/newsfirstlive-kannada/media/post_attachments/wp-content/uploads/2025/04/GILL_50.jpg)
ಸನ್​ರೈಸರ್ಸ್​ ಹೈದ್ರಾಬಾದ್​ ಜೊತೆಗಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್​ ತಂಡದ ನಾಯಕ ಶುಭ್​ಮನ್ ಗಿಲ್​ ಅಮೋಘವಾದ ಹಾಫ್​ಸೆಂಚುರಿ ಸಿಡಿಸಿದ್ದಾರೆ. ಆದ್ರೆ ಸುಂದರ್ ಕೇವಲ 1 ರನ್​ನಿಂದ ಅರ್ಧಶತಕ ಮಿಸ್ ಮಾಡಿಕೊಂಡಿದ್ದಾರೆ.
ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್​ ಟೈಟನ್ಸ್ ನಾಯಕ ಶುಭಮನ್​ ಗಿಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆಹ್ವಾನದಂತೆ ಬ್ಯಾಟಿಂಗ್​ಗೆ ಆಗಮಿಸಿದ್ದ ಹೈದ್ರಾಬಾದ್ ತಂಡ 8 ವಿಕೆಟ್​ ಕಳೆದುಕೊಂಡು 153 ರನ್​ಗಳ ಟಾರ್ಗೆಟ್ ಅನ್ನು ಗುಜರಾತ್​ ಟೈಟನ್ಸ್​ಗೆ ನೀಡಿತ್ತು.
ಇದನ್ನೂ ಓದಿ: ಸಿರಾಜ್​ ದಾಳಿಗೆ ಮಕಾಡೆ ಮಲಗಿದ ಹೈದ್ರಾಬಾದ್ ಬ್ಯಾಟರ್ಸ್​.. ಟಾರ್ಗೆಟ್ ಇಷ್ಟೇನಾ?
ಈ ಗುರಿ ಬೆನ್ನು ಹತ್ತಿದ್ದ ಗುಜರಾತ್ ತಂಡದ ಓಪನರ್ಸ್​ ಸಾಯಿ ಸುದರ್ಶನ್ ಹಾಗೂ ಶುಭ್​ಮನ್ ಗಿಲ್​ ಉತ್ತಮ ಆರಂಭ ಪಡೆಯಲಿಲ್ಲ. ಸುದರ್ಶನ್ ಕೇವಲ 5 ರನ್​ಗೆ ವಿಕೆಟ್ ಒಪ್ಪಿಸಿದರು. ಇವರ ಬಳಿಕ ಕ್ರೀಸ್​ಗೆ ಆಗಮಿಸಿದ ವಾಷಿಂಗ್ಟನ್ ಸುಂದರ್, ನಾಯಕ ಶುಭ್​ಮನ್​ ಗಿಲ್​ಗೆ ಉತ್ತಮ ಸಾಥ್ ಕೊಟ್ಟರು. ಇದರಿಂದ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶನ್ ಮಾಡಿದ ಶುಭಮನ್​ ಗಿಲ್ ತಂಡವನ್ನು ಗೆಲುವಿನ ದಡಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ.
ಭರ್ಜರಿ ಬ್ಯಾಟಿಂಗ್ ಮಾಡಿದ ಶುಭ್​ಮನ್ ಗಿಲ್​ ಕೇವಲ 36 ಎಸೆತಗಳಲ್ಲಿ 7 ಬೌಂಡರಿ ಸಮೇತ ಅರ್ಧ ಶತಕ ಪೂರೈಸಿದ್ದಾರೆ. ಕ್ಯಾಪ್ಟನ್ ಆಗಿ ತಮ್ಮ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ್ದಾರೆ. ಇನ್ನು ವಾಷಿಂಗ್ಟನ್ ಸುಂದರ್ ಕೂಡ ಅತ್ಯುತ್ತಮವಾದ ಬ್ಯಾಟಿಂಗ್ ಮಾಡಿದರು. 29 ಎಸೆತಗಳನ್ನು ಎದುರಿಸಿದ ಸುಂದರ್ 5 ಫೋರ್, 2 ಸಿಕ್ಸರ್​ಗಳಿಂದ 49 ರನ್​ ಗಳಿಸಿ ಆಡುವಾಗ ಬಿಗ್​ ಶಾಟ್​ ಮಾಡಿದರು. ಆದರೆ ಅದು ಕ್ಯಾಚ್ ಆಯಿತು. ಇದರಿಂದ ಕೇವಲ 1 ರನ್​ನಿಂದ ಸುಂದರ್ ಹಾಫ್​ಸೆಂಚುರಿ ಮಿಸ್ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ