Advertisment

ಟಾಯ್ಲೆಟ್ ರೂಂನಿಂದಲೇ ವಿಚಾರಣೆಗೆ ಹಾಜರಾದ ವ್ಯಕ್ತಿ.. ₹1 ಲಕ್ಷ ದಂಡ ವಿಧಿಸಿದ ನ್ಯಾಯಾಲಯ

author-image
Veena Gangani
Updated On
ಟಾಯ್ಲೆಟ್ ರೂಂನಿಂದಲೇ ವಿಚಾರಣೆಗೆ  ಹಾಜರಾದ ವ್ಯಕ್ತಿ.. ₹1 ಲಕ್ಷ ದಂಡ ವಿಧಿಸಿದ ನ್ಯಾಯಾಲಯ
Advertisment
  • ನ್ಯಾಯಾಲಯಕ್ಕೆ ಅವಮಾನ ಮಾಡಿದವನಿಗೆ 1 ಲಕ್ಷ ದಂಡ
  • ಹೈಕೋರ್ಟ್​ಗೆ​​ ಅವಮಾನ ಮಾಡಿದ್ರೆ ಆಗುತ್ತೆ ತಕ್ಕ ಶಾಸ್ತಿ
  • ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಯ್ತು ವಿಡಿಯೋ

ಅಹಮದಾಬಾದ್: ವ್ಯಕ್ತಿಯೊಬ್ಬ ಟಾಯ್ಲೆಟ್ ಸೀಟ್ ಮೇಲೆ ಕುಳಿತು ಗುಜರಾತ್ ಹೈಕೋರ್ಟ್​​ನ ವರ್ಚ್ಯುವಲ್ ವಿಚಾರಣೆಗೆ ಹಾಜರಾಗಿದ್ದು, ಆತನಿಗೆ ನ್ಯಾಯಾಲಯವು 1 ಲಕ್ಷ ರೂ. ದಂಡ ವಿಧಿಸಿದೆ.

Advertisment

ಇದನ್ನೂ ಓದಿ: ಮಾರ್ಡನ್ ಯುವತಿಯರೇ ನಿಮಗಾಗಿಯೇ ಸುವರ್ಣಾವಕಾಶ.. ಈ ಶೋನಲ್ಲಿ ಭಾಗವಹಿಸುವುದು ಹೇಗೆ ಗೊತ್ತಾ?

ಹೌದು, ಕಾನೂನು ಎಲ್ಲರಿಗೂ ಒಂದೇ. ಯಾರೇ ಆಗಲಿ ಹೈಕೋರ್ಟ್​ಗೆ​​ ಅಗೌರವ ಮತ್ತು ಅವಮಾನಿಸಿದರೇ ಅಂಥವರಿಕೆ ಶಿಕ್ಷೆ ವಿಧಿಸಲಾಗುತ್ತದೆ. ಹೀಗೆ ಜೂನ್ 20ರಂದು ಸಮಾದ್ ಅಬ್ದುಲ್ ರೆಹಮನ್ ಶಾ ಎಂಬಾತ ವ್ಯಕ್ತಿ ಟಾಯ್ಲೆಟ್‌ನಲ್ಲಿ ಕುಳಿತು ಸುಮಾರು 74 ನಿಮಿಷಗಳ ಕಾಲ ನ್ಯಾಯಾಲಯದ ವರ್ಚುಯಲ್ ಹಿಯರಿಂಗ್‌ಗೆ ಹಾಜರಾಗಿದ್ದಾನೆ. ನ್ಯಾಯಾಲಯಕ್ಕೆ ದುರ್ವತನೆ ತೋರಿದ್ದಕ್ಕೆ ಗುಜರಾತ್ ಹೈಕೋರ್ಟ್ ಅಬ್ದುಲ್ ರೆಹಮನ್‌ಗೆ 1 ಲಕ್ಷ ರೂ. ದಂಡ ವಿಧಿಸಿ ಆದೇಶ ವಿಧಿಸಿದೆ.

Advertisment


">July 16, 2025

ನ್ಯಾಯಮೂರ್ತಿ ನಿರ್ಜರ್.ಎಸ್ ದೇಸಾಯಿ ಅವರ ಪೀಠ ಪ್ರಕರಣವೊಂದರ ವಿಚಾರಣೆ ನಡೆಸುವ ವೇಳೆ ಸಮಾದ್ ಅಬ್ದುಲ್ ರೆಹಮನ್ ಶಾ ದುರ್ವತನೆ ತೋರಿದ್ದಾರೆ. ಈ ಘಟನೆಯ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್ ಆಗಿತ್ತು. ಈ ಕುರಿತು ಕೋರ್ಟ್ ನ್ಯಾಯಾಂಗ ನಿಂದನೆಯ ಸುಮೋಟೋ ಕೇಸ್ ದಾಖಲಿಸುವಂತೆ ಸೂಚನೆ ನೀಡಿತ್ತು. ಕೇಸ್ ದಾಖಲು ಆದ ಬಳಿಕ ಆರೋಪಿಗೆ ತನ್ನ ತಪ್ಪಿನ ಅರಿವಾಗಿದ್ದು, ನ್ಯಾಯಾಲಯದ ಮುಂದೆ ಕ್ಷಮೆ ಕೇಳಿದ್ದಾನೆ. ನ್ಯಾಯಲಯಕ್ಕೆ ದುರ್ವರ್ತನೆ ತೋರಿದ್ದ ಅಬ್ದುಲ್ ರೆಹಮನ್ ಹಲ್ಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
.

Advertisment
Advertisment
Advertisment