/newsfirstlive-kannada/media/post_attachments/wp-content/uploads/2025/07/KERALA_PADMANABHA_New.jpg)
ಕೇರಳದ ಪದ್ಮನಾಭಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದ ಭಕ್ತರೊಬ್ಬರು ತಮ್ಮ ಕನ್ನಡಕದಲ್ಲೇ ಹಿಡನ್ ಕ್ಯಾಮೆರಾ ಇಟ್ಟುಕೊಂಡು ಹೋಗಿ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಕನ್ನಡಕದಲ್ಲಿ ಹಿಡನ್ ಕ್ಯಾಮೆರಾ ಇಟ್ಟುಕೊಂಡಿದ್ದು ಏಕೆ ಎಂದು ಕೇರಳದ ತಿರುವನಂತಪುರ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.
66 ವರ್ಷದ ಗುಜರಾತ್‌ನ ಸುರೇಂದ್ರ ಶಾ, ತಿರುವನಂತಪುರದ ಪದ್ಮನಾಭ ಸ್ವಾಮಿ ದೇವಾಲಯ ಪ್ರವೇಶಿಸುವಾಗ ಸ್ಮಾರ್ಟ್ ಕನ್ನಡಕದಲ್ಲಿ ಹಿಡನ್ ಕ್ಯಾಮೆರಾ ಇಟ್ಟುಕೊಂಡಿದ್ದರು. ತಮ್ಮ ಪತ್ನಿ, ಸೋದರಿ, ಕುಟುಂಬದ ಇತರ ಸದಸ್ಯರ ಜೊತೆ ದೇವಾಲಯ ಪ್ರವೇಶಕ್ಕೆ ಯತ್ನಿಸುವಾಗ, ಭದ್ರತಾ ಸಿಬ್ಬಂದಿ, ಕನ್ನಡಕದಲ್ಲಿ ಗ್ಲೇರ್ ಬಂದಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ತಕ್ಷಣವೇ ಎಂಟ್ರಿ ಬಾಗಿಲಲ್ಲಿ ಸುರೇಂದ್ರ ಶಾ ಅವರನ್ನು ತಡೆದು ನಿಲ್ಲಿಸಿದ್ದಾರೆ.
ಸ್ಮಾರ್ಟ್ ಕನ್ನಡಕವನ್ನು ಪರಿಶೀಲಿಸಿದಾಗ, ಹಿಡನ್ ಕ್ಯಾಮೆರಾ ಇರೋದು ಧೃಢಪಟ್ಟಿದೆ. ಇದು ದೇವಾಲಯದ ಭದ್ರತಾ ನಿಯಮ ಉಲಂಘನೆ. ಹೀಗಾಗಿ ಪೊಲೀಸರು ಬಿಎನ್‌ಎಸ್ ಸೆಕ್ಷನ್ 223 ರಡಿ ಕೇಸ್ ದಾಖಲಿಸಿದ್ದಾರೆ. ಆದರೇ, ತಕ್ಷಣವೇ ಸುರೇಂದ್ರ ಶಾರನ್ನು ಪೊಲೀಸರು ಬಂಧಿಸಿಲ್ಲ. ಆರೋಪಿಗೆ ನೋಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗಲು ಪೊಲೀಸರು ಸೂಚಿಸಿದ್ದಾರೆ. ಕುಟುಂಬದ ಜೊತೆ ಗುಜರಾತ್‌ಗೆ ವಾಪಸ್ ಹೋಗಲು ಅವಕಾಶ ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2025/07/KERALA_PADMANABHA.jpg)
ಸುರೇಂದ್ರ ಶಾ, ಕೃತ್ಯದ ಹಿಂದೆ ಯಾವುದೇ ದುರುದ್ದೇಶ ಕಾಣುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೇ, ವಿಸ್ತೃತ ತನಿಖೆ ಪೊಲೀಸರು ಮುಂದುವರಿಸಿದ್ದಾರೆ. ಕಳೆದ ತಿಂಗಳು ಪದ್ಮನಾಭಸ್ವಾಮಿ ದೇವಾಲಯದಲ್ಲಿ 270 ವರ್ಷಗಳ ಬಳಿಕ ಮಹಾ ಕುಂಭಾಭಿಷೇಕ ನಡೆದಿತ್ತು, ಸಾವಿರಾರು ಭಕ್ತಾದಿಗಳು ಮಹಾಕುಂಭಾಭಿಷೇಕದಲ್ಲಿ ಭಾಗಿಯಾಗಿದ್ದರು.
ಕುಂಭಾಭಿಷೇಕ ಜೊತೆಗೆ 300 ವರ್ಷಗಳ ಹಳೆಯ ವಿಶ್ವಕಸೇನಾ ಮೂರ್ತಿಯನ್ನು ಮತ್ತೆ ಪ್ರತಿಷ್ಠಾಪನೆ ಮಾಡಲಾಗಿತ್ತು. ದೇವಾಲಯದ ಆವರಣದಲ್ಲೇ ಇರುವ ತಿರುವಂಬಾಡಿ ಶ್ರೀಕೃಷ್ಣ ಸ್ವಾಮಿ ದೇವಾಲಯದಲ್ಲಿ ಅಷ್ಟಬಂಧ ಕಳಸ ಪ್ರತಿಷ್ಠಾಪನಾ ಕಾರ್ಯವೂ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us
 Follow Us
                                    


