ಗುಜರಾತ್​ ಟೈಟನ್ಸ್​ ಮಹತ್ವದ ಪಂದ್ಯದಲ್ಲಿ ಎಡವಿದ್ದೆಲ್ಲಿ.. ಮುಂಬೈ ವಿಕೆಟ್ ಬೇಟೆಯಾಡಿದ್ದು ಹೇಗೆ?

author-image
Bheemappa
Updated On
ಗುಜರಾತ್​ ಟೈಟನ್ಸ್​ ಮಹತ್ವದ ಪಂದ್ಯದಲ್ಲಿ ಎಡವಿದ್ದೆಲ್ಲಿ.. ಮುಂಬೈ ವಿಕೆಟ್ ಬೇಟೆಯಾಡಿದ್ದು ಹೇಗೆ?
Advertisment
  • ಓಪನರ್​ ಸಾಯಿ ಸುದರ್ಶನ್​ ಅರ್ಧಶತಕದ ​ಹೋರಾಟ ವ್ಯರ್ಥ
  • IPL​ನಲ್ಲಿ ಗುಜರಾತ್​ ಎಲಿಮಿನೇಟರ್​, ಮುಂಬೈ ಕ್ವಾಲಿಫೈಯರ್​
  • ಹಾಗೇ ಬಂದು ಹೀಗೆ ಹೋದ ಜಿಟಿ ಕ್ಯಾಪ್ಟನ್​ ಶುಭ್​ಮನ್​ ಗಿಲ್​

ಬಿಗ್​ ಟಾರ್ಗೆಟ್​​ ಚೇಸಿಂಗ್​ಗಿಳಿದ ಗುಜರಾತ್​ ಟೈಟನ್ಸ್​ ಕೂಡ ಸಖತ್​ ಫೈಟ್​ ಕೊಟ್ಟಿತು. ಆದ್ರೆ, ಬ್ಯಾಟ್ಸ್​ಮನ್​ಗಳ ಕೆಟ್ಟ ಹೊಡೆತ ಮಹತ್ವದ ಪಂದ್ಯ​ ಗೆಲುವಿಗೆ ಮುಳುವಾಯಿತು. ಹಾಗಾದ್ರೆ ಚೇಸಿಂಗ್​ ವೇಳೆ ಗುಜರಾತ್​ ಎಡವಿದ್ದೆಲ್ಲಿ, ಮುಂಬೈ ಇಂಡಿಯನ್ಸ್​​ ಗೆದ್ದಿದ್ದೆಲ್ಲಿ?.

229 ರನ್​ಗಳ ಬಿಗ್​ ಟಾರ್ಗೆಟ್​ ಚೇಸಿಂಗ್​ಗಿಳಿದ ಗುಜರಾತ್​ ಟೈಟನ್ಸ್​​​ ಆರಂಭದಲ್ಲೇ ಆಘಾತ ಎದುರಿಸಿತು. ನಾಯಕ ಶುಭ್​ಮನ್​ ಗಿಲ್​ ಆರಂಭದಲ್ಲೇ ಕೈ ಕೊಟ್ಟರು. ಮೊದಲ ಓವರ್​ನಲ್ಲೇ ಟ್ರೆಂಟ್​​ ಬೋಲ್ಟ್,​​​ ಶುಭ್​ಮನ್​ ವಿಕೆಟ್​ ಬೇಟೆಯಾಡಿದರು.

publive-image

2ನೇ ವಿಕೆಟ್​​ ಜೊತೆಯಾದ ಸಾಯಿ ಸುದರ್ಶನ್​ -ಕುಸಾಲ್​ ಮೆಂಡೀಸ್​​ ಗುಜರಾತ್​​ ತಂಡಕ್ಕೆ ಚೇತರಿಕೆ ನೀಡಿದರು. ವಿಕೆಟ್​ ಕಳೆದುಕೊಂಡ ಹೊರತಾಗಿಯೂ ಪವರ್​​ ಪ್ಲೇನಲ್ಲಿ ಪವರ್​ಫುಲ್​ ಆಟವಾಡಿದ ಸುದರ್ಶನ್​, ಮೆಂಡೀಸ್​​ 66 ಕಲೆ ಹಾಕಿದರು.

9 ಎಸೆತಗಳಲ್ಲಿ 20 ರನ್​ಗಳಿಸಿದ ಮೆಂಡೀಸ್​​​ ದುರಾದೃಷ್ಟವಶಾತ್​​ ಹಿಟ್​ ವಿಕೆಟ್​​​ ಆಗಿ ನಿರ್ಗನಿಸಿದರು. ಮತ್ತೊಂದೆಡೆ ಬೊಂಬಾಟ್​ ಆಟ ಮುಂದುವರೆಸಿದ ಸಾಯಿ ಸುದರ್ಶನ್​​ ಜಸ್ಟ್​ 28 ಎಸೆತಗಳಲ್ಲಿ ಹಾಫ್​​​​ ಸೆಂಚುರಿ ಸಿಡಿಸಿ ಸಂಭ್ರಮಿಸಿದರು.

4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ವಾಷಿಂಗ್ಟನ್​ ಸುಂದರ್​​, ಸಾಯಿ ಸುದರ್ಶನ್​ ಜೊತೆಗೆ ಬೊಂಬಾಟ್​ ಜೊತೆಯಾಟವಾಡಿದರು. ಅಬ್ಬರದ ಆಟವಾಡಿದ ಈ ಜೋಡಿ 3ನೇ ವಿಕೆಟ್​​​ಗೆ ಜಸ್ಟ್​ 44 ಎಸೆತಗಳಲ್ಲೇ 84 ರನ್​ಗಳಿಸಿತು. 3 ಸಿಕ್ಸರ್​​, 5 ಬೌಂಡರಿ ಬಾರಿಸಿ ಮುಂಬೈ ಬೌಲರ್​​ಗಳನ್ನ ಕಾಡಿದ ಸುಂದರ್​​ 24 ಎಸೆತಗಳಲ್ಲಿ 48 ರನ್​ಗಳಿಸಿದರು.

ಸುಂದರ್​-ಸುದರ್ಶನ್​ ಅದ್ಭುತ ಜೊತೆಯಾಟಕ್ಕೆ 14ನೇ ಓವರ್​ನ 4ನೇ ಎಸೆತದಲ್ಲಿ ಬೂಮ್ರಾ ಬ್ರೇಕ್​ ಹಾಕಿದರು. ಬೂಮ್ರಾ ಯಾರ್ಕರ್​​ಗೆ ಸುಂದರ್​ ಕ್ಲೀನ್​ಬೋಲ್ಡ್​ ಆಗಿ ನಿರ್ಗಮಿಸಿದರು. ಈ ವಿಕೆಟ್​ ಪತನದೊಂದಿಗೆ ಪಂದ್ಯದಲ್ಲಿ ಮುಂಬೈ ಬಾಯ್ಸ್​ ದರ್ಬಾರ್​ ಆರಂಭವಾಯಿತು.

ಇದನ್ನೂ ಓದಿ: ಕೇರಳ ಸಮುದಾಯದಿಂದ ಪಾಕ್​ ಮಾಜಿ ಕ್ರಿಕೆಟರ್ ಶಾಹಿದಿ​ ಅಫ್ರಿದಿಗೆ ಗ್ರ್ಯಾಂಡ್​ ವೆಲ್​ಕಮ್​.. ಆಕ್ರೋಶ!

publive-image

ಸುಂದರ್​ 10 ಬೌಂಡರಿ, 1 ಸಿಕ್ಸರ್​ ಸಿಡಿಸಿದ ಸಾಯಿ ಸುದರ್ಶನ್​ 49 ಎಸೆತಗಳಲ್ಲಿ 81 ರನ್​ಗಳಿಸಿ ಔಟಾದ್ರು. ರಿಚರ್ಡ್​ ಗ್ಲೆಸೆನ್​ ಬೌಲಿಂಗ್​ನಲ್ಲಿ ಸ್ಕೂಪ್​ ಶಾಟ್​ ಪ್ಲೇ ಮಾಡಲು ಹೋಗಿ ಸುದರ್ಶನ್​ ಕೈ ಸುಟ್ಟುಕೊಂಡರು.

4 ಬೌಂಡರಿ ಬಾರಿಸಿ ಭರವಸೆ ಮೂಡಿಸಿದ್ದ ಶಫ್ರೆನ್​ ರುದರ್​ಫೋರ್ಡ್​ ಮಹತ್ವದ ಘಟ್ಟದಲ್ಲಿ ಕೈ ಕೊಟ್ಟರು. 19ನೇ ಓವರ್​ನ ಮೊದಲ ಎಸೆತದಲ್ಲೇ ಟ್ರೆಂಟ್​ ಬೋಲ್ಟ್​​ ರುದರ್​ಫೋರ್ಟ್​ ವಿಕೆಟ್​​ ಉರುಳಿಸಿದರು. ಬಳಿಕ ಕಣಕ್ಕಿಳಿದ ಶಾರೂಖ್​ ಖಾನ್​, ರಾಹುಲ್​ ತೆವಾಟಿಯಾ ಕೂಡ ಮಿಂಚಲಿಲ್ಲ.

20 ಓವರ್​ಗಳ ಅಂತ್ಯಕ್ಕೆ 6 ವಿಕೆಟ್​ ಕಳೆದುಕೊಂಡು ಗುಜರಾತ್​ ಟೈಟನ್ಸ್​ ಸೋಲಿಗೆ ಶರಣಾಯಿತು. 20 ರನ್​ಗಳ ಅಂತರದಿಂದ ಗೆದ್ದ ಮುಂಬೈ ಇಂಡಿಯನ್ಸ್​ ಕ್ವಾಲಿಫೈಯರ್​​ 2ಗೆ ಕ್ವಾಲಿಫೈ ಆದ್ರೆ, ಎಡವಿದ ಗುಜರಾತ್​ ಎಲಿಮಿನೇಟ್​ ಆಯಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment