿಗೆ ಮಾರ್ಗಸೂಚಿ
ಪಿಜಿಯಲ್ಲಿ ಇರುವವರು ಆಗಮನ ಮತ್ತು ನಿರ್ಗಮನದ ಬಗ್ಗೆ ನಿಖರವಾದ ಸಮಯವನ್ನು ಲೆಡ್ಜರ್​ನಲ್ಲಿ ನಮೂದಿಸಬೇಕು. ತಮ್ಮ ಪಿಜಿ ಟೆರಸ್​ಗಳ ಮೇಲೆ ಪಾರ್ಟಿ ಮಾಡಿ ಕುಡಿಯುವವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬೇಕು. ಹೊಸ ವರ್ಷದ ದಿನ ಹೊಸಬರು ಮತ್ತು ಅಪರಿಚಿತರನ್ನು ಪಿಜಿಯೊಳಗೆ ಬಿಟ್ಟುಕೊಳ್ಳುವಂತಿಲ್ಲ. ಪಿಜಿ ಮುಂಭಾಗದ ರಸ್ತೆಗಳಲ್ಲಿ ಹೊಸ ವರ್ಷದ ಪ್ರಯುಕ್ತ ಕೇಕ್​ಗಳನ್ನು ಕಟ್ ಮಾಡಕೂಡದು. ಮಹಿಳಾ ಪಜಿಗಳಿಗೆ ಶುಭ ಕೋರಲು ಆ ವೇಳೆಯಲ್ಲಿ ಬರುವ ಪುರುಷರಿಗೆ ಅವಕಾಶ ನೀಡುವಂತಿಲ್ಲ. ಒಂದು ವೇಳೆ ಯಾವುದೇ ಈ ರೀತಿಯ ಅಹಿತಕರ ಘಟನೆ ನಡೆದಲ್ಲಿ ಅದಕ್ಕೆ ಪಿಜಿ ಮಾಲೀಕರೆ ಹೊಣೆ ಎಂದು ಎಲ್ಲಾ ಪಿಜಿಗಳಿಗೆ ನೋಟಿಸ್​ ನೀಡಲು ಸಜ್ಜಾಗಿದ್ದಾರೆ ಪೊಲೀಸರು.

publive-image

ಪಬ್ ರೆಸ್ಟೋರೆಂಟ್ ಮಾಲೀಕರಿಗೆ ಹಲವು ನಿಬಂಧನೆಗಳು
ಇನ್ನು ಹೊಸ ವರ್ಷ ಅಂದ್ರೆ ಪಬ್ ಮತ್ತು ರೆಸ್ಟೋರೆಂಟ್​ಗಳಲ್ಲಿ ಅಬ್ಬರದ ಸಂಭ್ರಮ ಕಳೆಗಟ್ಟುತ್ತದೆ. ಹೀಗಾಗಿ ಅವುಗಳಿಗೂ ಕೂಡ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪೊಲೀಸ್ ಇಲಾಖೆ ಮಾರ್ಗಸೂಚಿಯನ್ನು ಹೊರಡಿಸಲಿದೆ.

ಪಬ್, ಬಾರ್ ಮತ್ತು ರೆಸ್ಟೋರೆಂಟ್​ಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಕಾರ್ಯಕ್ರಮ ಆಯೋಜಿಸುವ ಸ್ಥಳಗಳಲ್ಲಿ ಉತ್ತಮ ಗುಣಮಟ್ಟದ ಸಿಸಿಟಿವಿ ಕ್ಯಾಮರಾ ಅಳವಡಿಸುವುದರ ಜೊತೆಗೆ ಅವುಗಳು ಸೂಕ್ತವಾಗಿ ಕಾರ್ಯನಿರ್ವಹಿಸುವುಂತೆ ನೋಡಿಕೊಳ್ಳಬೇಕು. ಸಿಸಿಟಿವಿ ಫೂಟೇಜ್ ಬ್ಯಾಕಪ್ ಇಟ್ಟುಕೊಳ್ಳಬೇಕು. ಕಾರ್ಯಕ್ರಮಕ್ಕೆ ಬರುವ ಗ್ರಾಹಕರ ಬ್ಯಾಗ್ ಲಗೇಜ್​ಗಳನ್ನು ತಪ್ಪದೇ ಚೆಕ್ ಮಾಡುವುದು. ಯಾವುದೇ ಆಯುಧ, ಸ್ಫೋಟಕ, ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳು ಇಲ್ಲದಿರುವುದರ ಬಗ್ಗೆ ಖಚಿತಪಡಿಸಿಕೊಳ್ಳಬೇಕು.

ಇದನ್ನೂ ಓದಿ:ಕೋಲಾರದಲ್ಲಿ ಭೀಕರ ಅಪಘಾತ.. 3 ದ್ವಿಚಕ್ರ ವಾಹನಗಳಿಗೆ ಬೊಲೊರೊ‌ ವಾಹನ ಡಿಕ್ಕಿ

ಕಾರ್ಯಕ್ರಮಕ್ಕೆ ಬರುವ ಗ್ರಾಹಕರಿಗೆ ಆಗಮನ ಅಥವಾ ನಿರ್ಗಮನ ಸ್ಥಳಗಳನ್ನು ಪ್ರತ್ಯೇಕವಾಗಿ ರಚಿಸಬೇಕು. ನಿರ್ವಹಿಸುವುದು ಮತ್ತು ಒಳಬಿಡುವ ಗ್ರಾಹಕರಿಗೆ ಹೆಚ್.ಹೆಚ್,ಎಂ.ಡಿ ಮೂಲಕ ಚೆಕ್‌ ಮಾಡಿ ಪರಿಶೀಲಿಸಬೇಕು. ಬಾರ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತರಿಗೆ ಒಳಗಡೆ ಪ್ರವೇಶ ನೀಡಬಾರದು. ಒಂದು ವೇಳೆ ಅಪ್ರಾಪ್ತರಿಗೆ ಒಳಗೆ ಹೋಗಲು ಅವಕಾಶ ನೀಡಿದ್ದು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹೊಸವರ್ಷಾಚರಣೆ ಸಂಬಂಧ ಹೆಚ್ಚಾಗಿ ಮದ್ಯಪಾನ ಮಾಡಿದವರು ಸುಧಾರಿಸಿಕೊಳ್ಳಲು ಐಸ್‌ಲ್ಯಾಂಡ್ ಸ್ಥಳ ಆಯೋಜಿಸುಬೇಕು.

ಇದನ್ನೂ ಓದಿ:ಉಡುಪಿ ಬೋಟ್ ಬಿಲ್ಡಿಂಗ್ ಯಾರ್ಡ್​ನಿಂದ ಹೊಸ ಸಮಾಚಾರ.. 2000 ಕೋಟಿ ಬಿಗ್ ಡೀಲ್..!

ಮಹಿಳೆಯರ ಭದ್ರತೆ ಮತ್ತು ಸುರಕ್ಷತೆ ಸಲುವಾಗಿ ಮಹಿಳಾ ಬೌನ್ಸರ್ ಗಳನ್ನು ನೇಮಿಸಿಕೊಳ್ಳಬೇಕು.ಮದ್ಯಸೇವಿಸಿ ಅನುಚಿತವಾಗಿ ವರ್ತಿಸುವ ಮಹಿಳೆಯರನ್ನು ಮಹಿಳಾ ಬೌನ್ಸರ್‌ಗಳ ಸಹಾಯದಿಂದ ಮನೆಗೆ ಕಳುಹಿಸಿಕೊಡಬೇಕು.ಅಂತಹ ಮಹಿಳೆಯರನ್ನು ಕಳುಹಿಸುವ ವಾಹನಗಳ ನಂಬರ್ ಹಾಗೂ ಚಾಲಕರ ಫೋಟೋ ತೆಗೆದುಕೊಂಡಿರಬೇಕು.

ಮದ್ಯದಂಗಡಿ ಒಳಗೆ ಹೊರಗೆ ಯಾವುದೇ ಅಹಿತಕರ ಘಟನೆ. ಜರುಗದಂತೆ ಎಚ್ಚರವಹಿಸಬೇಕು. ಹಾಗೇನಾದರು ಅಪರಾಧ ನಡೆದಲ್ಲಿ ಸಂಬಂಧಪಟ್ಟ ಮಾಲೀಕರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು, ಕಾರ್ಯಕ್ರಮ ಆಯೋಜಿಸಲು ಪೊಲೀಸ್ ಇಲಾಖೆಯಿಂದ ಮತ್ತು ಸಂಬಂಧಪಟ್ಟಿ ಪ್ರಾಧಿಕಾರ ಅಥವಾ ಇಲಾಖೆಯಿಂದ ನಿರಾಕ್ಷೇಪಣ ಪತ್ರ ಪಡೆದುಕೊಳ್ಳಬೇಕು. ಕಾರ್ಯಕ್ರಮದಲ್ಲಿ ಧ್ವನಿವರ್ಧಕ ಬಳಸಲು ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ಪಡೆದುಕೊಳ್ಳತಕ್ಕದ್ದು. ಧ್ವನಿವರ್ಧಕ ಬಳಕೆಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸತಕ್ಕದ್ದು. ಹೀಗೆ ಹಲವು ಮಾರ್ಗಸೂಚಿಗಳನ್ನು ಪಿಜಿ, ಪಬ್, ಬಾರ್ ಮತ್ತು ರೆಸ್ಟೋರೆಂಟ್​​ಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment