/newsfirstlive-kannada/media/post_attachments/wp-content/uploads/2024/06/chips-packet-in-frog2.jpg)
ಜಾಮ್‌ನಗರ: ಚಿಪ್ಸ್ ಎಂದರೆ ಯಾರಿಗೇ ತಾನೇ ಇಷ್ಟ ಇಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಚಿಪ್ಸ್ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಹಾಗೇ ತಿನ್ನುವ ಎಲ್ಲಾ ಚಿಪ್ಸ್ ಚೆನ್ನಾಗಿ ಇರುತ್ತೆ ಅಂತ ಕಣ್ಣು ಮುಚ್ಚಿ ತಿಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ.
ಇದನ್ನೂ ಓದಿ:ದರ್ಶನ್ ತಲೆಗೂದಲು ಟೆಸ್ಟ್.. ಪವಿತ್ರಾ ಗೌಡ ಸೇರಿ 9 ಆರೋಪಿಗಳಿಗೆ DNA ಪರೀಕ್ಷೆ; ಕಾರಣವೇನು?
ಹೀಗೆ ವ್ಯಕ್ತಿಯೊಬ್ಬರು ತಿನ್ನುತ್ತಿದ್ದ ಆಲೂಗೆಡ್ಡೆ ಚಿಪ್ಸ್ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆ ಪತ್ತೆಯಾಗಿದೆ. ಹೌದು, ಪುಷ್ಕರ್ಧಾಮ್ ಸೊಸೈಟಿಯಲ್ಲಿ ವಾಸಿಸುವ ಜಸ್ಮಿತ್ ಪಟೇಲ್ ಎಂಬುವವರು ಚಿಪ್ಸ್ ಪ್ಯಾಕೆಟ್ ಅನ್ನು ಖರೀದಿಸಿದ್ದರು. ಅರ್ಧದಷ್ಟು ಚಿಪ್ಸ್ ನ್ನು ರಾತ್ರಿಯೇ ತಿಂದು, ಮರುದಿನ ಬೆಳಗ್ಗೆ ಮತ್ತೆ ಚಿಪ್ಸ್ ತಿನ್ನಲು ಹೋದಾಗ ಪ್ಯಾಕೆಟ್ಯೊಳಗೆ ಸತ್ತ ಕಪ್ಪೆ ಪತ್ತೆಯಾಗಿದೆ. ಇದನ್ನು ನೋಡಿ ಒಂದು ಕ್ಷಣ ಗಾಬರಿಗೊಂಡಿದ್ದಾರೆ.
Frog found in a wafer packet in Gujarat's Jamnagar.@TChemmel@news7tamilpic.twitter.com/R1r5xUSKUK
— Ƭɴ Thiru ࿐திருலோகசந்தர் (@R_ThiruChandar)
Frog found in a wafer packet in Gujarat's Jamnagar.@TChemmel@news7tamilpic.twitter.com/R1r5xUSKUK
— Ƭɴ Thiru ࿐திருலோகசந்தர் (@R_ThiruChandar) June 19, 2024
">June 19, 2024
ಕೂಡಲೇ ಜಸ್ಮಿತ್ ಪಟೇಲ್ ಜಾಮ್‌ನಗರ ಮುನ್ಸಿಪಲ್ ಕಾರ್ಪೊರೇಷನ್ ಆಹಾರ ಶಾಖೆಯನ್ನು ಸಂಪರ್ಕಿಸಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವಿಚಾರ ತಿಳಿದ ಕೂಡಲೇ ಈ ಸಂಬಂಧ ಕೇಸ್ ದಾಖಲಿಸಿಕೊಂಡ ಮುನ್ಸಿಪಲ್ ಕಾರ್ಪೊರೇಶನ್‌ನ ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಈ ಕೇಸ್ ಸಂಬಂಧ ಚಿಪ್ಸ್ ಪ್ಯಾಕೆಟ್‌ನ ಉತ್ಪಾದನಾ ಬ್ಯಾಚ್‌ನ ಮಾದರಿಗಳನ್ನು ಸಂಗ್ರಹಿಸಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ