newsfirstkannada.com

ನಿಧಿಗಾಗಿ 5 ವರ್ಷಗಳಿಂದ ಹುಡುಕಾಟ.. ಚಿನ್ನದ ಬೇಟೆಯ ಬೆನ್ನು ಬಿದ್ದವರಿಗೆ ಸಿಕ್ತು ಪುರಾತನ ನಗರ! ಇದೆಂಥಾ ಅಚ್ಚರಿ!

Share :

Published February 25, 2024 at 9:52pm

Update February 25, 2024 at 9:53pm

    ನಿಧಿಯ ಆಸೆಗೆ ಬಿದ್ದು ಭೂಮಿ ಅಗೆಯುತ್ತಿದ ಜನರು

    ‘ಹರಪ್ಪ’ ಅವಶೇಷಗಳನ್ನು ಕಂಡು ಜನರು ದಂಗು!

    ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಅಚ್ಚರಿ

ಚಿನ್ನ, ವಜ್ರ, ವೈಡೂರ್ಯದ ಸಿಗುತ್ತೆ ಅಂತ ಆಸೆಗೆ ಬಿದ್ದು ಕಳೆದ ಐದು ವರ್ಷಗಳಿಂದ ಸಿಕ್ಕ ಸಿಕ್ಕಲ್ಲಿ ಗುಂಡಿ ತೆಗೆಯುತ್ತಿದ್ದ ಹಳ್ಳಿಗರು ಪುರಾತನ ನಗರವೊಂದನ್ನ ಪತ್ತೆ ಮಾಡಿದ್ದಾರೆ. ಹರಪ್ಪನ ನಾಗರಿಕತೆ ಕಾಲದ ಪುರಾತನ ಅವಶೇಷಗಳು ಪತ್ತೆಯಾಗಿದ್ದು, ಇಡೀ ಜಗತ್ತೇ ಆ ಹಳ್ಳಿಯತ್ತ ಕೂತಹಲದಿಂದ ನೋಡುವಂತಾಗಿದೆ.

ಹರಪ್ಪ ನಾಗರಿಕತೆ ಅಥವಾ ಸಿಂಧೂ ನಾಗರಿಕತೆಯ ಬಗ್ಗೆ ನಾವು ಈಗಾಗಲೇ ಸಾಕಷ್ಟು ಬಾರಿ ಕೇಳಿರ್ತೀವಿ. ನಾಗರಿಕತೆಯ ಹುಟ್ಟಿನ ಆರಂಭದಲ್ಲಿಯೇ ಆಧುನಿಕತೆಯನ್ನು ಅಳವಡಿಸಿಕೊಂಡಿದ್ದ ಹರಪ್ಪ ನಾಗರಿಕತೆ ಇಂದಿಗೂ ಅಚ್ಚರಿಯ ತಾಣವಾಗಿದೆ. ಈಗ ಇದೇ ಪ್ರದೇಶಕ್ಕೆ ಸಂಬಂಧಪಟ್ಟಂತೆ ಹೊಸ ವಿಶೇಷತೆಯೊಂದು ಪತ್ತೆಯಾಗಿದೆ.

ಭೂಮಿ ಅಗೆಯುವ ವೇಳೆ ಪುರಾತನ ನಗರ ಸಿಕ್ತು

ನಿಧಿ ಗುಜರಾತಿನ ಕಚ್ ಜಿಲ್ಲೆಯ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಲೋದ್ರಾಣಿ ಹಳ್ಳಿಯ ಜನರು ಚಿನ್ನದ ಬೇಟೆಯ ಬೆನ್ನುಬಿದ್ದಿದ್ರು. ಬಂಗಾರ ಸಿಕ್ಕರೇ ನಮ್ಮ ಬಾಳು ಬಂಗಾರ ಆಗುತ್ತೆ ಅಂತ ನಿಧಿಯ ಆಸೆಗೆ ಬಿದ್ದು ಕಳೆದ ಐದು ವರ್ಷಗಳಿಂದ ಕಂಡ ಕಂಡ ಭೂಮಿ ಅಗೆಯುತ್ತಿದ್ರು.. ಹೀಗೆ ಭೂಮಿಯನ್ನ ಅಗೆಯುತ್ತಿದ್ದವರಿಗೆ ಸಿಕ್ಕಿದ್ದು ಚಿನ್ನವಲ್ಲ.. ಸುಮಾರು 5 ಸಾವಿರ ವರ್ಷಗಳಷ್ಟು ಪುರಾತನ ನಗರವೊಂದು ಲೋದ್ರಾಣಿ ಜನರ ಕಣ್ಣಿಗೆ ಬಿದ್ದಿದೆ. ಭೂಮಿ ಅಗೆಯುವ ವೇಳೆ ಹರಪ್ಪ ನಾಗರಿಕತೆಯ ಅವಶೇಷಗಳು ಪತ್ತೆಯಾಗಿದ್ದು, ಈ ವಿಷಯ ತಿಳಿದು ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಅಚ್ಚರಿ ಎದುರಾಗಿದೆ.

ಸ್ಥಳಕ್ಕೆ ದೌಡಾಯಿಸಿದ ಪುರಾತತ್ವ ಇಲಾಖೆ ತಜ್ಞರು!

ಇನ್ನು, ಚಿನ್ನ ಸಿಗುತ್ತದೆ ಅಂತ ಸಿಕ್ಕ ಸಿಕ್ಕ ಕಡೆ ಗುಂಡಿ ಅಗೆಯುತ್ತಿದ್ದವರಿಗೆ ಚಿನ್ನದ ಬದಲು ಹಳೆ ಕಾಲದ ಅವಶೇಷಗಳನ್ನು ಸಿಕ್ಕಿರುವುದನ್ನು ಕಂಡು ಜನ ದಂಗಾಗಿದ್ದಾರೆ. ತಕ್ಷಣವೇ ಈ ವಿಷಯವನ್ನು ಕಛ್​​​ ನಗರದಲ್ಲಿರುವ ಯುನೆಸ್ಕೋ ಪಾರಂಪರಿಕ ತಾಣವಾದ ಲೋಧವೀರದಲ್ಲಿರುವ​​ ಪುರಾತತ್ವ ಶಾಸ್ತ್ರಜ್ಞರಿಗೆ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪುತಾತತ್ವ ಇಲಾಖೆ ಅಧಿಕಾರಿಗಳು ಅವಶೇಷಗಳು ಪರಿಶೀಲನೆ ನಡೆಸಿ, ಹರಪ್ಪ ನಾಗರಿಕತೆಯ ಅವಶೇಷಗಳನ್ನ ಹೋಲುತ್ತದೆ ಎಂಬ ಸುಳಿವು ಕೊಟ್ಟಿದ್ದಾರೆ.

ಪತ್ತೆಯಾದ ಅವಶೇಷಗಳಿಂದ ತಜ್ಞರು ಇನ್ನು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಹರಪ್ಪ ನಾಗರಿಕತೆಯಲ್ಲಿ ಉತ್ಖನನ ಮಾಡಿದಾಗ ಸಿಕ್ಕ ಮಡಿಕೆಗಳಿಗೂ ಮತ್ತು ಈಗ ಸಿಕ್ಕ ಮಡಿಕೆಗಳಿಗೂ ಹೆಚ್ಚು ಸಾಮ್ಯತೆ ಕಂಡುಬಂದಿದೆ. ಈ ಪ್ರದೇಶದಲ್ಲಿ ಮೊದಲ ಜನರು ವಾಸಿಸುತ್ತಿದ್ದರು. ಈ ಪ್ರದೇಶವೂ ಹರಪ್ಪ, ಮೆಹೆಂಜೋದಾರೋ ನಗರದಂತೆ ಒಂದು ಪ್ರಮುಖ ನಗರವಾಗಿತ್ತು, ಇನ್ನು ಹೆಚ್ಚಿನ ಉತ್ಖನನ ನಡೆಸಿದರೇ ಹೆಚ್ಚಿನ ಮಾಹಿತಿಯನ್ನ ಕಲೆ ಹಾಕಬಹುದು ಎಂದು ಪುರಾತತ್ವ ಇಲಾಖೆಯ ತಜ್ಞರು ಅಭಿಪ್ರಾಯವನ್ನ ಪಟ್ಟಿದ್ದಾರೆ.

ಎರಡು ಸಮುದ್ರಗಳನ್ನು ಹೊಂದಿದ್ದ ನಗರ!

ಮಾಹಿತಿ ಪ್ರಕಾರ ಈ ಪ್ರದೇಶವು ಸುಮಾರು 5 ಸಾವಿರ ವರ್ಷಗಳ ಹಿಂದೆ ಎರಡು ಸಮುದ್ರಗಳನ್ನು ಹೊಂದಿತ್ತು ಎಂದು ಹೇಳಲಾಗಿದ್ದು, ಮರುಭೂಮಿ ಸಮೀಪದಲ್ಲಿರು ಕಾರಣದಿಂದ ಕಾಲ ಕ್ರಲಮೇಣ ಮರಳಿನಡಿ ಹೂತುಹೋಗಿದೆ. ಈ ಪ್ರದೇಶದಲ್ಲಿ 1967-68ರಲ್ಲಿ ಪುರಾತತ್ವಶಾಸ್ತ್ರಜ್ಞ ಜೆ.ಪಿ.ಜೋಶಿಯವರು ಉತ್ಖನನ ನಡೆಸಿದ್ದರು ಆಗ ಯಾವುದೇ ಪುರಾವೆಗಳು ಸಿಗದಿದ್ದರಿಂದ ಅರ್ಧಕ್ಕೆ ಕೈ ಬಿಟ್ಟಿದ್ದರು. ಆದರೇ ಗ್ರಾಮಸ್ಥರ ನಿಧಿಯ ಆಸೆಯಿಂದ ಈ ನಗರ ಮತ್ತೆ ಪತ್ತೆಯಾಗಿದ್ದು, ಇದರಿಂದಾಗಿ ಪುರಾತತ್ವ ಇಲಾಖೆಗೆ ಈ ನಗರದ ಬಗ್ಗೆ ಇನ್ನಷ್ಟು ಹೆಚ್ಚು ಅಧ್ಯಯನ ಮಾಡಲು ಸಹಕಾರಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಧಿಗಾಗಿ 5 ವರ್ಷಗಳಿಂದ ಹುಡುಕಾಟ.. ಚಿನ್ನದ ಬೇಟೆಯ ಬೆನ್ನು ಬಿದ್ದವರಿಗೆ ಸಿಕ್ತು ಪುರಾತನ ನಗರ! ಇದೆಂಥಾ ಅಚ್ಚರಿ!

https://newsfirstlive.com/wp-content/uploads/2024/02/harappa.jpg

Load More