ಇದು ಜಗತ್ತಿನ ಅತಿ ಸುದೀರ್ಘ ಚುಂಬನ.. ಅಧರಗಳು ಅದರದೇ ಎಷ್ಟು ಗಂಟೆ ಬೆಸೆದುಕೊಂಡಿದ್ದವು! ಆಮೇಲೆ ಏನಾಯ್ತು?

author-image
Gopal Kulkarni
Updated On
ಇದು ಜಗತ್ತಿನ ಅತಿ ಸುದೀರ್ಘ ಚುಂಬನ.. ಅಧರಗಳು ಅದರದೇ ಎಷ್ಟು ಗಂಟೆ ಬೆಸೆದುಕೊಂಡಿದ್ದವು! ಆಮೇಲೆ ಏನಾಯ್ತು?
Advertisment
  • ಜಗತ್ತಿನಲ್ಲಿಯೇ ಅತಿ ಸುದೀರ್ಘ ಚುಂಬನದ ದಾಖಲೆ ಬರೆದಿದ್ದ ಥೈ ಜೋಡಿ!
  • ಥೈಲ್ಯಾಂಡ್​​ನ ದಂಪತಿ ಎಷ್ಟು ಗಂಟೆಗಳ ಕಾಲ ಅಧರಗಳನ್ನು ಬೆಸೆದುಕೊಂಡಿದ್ದರು?
  • ಹೀಗೆ ಪ್ರಣಯಕ್ಕೊಂದು ಹೊಸ ಭಾಷ್ಯೆ ಬರೆದ ಜೋಡಿಗಳು ಈಗೇನಾಗಿದ್ದಾರೆ ಗೊತ್ತಾ?

ಪ್ರಥಮ ಚುಂಬನಂ ದಂತ ಭಗ್ನ ಅನ್ನೋ ಮಾತನ್ನ ಹಾಸ್ಯಕ್ಕಾಗಿ ಹೇಳುತ್ತಾರೆ. ಚುಂಬನ ಅಂದ್ರೆ ಅದು ಲೈಂಗಿಕತೆಯ ಆರಂಭದ ಹಂತ. ಮೊದಲ ಅಮಲು. ಜೇನೊಂದು ಹೂವಿನ ಪರಾಗವನ್ನು ಮಧುರವಾಗಿ ಹೀರುವಂತಹ ಅನುಭವ. ಇಡೀ ಜಗತ್ತಿನ ಪರಿವೇ ಕಳೆದು ಹೋಗಿ ಎರಡು ದೇಹಗಳು ಏಕಕಾಲಕ್ಕೆ ಒಂದಾಗುವ ಮೊದಲ ಕ್ರಿಯೆ. ಪ್ರತಿ ಪ್ರೇಮಿಯೂ,ಪ್ರೇಯಸಿಯು ಕೂಡ ತನ್ನ ಅಧರಗಳನ್ನು ತನ್ನವಳ, ತನ್ನವನ ಅಧರಗಳೊಂದಿಗೆ ಬೆಸೆಯುವ ದೊಡ್ಡ ಬಯಕೆಯನ್ನು ಹೊಂದಿರುತ್ತಾರೆ. ಇದೇ ಕಾರಣಕ್ಕೆನೇ ಮುತ್ತನ್ನು ಇಂಗ್ಲಿಷ್​ನಲ್ಲಿ ‘ಕಿಸ್​ ಇಸ್​ ದಿ ಕೀ ಆಫ್ ಲವ್‘ ಎಂದು ಕರೆಯುತ್ತಾರೆ.

ಇದನ್ನೂ ಓದಿ:ಕಾಂಗ್ರೆಸ್ ನಾಯಕಿ ಹಿಮಾನಿ ನಾರ್ವಲ್ ಕೇಸ್‌ಗೆ ಬಿಗ್ ಟ್ವಿಸ್ಟ್‌.. ಭಯಾನಕ ಸತ್ಯ ಬಿಚ್ಚಿಟ್ಟ ಹಂತಕ; ಹೇಳಿದ್ದೇನು?

ಮೈ ಮರೆಸುವ, ಮತ್ತೇರಿಸುವ, ಉಸಿರಗಟ್ಟಿಸುವಂತಹ ಸುಮಧುರ ಭಾವ ಹುಟ್ಟಿಸುವ ಈ ಚುಂಬನವೇ ಈ ಹಿಂದೆ ಒಂದು ವಿಶ್ವ ದಾಖಲೆಯನ್ನು ನಿರ್ಮಿಸಿತ್ತು. ಅಂದು ಗಂಟೆಗಟ್ಟಲೇ ಬೆಸೆದುಕೊಂಡ ಅಧರಗಳನ್ನು ವಿಶ್ವದ ಅತಿ ದೀರ್ಘವಾದ ಚುಂಬನ ಎಂದು ಪರಿಗಣಿಸಲಾಗಿತ್ತು. ವಿಶ್ವ ಗಿನ್ನಿಸ್ ರೆಕಾರ್ಡ್​ ಬುಕ್​ನಲ್ಲಿ ಈ ಚುಂಬನ ಹೆಸರನ್ನು ಗಳಿಸಿತ್ತು

publive-image

ಇಂತಹದೊಂದು ವಿಶ್ವ ದಾಖಲೆಯನ್ನ ಥೈಲ್ಯಾಂಡ್​​​ನ ಜೋಡಿಯು ನಿರ್ಮಿಸಿದೆ. ಬರೋಬ್ಬರಿ 58 ಗಂಟೆ 35 ನಿಮಿಷ 58 ಸೆಕೆಂಡ್​​ಗಳ ಕಾಲ ನಿರಂತರ ಚುಂಬಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ನಿರಂತರ ಅಷ್ಟು ಗಂಟೆಗಳ ಕಾಲ ಅಧರಕ್ಕಧರ ಬೆಸದುಕೊಂಡೇ ಇದ್ದ ಆ ದಂಪತಿ ಹೆಸರು ಎಕ್ಕಾಚೈ ತಿರಿನಾರತ್ ಮತ್ತು ಆತನ ಪತ್ನಿ ಲಕ್ಸಾನಾ. ಪ್ರಣಯ ಪ್ರಪಂಚದಲ್ಲಿ ಸುದೀರ್ಘಕಾಲ ಚುಂಬಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಇಂತಹದೊಂದು ದಾಖಲೆ ಗಿನ್ನಿಸ್​ ಬುಕ್ ಆಫ್ ರೆಕಾರ್ಡ್​ನಲ್ಲಿ 2013ರಿಂದಲೂ ಇವರ ಹೆಸರಲ್ಲಿಯೇ ಇಂದಿಗೂ ಇದೆ.

ಇದನ್ನೂ ಓದಿ: ಅಬ್ಬಾ.. 20 ಪತ್ನಿಯರು, 104 ಮಕ್ಕಳು! ಮನೆಯನ್ನೇ ಪುಟ್ಟ ಗ್ರಾಮವನ್ನಾಗಿಸಿದ ಪ್ರಚಂಡ ಗಂಡ ಇವನು!

publive-image

ಬಿಬಿಸಿ ಸೌಂಡ್ಸ್ ಪ್ರೊಡಕಾಸ್ಟ್ ವರದಿ ಮಾಡಿರುವ ಪ್ರಕಾರ ಎಕ್ಕಾಚೈ ಮತ್ತು ಲಕ್ಸನಾ ಈ ಬಗ್ಗೆ ಮಾತನಾಡಿದ್ದು. ನಮಗೆ ಈ ಬಗ್ಗೆ ಹೆಮ್ಮೆಯಿದೆ. ಇದು ಗಿನ್ನಿಸ್​ ವಿಶ್ವ ದಾಖಲೆಯಲ್ಲಿ ಜಗತ್ತಿನ ಅತಿ ಸುದೀರ್ಘವಾದ ಚುಂಬನ ಎಂದು ದಾಖಲಾಗಬೇಕು ಎಂದು ಕೇಳಿಕೊಂಡಿದ್ದರು. ಅದರಂತೆಯೇ ಅವರ ಸುದೀರ್ಘ ಚುಂಬನವು ವಿಶ್ವ ದಾಖಲೆಯಾಗಿ 2013ರಿಂದಲೂ ಅವರ ಹೆಸರಲ್ಲಿಯೇ ಇದೆ.


">February 25, 2025

ಆದರೆ ಈಗ ಬಂದಿರುವ ಶಾಕಿಂಗ್ ವಿಷಯ ಏನು ಗೊತ್ತಾ? ಯಾರು ಸುದೀರ್ಘವಾಗಿ ಚುಂಬಿಸುವುದರಲ್ಲಿ ವಿಶ್ವ ದಾಖಲೆ ಬರೆದಿದ್ದರೋ ಯಾರು ಪ್ರಣಯಕ್ಕೆ ಹೊಸದೊಂದು ರೂಪ ಕೊಟ್ಟಿದ್ದರೋ ಅವರೇ ಈಗ ಬೇರೆ ಬೇರಯಾಗಿದ್ದಾರೆ. ನಾವು ಈಗ ಜೊತೆಯಾಗಿಲ್ಲ, ಪ್ರತ್ಯೇಕವಾಗುತ್ತಿದ್ದೇವೆ ಎಂದು ಹೇಳುವ ಮೂಲಕ ಜಗತ್ತಿಗೆ ಶಾಕ್ ಕೊಟ್ಟಿದ್ದಾರೆ. ಅವರು ಬೇರೆಯಾಗುತ್ತಿರುವ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡದಾಗಿ ವೈರಲ್ ಆಗುತ್ತಿದೆ. ಟ್ವಿಟರ್, ಇನ್​ಸ್ಟಾಗ್ರಾಮ್ ಹಾಗೂ ಫೇಸ್​ಬುಕ್​ಗಳಲ್ಲೆಲ್ಲಾ ಇವರ ಪ್ರತ್ಯೇಕವಾಗುತ್ತಿರುವ ಸುದ್ದಿ ಜೋರಾಗಿ ಹರಿದಾಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment