/newsfirstlive-kannada/media/post_attachments/wp-content/uploads/2024/10/Rashid-Khan_Gill.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ಎಲ್ಲಾ ಐಪಿಎಲ್ ತಂಡಗಳು ಬಿಸಿಸಿಐಗೆ ರಿಟೆನ್ಷನ್ ಲೀಸ್ಟ್ ನೀಡಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಹೀಗಾಗಿ ಆರ್ಸಿಬಿ ಸೇರಿದಂತೆ ಎಲ್ಲಾ ತಂಡಗಳ ಮಾಲೀಕರು ಕೊನೆಯ ಹಂತದ ಕಸರತ್ತು ನಡೆಸುತ್ತಿದ್ದಾರೆ. ಇದರ ಮಧ್ಯೆ ಗುಜರಾತ್ ಟೈಟನ್ಸ್ ತಂಡ ರೀಟೈನ್ ಲಿಸ್ಟ್ ಹೊರಬಿದ್ದಿದೆ.
ಗುಜರಾತ್ ಟೈಟನ್ಸ್ ತಂಡವು ಕ್ಯಾಪ್ಟನ್ ಶುಭ್ಮನ್ ಗಿಲ್ ಸೇರಿದಂತೆ ಇಬ್ಬರು ಸ್ಟಾರ್ ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಮುಂದಾಗಿದೆ. ಅಚ್ಚರಿ ಎಂದರೆ ಗುಜರಾತ್ ಟೈಟನ್ಸ್ ತಂಡದ ರೀಟೈನ್ ಲಿಸ್ಟ್ನಲ್ಲಿ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಹೆಸರು ಇಲ್ಲದಿರುವುದು. ಹಾಗಾಗಿ ಶಮಿ ಐಪಿಎಲ್ ಮೆಗಾ ಆಕ್ಷನ್ಗೆ ಬರೋದು ಪಕ್ಕಾ ಆಗಿದೆ.
ಸ್ಟಾರ್ ಆಟಗಾರರಿಗೆ ಮಣೆ
ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಗುಜರಾತ್ ತಂಡದ ಮೊದಲ ಆಯ್ಕೆ ಕ್ಯಾಪ್ಟನ್ ಶುಭ್ಮನ್ ಗಿಲ್. ಇವರ 2ನೇ ಆಯ್ಕೆ ರಶೀದ್ ಖಾನ್ ಮತ್ತು 3ನೇ ಆದ್ಯತೆ ಯುವ ಬ್ಯಾಟರ್ ಸಾಯಿ ಸುದರ್ಶನ್ ಎಂದು ತಿಳಿದು ಬಂದಿದೆ. ಈ ಲಿಸ್ಟ್ನಲ್ಲಿ ಶಮಿ ಹೆಸರು ಇಲ್ಲ ಎನ್ನುವುದು ಖಾತ್ರಿಯಾಗಿದೆ.
ಅನ್‌ಕ್ಯಾಪ್ಡ್ ಪ್ಲೇಯರ್ಸ್ ರೀಟೈನ್
ತಂಡವು ಅನ್‌ಕ್ಯಾಪ್ಡ್ ಪ್ಲೇಯರ್ಸ್ ಆಗಿರೋ ರಾಹುಲ್ ತೆವಾಟಿಯಾ ಮತ್ತು ಶಾರುಖ್ ಖಾನ್ ಅವರನ್ನು ಸಹ ಉಳಿಸಿಕೊಳ್ಳಲಿದೆ. ಗುಜರಾತ್ ಟೈಟನ್ಸ್ ಪರ ರಾಹುಲ್ ತೆವಾಟಿಯಾ ಅಮೋಘ ಪ್ರದರ್ಶನ ನೀಡಿದ್ದಾರೆ. ಏಕಾಂಗಿಯಾಗಿ ಬ್ಯಾಟಿಂಗ್ ಮಾಡುವ ಮೂಲಕ ಹಲವು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಶಾರುಖ್ ಖಾನ್ ಹಲವು ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ.
ಶಮಿಗೆ ಕೊಕ್
ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಶಮಿ. ಇವರು ಇತ್ತೀಚೆಷ್ಟೇ ಗಾಯದಿಂದ ಚೇತರಿಸಿಕೊಂಡಿದ್ದು, ಸದ್ಯದಲ್ಲೇ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಲು ಸರ್ಕಸ್ ಮಾಡುತ್ತಿದ್ದಾರೆ. ಶಮಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಕೊನೆ ಬಾರಿಗೆ ಟೀಮ್ ಇಂಡಿಯಾ ಪರ ಆಡಿದ್ರು. ಇವರಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ತಂಡದಲ್ಲೂ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಫ್ರಾಂಚೈಸಿ ಇವರನ್ನು ಕೈ ಬಿಡುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ