/newsfirstlive-kannada/media/post_attachments/wp-content/uploads/2025/03/GT-VS-MI.jpg)
ಅತಿಹೆಚ್ಚು ಐಪಿಎಲ್ ಟ್ರೋಫಿ ಗೆದ್ದುಕೊಂಡ ತಂಡ ಎಂದು ಹೆಮ್ಮೆಯಿಂದ ಬೀಗುತ್ತಿದ್ದ ಮುಂಬೈ ಇಂಡಿಯನ್ಸ್, ಸತತ ಸೋಲಿನಿಂದ ಕಂಗಾಲಾಗಿದೆ. ಈ ಮೊದಲು ಚೆನ್ನೈ ವಿರುದ್ಧ ಹೀನಾಯವಾಗಿ ಸೋತಿದ್ದ ಹಾರ್ದಿಕ್ ಪಡೆ ಈಗ, ಗುಜರಾತ್ ಟೈಟನ್ಸ್ ವಿರುದ್ಧವು ನೆಲಕಚ್ಚಿದೆ.
ಅಹ್ಮದಾಬದಾದ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬಾಲಿಂಗ್ ಆಯ್ದುಕೊಂಡು ಮುಂಬೈ ತಂಡ ಆರಂಭದಲ್ಲಿಯೇ ಎಡವಿತು. ಮೊದಲ ವಿಕೆಟ್ ಕೀಳಲು ಅದು ತೆಗೆದುಕೊಂಡಿದ್ದು ಬರೋಬ್ಬರಿ 8.3 ಓವರ್ಗಳು. ಅಷ್ಟರಲ್ಲಿ ಆರಂಭಿಕರಾದ ಸಾಯಿ ಸುದರ್ಶನ್ ಹಾಗೂ ಶುಭಮನ್ ಗಿಲ್ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ನಂತರ ಬಂದ ಜೊಸ್ ಬಟ್ಲರ್ 24 ಬೌಲ್ಗಲಿಗೆ 39 ರನ್ ಸಿಡಿಸುವ ಮೂಲಕ ಮುಂಬೈ ಪಡೆಗೆ ಮಾರಕಾವಾದರು. ಶೆರ್ಫೇನ್ ರುದರ್ಫೋರ್ಡ್ ಸಾಯಿ ಸುದರ್ಶನ್ ಅರ್ಧಶತಕ ಹಾಗೂ ಶುಭಮನ್ ಗಿಲ್, ಬಟ್ಲರ್ ಅದ್ಭುತ ಬ್ಯಾಟಿಂಗ್ನಿಂದಾಗಿ ಗುಜರಾತ್ ಟೈಟನ್ಸ್ ತಂಡ 20 ಓವರ್ಗಳಿಗೆ 196 ರನ್ ಗಳಿಸಿತ್ತು.
ಆರಂಭದಲ್ಲಿ ಮತ್ತೆ ಎಡವಿದ ಮುಂಬೈ ತಂಡ
ಇನ್ನು ಬೃಹತ್ ಮೊತ್ತ ಬೆನ್ನಟ್ಟಿದ ಮುಂಬೈ ತಂಡ ಆರಂಭದಲ್ಲಿಯೇ ಎಡವಿತು. ಮೊದಲ ಓವರ್ನಲ್ಲಿ ಸಿರಾಜ್ ಬೌಲ್ಗೆ ಸತತ ಎರಡು ಫೋರ್ ಸಿಡಿಸಿದ ರೋಹಿತ್ ಶರ್ಮಾ ಗುಜರಾತ್ಗೆ ಅಪಾಯಾಗುವ ಸೂಚನೆ ನೀಡಿದರು. ಆದರೆ ನಂತರದ ಎಸೆತದಲ್ಲಿಯೇ ಸಿರಾಜ್ಗೆ ಬೋಲ್ಡ್ ಆಗುವ ಮೂಲಕ ಮುಂಬೈಗೆ ಮತ್ತೆ ನಿರಾಸೆಯಾಗುವಂತೆ ಮಾಡಿದರು. ಅವರೊಂದಿಗೆ ಕಣಕ್ಕಿಳಿದಿದ್ದ ರಯಾನ್ ರಿಕೆಲ್ಟನ್ ಕೂಡ ಸಿರಾಜ್ಗೆ ವಿಕೆಟ್ ಒಪ್ಪಿಸಿ ಮುಂಬೈ ತಂಡವನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದರು
ಬಳಿಕ ಸ್ಕ್ರೀಜ್ಗೆ ಇಳಿದ ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅರ್ಧಶತಕದ ಜೊತೆಯಾಟ ಗೆಲುವಿನ ಭರವಸೆ ಮೂಡಿಸಿತು. ಆದ್ರೆ ತಿಲಕ್ ವರ್ಮಾ ಬೃಹತ್ ಮೊತ್ತ ಬೆನ್ನಟ್ಟುವಾಗ ತಕ್ಕ ಆಟವಾಡದೆ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. ಮತ್ತೊಂದು ಕಡೆ ಸೂರ್ಯಕುಮಾರ್ ಆಕ್ರಮಣಕಾರಿ ಆಟಕ್ಕೆ ನಿಂತಿದ್ದರು. ಕೊನೆಗೆ, ತಿಲಕ್ ವರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಇಬ್ಬರು ಪ್ರಸೀದ್ಗೆ ವಿಕೆಟ್ ಒಪ್ಪಿಸುವ ಮೂಲಕ ಮುಂಬೈ ವಿಜಯದ ಆಸೆಗೆ ಕೊನೆಯ ಮೊಳೆ ಹೊಡೆದರು. 28 ಬೌಲ್ಗೆ 4 ಸಿಕ್ಸರ್ ಹಾಗೂ 1 ಬೌಂಡರಿ ಮೂಲಕ 48 ರನ್ ಗಳಿಸಿದ ಸೂರ್ಯಕುಮಾರ್ ಯಾದವ್ ಏಕಾಂಗಿ ಹೋರಾಟಕ್ಕೆ ಫಲ ಸಿಗಲಿಲ್ಲ
ಇನ್ನು ನಾಯಕನಿಗೆ ತಕ್ಕ ಆಟವಾಡದ ಹಾರ್ದಿಕ್ ಪಾಂಡ್ಯ 17 ಬಾಲ್ ನುಂಗಿ ಕೇವಲ 11 ರನ್ ಗಳಿಸಿ ಔಟಾದರು. ಕೊನೆಗೆ 20 ಓವರ್ಗೆ 160 ರನ್ ಗಳಿಸಿದ ಮುಂಬೈ ಇಂಡಿಯನ್ಸ್ 36 ರನ್ಗಳಿಂದ ಸೋಲನ್ನೊಪ್ಪಿತು. ಸಿರಾಜ್ ಮತ್ತು ಪ್ರಸೀದ್ ಕೃಷ್ಣ ತಲಾ ಎರಡು ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ