/newsfirstlive-kannada/media/post_attachments/wp-content/uploads/2025/04/PRASIDH-KRISHNA.jpg)
ಅಹ್ಮದಾಬಾದ್ನಲ್ಲಿ ನಿನ್ನೆ ಹೋಮ್ ಟೀಮ್ ಗುಜರಾತ್ ಟೈಟನ್ಸ್ ದರ್ಬಾರ್ ನಡೆಸ್ತು. ಗುಜರಾತ್ ಘರ್ಜನೆಯ ಮುಂದೆ ರಾಜಸ್ಥಾನ್ ರಾಯಲ್ಸ್ ಸೈಲೆಂಟಾಗಿ ಹೋಯ್ತು. ಬ್ಯಾಟಿಂಗ್, ಬೌಲಿಂಗ್ನಲ್ಲಿ ಅಬ್ಬರಿಸಿದ ಗುಜರಾತ್ ಭರ್ಜರಿ ಜಯ ಸಾಧಿಸಿ ಟೇಬಲ್ ಟಾಪರ್ ಆಯ್ತು.
ನಮೋ ಮೈದಾನದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ರಾಜಸ್ಥಾನಕ್ಕೆ ಆರಂಭದಲ್ಲಿ ಸಕ್ಸಸ್ ಸಿಗ್ತು. ಜೋಫ್ರಾ ಆರ್ಚರ್, ಶುಭ್ಮನ್ ಗಿಲ್ ವಿಕೆಟ್ ಎಗರಿಸಿದ್ರು. ಆ ಬಳಿಕ ಸಾಯಿ ಸುದರ್ಶನ್ ಗುಜರಾತ್ಗೆ ಮೇಲುಗೈ ತಂದು ಕೊಟ್ರು. ಸ್ಫೋಟಕ ಆಟವಾಡಿದ ಸುದರ್ಶನ್ ಬೌಂಡರಿ, ಸಿಕ್ಸರ್ ಸುರಿಮಳೆ ಸುರಿಸಿದ್ರು.
ಜೋಸ್ ಬಟ್ಲರ್, ಶಾರೂಖ್ ಖಾನ್ ಸುದರ್ಶನ್ಗೆ ಸಾಥ್ ನೀಡಿದ್ರು. ಇಬ್ಬರೂ ತಲಾ 36 ರನ್ಗಳಿಸಿ ಔಟಾದ್ರು. ಅಬ್ಬರದ ಆಟವಾಡಿದ ಸುದರ್ಶನ್ 8 ಬೌಂಡರಿ, 3 ಸಿಕ್ಸರ್ ಸಿಡಿಸಿದ್ರು. 53 ಎಸೆತಗಳಲ್ಲಿ 82 ರನ್ಗಳಿಸಿದ್ರು. ಅಂತಿಮ ಹಂತದಲ್ಲಿ ರಾಹುಲ್ ತೆವಾಟಿಯಾ ಅಜೇಯ 24 ರನ್ ಸಿಡಿಸಿದ್ರೆ, ರಶೀದ್ ಖಾನ್ 12 ರನ್ಗಳ ಅಮೂಲ್ಯ ಕಾಣಿಕೆ ನೀಡಿದ್ರು. ಪರಿಣಾಮ ಗುಜರಾತ್ 6 ವಿಕೆಟ್ ನಷ್ಟಕ್ಕೆ 217 ರನ್ಗಳಿಸಿತು.
ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗೆಲ್ಲುವ ಫೇವರಿಟ್ ತಂಡ ಯಾವುದು.. ಆರ್ಸಿಬಿನಾ, ಡೆಲ್ಲಿನಾ?
217 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನಕ್ಕೆ ಬ್ಯಾಟ್ಸ್ಮನ್ಗಳು ಕೈಕೊಟ್ರು. ಯಶಸ್ವಿ ಜೈಸ್ವಾಲ್, ನಿತೀಶ್ ರಾಣಾ, ದೃವ್ ಜುರೇಲ್ ಸಿಂಗಲ್ ಡಿಜಿಟ್ಗೆ ಪೆವಿಲಿಯನ್ ಸೇರಿದ್ರು. ಇದ್ರ ಮಧ್ಯೆ ರಿಯಾನ್ ಪರಾಗ್ 14 ಎಸೆತಗಳಲ್ಲಿ 26 ರನ್ ಸಿಡಿಸಿ ಔಟಾದ್ರು. 4 ಬೌಂಡರಿ, 2 ಸಿಕ್ಸರ್ ಸಿಡಿಸಿದ ನಾಯಕ ಸಂಜು ಸ್ಯಾಮ್ಸನ್ 28 ಎಸೆತಗಳಲ್ಲಿ 41 ರನ್ಗಳಿಸಿದ್ರು. 4 ಬೌಂಡರಿ, 3 ಸಿಕ್ಸರ್ ಸಿಡಿಸಿ ಶಿಮ್ರಾನ್ ಹೆಟ್ಮೆಯರ್ ಅರ್ಧಶತಕ ಸಿಡಿಸಿದ್ರು. ಹಿಟ್ಮೆಯರ್ ಆ 52 ರನ್ಗಳಿಗೆ ಅಂತ್ಯವಾಯ್ತು. ಬಳಿಕ ಕಣಕ್ಕಿಳಿದ ಬ್ಯಾಟ್ಸ್ಮನ್ಗಳ್ಯಾರು ತಂಡಕ್ಕೆ ಆಸರೆಯಾಗಲಿಲ್ಲ.
ಕನ್ನಡಿಗ ಪ್ರಸಿದ್ಧ ಕೃಷ್ಣ ಶೈನ್..!
ಗುಜರಾತ್ ಟೈಟನ್ಸ್ ಪರ ಕನ್ನಡಿಗ ಪ್ರಸಿದ್ಧ ಕೃಷ್ಣ ಮಿಂಚಿದರು. ತಮ್ಮ ಕೋಟಾ ನಾಲ್ಕು ಓವರ್ಗಳನ್ನು ಅದ್ಭುತವಾಗಿ ನಿಭಾಯಿಸಿದರು. 6.00 ಎಕನಾಮಿಕ್ ರೇಟ್ನಲ್ಲಿ ಕೇವಲ 24 ರನ್ಗಳನ್ನು ನೀಡಿ, ಮೂರು ವಿಕೆಟ್ ಪಡೆದು ಮಿಂಚಿದರು. ಸಂಜು ಸ್ಯಾಮ್ಸನ್, ಹಿಟ್ಮೇಯರ್, ಜೋಪ್ರಾ ಅರ್ಚರ್ ಅವರ ವಿಕೆಟ್ ಪಡೆದುಕೊಂಡರು. ಒಟ್ಟಾರೆ ಗುಜರಾತ್ ಬೌಲರ್ಗಳ ಮುಂದೆ ರಾಜಸ್ಥಾನ್ ರಾಯಲ್ಸ್ ಮಂಕಾಗಿ ಪೆವಿಲಿಯನ್ ಪರೇಡ್ ನಡೆಸಿದ್ರು. ಅಂತಿಮವಾಗಿ 19.2 ಓವರ್ಗಳಿಗೆ ರಾಜಸ್ಥಾನ್ ತಂಡ ಆಲೌಟ್ ಆಯ್ತು. 159 ರನ್ಗಳಿಗೆ ರಾಜಸ್ಥಾನ್ ರಾಯಲ್ಸ್ ಆಲೌಟ್ ಆದ್ರೆ ಗುಜರಾತ್ ಟೈಟನ್ಸ್ 58 ರನ್ಗಳ ಭರ್ಜರಿ ಗೆಲುವು ದಾಖಲಿಸಿತು.
ಇದನ್ನೂ ಓದಿ: ಬೆಂಗಳೂರಲ್ಲೇ ಇವತ್ತು ಐಪಿಎಲ್ ಮ್ಯಾಚ್.. ಆರ್ಸಿಬಿ ತಂಡದಲ್ಲಿ ಸಣ್ಣ ಬದಲಾವಣೆ ನಿರೀಕ್ಷೆ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್