ಹೈದರಾಬಾದ್​​ನಲ್ಲಿ ಮೊದಲ ಗುಯಿಲಿನ್ ಬ್ಯಾರೆ ಸಿಂಡ್ರೋಮ್ ಪತ್ತೆ.. ಕೋಲ್ಕತ್ತಾದಲ್ಲಿ 4 ದಿನಲ್ಲಿ 3 ಜೀವ ಹೋಗಿದೆ

author-image
Ganesh
Updated On
ಹೈದರಾಬಾದ್​​ನಲ್ಲಿ ಮೊದಲ ಗುಯಿಲಿನ್ ಬ್ಯಾರೆ ಸಿಂಡ್ರೋಮ್ ಪತ್ತೆ.. ಕೋಲ್ಕತ್ತಾದಲ್ಲಿ 4 ದಿನಲ್ಲಿ 3 ಜೀವ ಹೋಗಿದೆ
Advertisment
  • ದೇಶದಲ್ಲಿ ಸಂಚಲನ ಮೂಡಿಸಿದ ಜಿಬಿಎಸ್​ ಕಾಯಿಲೆ
  • ದೇಶದಲ್ಲಿ ಆರೋಗ್ಯ ಅಧಿಕಾರಿಗಳು ಅಲರ್ಟ್​ ಆಗಿದ್ದಾರೆ
  • GBS ಲಕ್ಷಣಗಳು ಏನು? ವೈದ್ಯರು ಏನ್ ಹೇಳ್ತಿದ್ದಾರೆ?

ಗುಯಿಲಿನ್ ಬ್ಯಾರೆ ಸಿಂಡ್ರೋಮ್ (GBS: Guillain barre) ದೇಶದಲ್ಲಿ ಸಂಚಲನ ಮೂಡಿಸುತ್ತಿದೆ. ದೇಶಾದ್ಯಂತ ಜಿಬಿಎಸ್ ಪ್ರಕರಣಗಳು ಹೆಚ್ಚುತ್ತಿದ್ದು ಆತಂಕ ಹುಟ್ಟಿಸಿದೆ. ಇದೀಗ ತೆಲಂಗಾಣದಲ್ಲಿ ಮೊದಲ ಜಿಬಿಎಸ್‌ನ ಪ್ರಕರಣ ದಾಖಲಾಗಿದೆ.

ಹೈದರಾಬಾದ್‌ನಲ್ಲಿ ಗುಯಿಲಿನ್ ಬ್ಯಾರೆ ಸಿಂಡ್ರೋಮ್ ಕೇಸ್ ಪತ್ತೆ ಹಚ್ಚಲಾಗಿದೆ. ಸಿದ್ದಿಪೇಟೆಯ ಮಹಿಳೆಯೊಬ್ಬರು ಜಿಬಿಎಸ್ ಲಕ್ಷಣಗಳನ್ನು ಹೊಂದಿದ್ದಾರೆ. ಹೈದರಾಬಾದ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 4 ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಜಿಬಿಎಸ್‌ನಿಂದ ಮಗು ಸೇರಿ ಮೂವರು ಜೀವ ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಸುಮಾರು 130 GBS ಶಂಕಿತ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: Chicken: ಸ್ಕಿನ್, ಸ್ಕಿನ್​ ಲೆಸ್​ ಚಿಕನ್! ಇದರಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ..?

ಮೊದಲ GBS ಪ್ರಕರಣ ದಾಖಲಾದ ಬೆನ್ನಲ್ಲೇ ತೆಲಂಗಾಣ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕಿನಿಂದ ಇದು ಬರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜನರಿಗೆ ಜಿಬಿಎಸ್ ಸೋಂಕು ತಗಲುತ್ತದೆ. ಈ ವೈರಸ್‌ ನರಗಳ ಮೇಲೆ ಪರಿಣಾಮ ಬೀರುತ್ತದೆ.

ಲಕ್ಷಣಗಳು ಏನೇನು..?

  • ಸೋಂಕಿಗೆ ಒಳಗಾದ ವ್ಯಕ್ತಿ ದೇಹ ಮರಗಟ್ಟುತ್ತದೆ
  • ಸ್ನಾಯು ದೌರ್ಬಲ್ಯ, ಅತಿಸಾರ, ಹೊಟ್ಟೆ ನೋವು
  • ಜ್ವರ ಮತ್ತು ವಾಂತಿಯಂತಹ ಲಕ್ಷಣಗಳು ಕಾಣುತ್ತದೆ
  • ಸ್ನಾಯು ದೌರ್ಬಲ್ಯ ಅಥವಾ ಪಾರ್ಶ್ವವಾಯು ಸಂಭವ ಇದೆ

ವೈದ್ಯರು ಏನ್ ಹೇಳುತ್ತಿದ್ದಾರೆ..?

ಕಲುಷಿತ ಆಹಾರ ಮತ್ತು ನೀರಿನ ಮೂಲಕ ಬ್ಯಾಕ್ಟೀರಿಯಾ ಹರಡುತ್ತದೆ. ಜಿಬಿಎಸ್ ಸಾಂಕ್ರಾಮಿಕ ರೋಗವಲ್ಲ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಗುಣಪಡಿಸಬಹುದು. ಈ ವೈರಸ್‌ನಿಂದ ಯಾರೂ ಭಯಭೀತರಾಗೋದು ಬೇಡ. ಗುಯಿಲಿನ್-ಬಾರ್ ಸಿಂಡ್ರೋಮ್ ದೇಹದ ರೋಗ ನಿರೋಧಕ ವ್ಯವಸ್ಥೆ ಮೇಲೆ ಪೆಟ್ಟು ನೀಡುತ್ತದೆ. ನರಗಳ ಮೇಲೆ ಒತ್ತಡ ಹೇರುತ್ತದೆ.

ಇದನ್ನೂ ಓದಿ: ಹಸುವಿನ ಹಾಲು, ಎಮ್ಮೆಯ ಹಾಲು.. ನಿಮ್ಮ ಆರೋಗ್ಯಕ್ಕೆ ಯಾವುದು ಬೆಸ್ಟ್​ ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment