MIvGT: ಗುಜರಾತ್ ಟೈಟಾನ್ಸ್‌ಗೆ ರೋಚಕ ಗೆಲುವು; ಪಾಯಿಂಟ್ಸ್ ಟೇಬಲ್‌ನಲ್ಲಿ RCBಗೆ ಶಾಕ್‌!

author-image
admin
Updated On
MIvGT: ಗುಜರಾತ್ ಟೈಟಾನ್ಸ್‌ಗೆ ರೋಚಕ ಗೆಲುವು; ಪಾಯಿಂಟ್ಸ್ ಟೇಬಲ್‌ನಲ್ಲಿ RCBಗೆ ಶಾಕ್‌!
Advertisment
  • ಮುಂಬೈನಲ್ಲಿ ಅಬ್ಬರಿಸಿದ ವಿಲ್ ಜಾಕ್ಸನ್ ಆಕರ್ಷಕ ಅರ್ಧ ಶತಕ
  • MI ಪರ ಸೂರ್ಯ ಕುಮಾರ್ ಯಾದವ್ ಕೂಡ 35 ರನ್‌ಗೆ ಔಟ್
  • ಸಾಯಿ ಕಿಶೋರ್ ಅವರಿಗೆ ವಿಕೆಟ್‌ ಒಪ್ಪಿಸಿದ ಹಾರ್ದಿಕ್ ಪಾಂಡ್ಯ

ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಎಡವಿದೆ. ಗುಜರಾತ್ ಟೈಟಾನ್ಸ್‌ ತಂಡವನ್ನ ಕಟ್ಟಿ ಹಾಕುವಲ್ಲಿ ಮುಂಬೈ ಇಂಡಿಯನ್ಸ್ ಸಂಪೂರ್ಣ ವಿಫಲವಾಗಿದೆ. ನಾಯಕ ಶುಭಮನ್ ಗಿಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನದೊಂದಿಗೆ GT ಗೆದ್ದು ಬೀಗಿದೆ. IPL ಪಾಯಿಂಟ್ಸ್ ಟೇಬಲ್‌ನಲ್ಲಿ RCBಗೂ ಗುಜರಾತ್ ಟೈಟಾನ್ಸ್‌ ಬಿಗ್ ಶಾಕ್‌ ಕೊಟ್ಟಿದೆ.

publive-image

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್‌ ಆರಂಭದಲ್ಲಿ ಆಘಾತವನ್ನ ಎದುರಿಸಿತು. 2 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡ ಮುಂಬೈ ಘಟಾನುಘಟಿ ಆಟಗಾರರು ಬಹಳ ಬೇಗ ತಮ್ಮ ವಿಕೆಟ್ ಒಪ್ಪಿಸಿದರು.

ರೋಹಿತ್ ಶರ್ಮಾ ಕೇವಲ 7 ರನ್‌ಗೆ ಔಟ್‌ ಆಗಿ ಮುಂಬೈ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದರು. ವಿಲ್ ಜಾಕ್ಸನ್ ಮಾತ್ರವೇ ಅರ್ಧ ಶತಕ ಸಿಡಿಸಿ ಮುಂಬೈ ಇಂಡಿಯನ್ಸ್ ಚೇತರಿಸಿಕೊಳ್ಳಲು ನೆರವಾದರು. ಆದರೆ 53 ರನ್ ಸಿಡಿಸಿ ವಿಲ್ ಜಾಕ್ಸನ್ ಔಟ್ ಆಗುತ್ತಿದ್ದಂತೆ, ಸೂರ್ಯ ಕುಮಾರ್ ಯಾದವ್ ಕೂಡ 35 ರನ್‌ಗೆ ಪೆವಿಲಿಯನ್‌ಗಳ ಮುಖ ಮಾಡಿದರು.

publive-image

ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ಕೇವಲ 1 ರನ್‌ಗೆ ಸಾಯಿ ಕಿಶೋರ್ ಬೌಲಿಂಗ್‌ಗೆ ಔಟ್ ಆದರು. ಕೊನೆಗೆ 20 ಓವರ್‌ಗಳಲ್ಲಿ ಮುಂಬೈ ಇಂಡಿಯನ್ಸ್‌ 8 ವಿಕೆಟ್ ನಷ್ಟಕ್ಕೆ 155 ರನ್‌ ಗಳಿಸುವಷ್ಟರಲ್ಲಿ ಸುಸ್ತಾಗಿ ಹೋಯ್ತು.

publive-image

156 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್‌ ಕೂಡ ಆರಂಭದಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ಸಾಯಿ ಸುದರ್ಶನ್ 5 ರನ್‌ಗೆ ಔಟಾದರು. ನಂತರ ಶುಭಮನ್ ಗಿಲ್‌ ಹಾಗೂ ಜಾಸ್ ಬಟ್ಲರ್‌ GT ತಂಡಕ್ಕೆ ನೆರವಾದರು. ನಾಯಕ ಶುಭಮನ್ ಗಿಲ್‌ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದರೆ ಜಾಸ್ ಬಟ್ಲರ್‌ 30 ರನ್‌ಗಳಿಗೆ ಔಟ್ ಆದರು.

ಗುಜರಾತ್ ಟೈಟಾನ್ಸ್ ಗೆಲ್ಲುವ ವಿಶ್ವಾಸದಲ್ಲಿ ಇರುವಾಗಲೇ ಪಂದ್ಯಕ್ಕೆ ಮಳೆಯ ಅಡ್ಡಿಯಾಯಿತು. 14 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ GT 107 ರನ್‌ಗಳಿಸಿತ್ತು. ಮಳೆಯ ವಿರಾಮದ ಬಳಿಕ ಗುಜರಾತ್ 6 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತ್ತು. ಮತ್ತೆ ಮುಂಬೈನಲ್ಲಿ ಮಳೆ ಬಂದು ಪಂದ್ಯವನ್ನು ನಿಲ್ಲಿಸಲಾಯಿತು. ಟಾರ್ಗೆಟ್ 147 ರನ್‌ಗಳನ್ನು ಎದುರಿಸಿದ ಗುಜರಾತ್ ಟೈಟಾನ್ಸ್ 3 ವಿಕೆಟ್‌ಗಳಿಂದ ಗೆದ್ದು ಬೀಗಿದೆ.

ಇದನ್ನೂ ಓದಿ: ಕೊಹ್ಲಿ ಪೋಸ್ಟರ್​ಗೆ ಮೇಕೆ ಕಡಿದು ರಕ್ತಾಭಿಷೇಕ.. CSK ವಿರುದ್ಧ RCB ಗೆಲ್ತಿದ್ದಂತೆ ಅಂಧಾಭಿಮಾನ..! 

ಪಾಯಿಂಟ್ಸ್ ಟೇಬಲ್‌ ಚೇಂಜ್‌!
ಮುಂಬೈ ವಿರುದ್ಧ ಗುಜರಾತ್ ಟೈಟಾನ್ಸ್ ಭರ್ಜರಿ ಗೆಲುವು ಸಾಧಿಸೋ ಮೂಲಕ IPL ಪಾಯಿಂಟ್ಸ್ ಟೇಬಲ್‌ನಲ್ಲಿ ಟಾಪ್ ಆಗಿದೆ. 11 ಪಂದ್ಯಗಳನ್ನು ಆಡಿರುವ ಗುಜರಾತ್ ಟೈಟಾನ್ಸ್ 8 ಪಂದ್ಯಗಳನ್ನ ಗೆದ್ದು ಟೇಬಲ್ ಟಾಪರ್ ಆಗಿದೆ. ರನ್ ರೇಟ್‌ನಲ್ಲಿ RCB ತಂಡವನ್ನೇ ಗುಜರಾತ್ ಟೈಟಾನ್ಸ್ ಹಿಂದಿಕ್ಕಿ ನಂ.1 ಪಟ್ಟಕ್ಕೇರಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment