/newsfirstlive-kannada/media/post_attachments/wp-content/uploads/2024/12/Shubman-Gill_GT.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಅಂತ್ಯಗೊಂಡಿದೆ. ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ವಿಕೆಟ್ ಕೀಪರ್ ಜೋಸ್ ಬಟ್ಲರ್ ಬರೋಬ್ಬರಿ 15.75 ಕೋಟಿಗೆ ಗುಜರಾತ್ ಟೈಟನ್ಸ್ ತಂಡದ ಪಾಲಾದರು.
ಬಟ್ಲರ್ ಖರೀದಿಗೆ ಭರ್ಜರಿ ಪೈಪೋಟಿ
ಮೊದಲ ಸುತ್ತಿನಲ್ಲೇ ಮಾರ್ಕ್ಯೂ ಪ್ಲೇಯರ್ ಲಿಸ್ಟ್ನಲ್ಲಿದ್ದ ಜೋಸ್ ಬಟ್ಲರ್ ಮೇಲೆ ಗುಜರಾತ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಹಣ ಸುರಿಯಲು ಮುಂದಾದವು. ಕಳೆದ 6 ಸೀಸನ್ಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಜೋಸ್ ಬಟ್ಲರ್ ಪ್ರತಿನಿಧಿಸಿದ್ದರು. ಇವರನ್ನು ಮತ್ತೆ ಖರೀದಿ ಮಾಡಲು ರಾಜಸ್ಥಾನ್ ಬಿಡ್ ಮಾಡಿತು. ಬಟ್ಲರ್ ಬೆಲೆ 9 ಕೋಟಿ ದಾಟಿದಾಗ ರಾಜಸ್ಥಾನ್ ಬಿಡ್ನಿಂದ ಹಿಂದೆ ಸರಿಯಿತು. ನಂತರ ಬಿಡ್ ಅಖಾಡಕ್ಕೆ ಪಂಜಾಬ್ ಕಿಂಗ್ಸ್ ಎಂಟ್ರಿ ನೀಡಿತ್ತು. 14 ಕೋಟಿ ದಾಟುತ್ತಿದ್ದಂತೆ ಪಂಜಾಬ್ ಕೂಡ ಹಿಂದೇಟು ಹಾಕಿತು. ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ಮಧ್ಯೆ ಕೊನೆವರೆಗೂ ಪೈಪೋಟಿ ನಡೆಯಿತು. ಕೊನೆಗೆ ಬಟ್ಲರ್ ಅವರಿಗೆ ಗುಜರಾತ್ ಟೈಟನ್ಸ್ 15.75 ಕೋಟಿ ನೀಡಿ ಖರೀದಿಸಿತು.
ಗಿಲ್ಗೆ ಕ್ಯಾಪ್ಟನ್ಸಿಯಿಂದ ಕೊಕ್
ಇತ್ತೀಚೆಗೆ ಭಾರತ ಏಕದಿನ ಮತ್ತು ಟಿ20 ತಂಡಗಳಿಗೆ ಉಪನಾಯಕರಾಗಿ ನೇಮಕವಾದ ಶುಭ್ಮನ್ ಗಿಲ್ ಅವರಿಗೆ ಆಘಾತ ಸುದ್ದಿ ಒಂದಿದೆ. ಶುಭ್ಮನ್ ಗಿಲ್ ಮುಂದಿನ ಸೀಸನ್ನಲ್ಲಿ ಐಪಿಎಲ್ 2022ರ ವಿಜೇತ ಗುಜರಾತ್ ಟೈಟನ್ಸ್ ತಂಡದ ಕ್ಯಾಪ್ಟನ್ ಆಗಿ ಮುಂದುವರಿಯೋದು ಡೌಟ್ ಇದೆ. ಐಪಿಎಲ್ 2024ರಲ್ಲಿ ಗಿಲ್ ನಾಯಕತ್ವದಲ್ಲಿ ಟೈಟನ್ಸ್ ತಂಡವು 8ನೇ ಸ್ಥಾನ ಪಡೆದಿತ್ತು. ಹೀಗಾಗಿ ಇವರ ಜಾಗಕ್ಕೆ ಜೋಸ್ ಬಟ್ಲರ್ ಅವರನ್ನು ತಂದು ಕೂರಿಸುವ ಪ್ಲಾನ್ ಇದೆ. ಜೋಸ್ ಬಟ್ಲರ್ ಇಂಗ್ಲೆಂಡ್ ತಂಡದ ಕ್ಯಾಪ್ಟನ್ ಆಗಿದ್ದು, ಇವರಿಗೆ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಇದೆ.
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಟೈಟನ್ಸ್ ತನ್ನ ಚೊಚ್ಚಲ ಐಪಿಎಲ್ ಆವೃತ್ತಿ 2022 ರಲ್ಲಿ ಚಾಂಪಿಯನ್ ಆಗಿತ್ತು. ಪ್ರಶಸ್ತಿ ಗೆದ್ದ ನಂತರದ ಸೀಸನ್ನಲ್ಲೂ ಫೈನಲ್ ತಲುಪಿದ್ದ ಗುಜರಾತ್ ರನ್ನರ್ ಅಪ್ ಆಗಿತ್ತು. ಹಾರ್ದಿಕ್ ಪಾಂಡ್ಯ ತಂಡವನ್ನು ಎರಡು ಬಾರಿ ಫೈನಲ್‌ಗೆ ಕರೆದೊಯ್ದಿದ್ದರು.
ಇದನ್ನೂ ಓದಿ:ಬಿಸಿಸಿಐ ಮಹತ್ವದ ನಿರ್ಧಾರ; ಭಾರತ 3ನೇ ಟೆಸ್ಟ್ ಸೋತರೆ ರೋಹಿತ್ಗೆ ಕ್ಯಾಪ್ಟನ್ಸಿಯಿಂದ ಕೊಕ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ