/newsfirstlive-kannada/media/post_attachments/wp-content/uploads/2025/04/Gill_Buttler.jpg)
ಕ್ಯಾಪ್ಟನ್ ಹಾಗೂ ಓಪನರ್ ಶುಭ್ಮನ್ ಗಿಲ್ ಮತ್ತು ಜೋಶ್ ಬಟ್ಲರ್ ಅವರ ಅಮೋಘ ಅರ್ಧಶತಕದಿಂದ ಗುಜರಾತ್ ಟೈಟನ್ಸ್ 210 ರನ್ಗಳ ಬೃಹತ್ ಮೊತ್ತದ ರನ್ಗಳ ಗುರಿಯನ್ನು ರಾಜಸ್ಥಾನ್ ರಾಯಲ್ಸ್ಗೆ ನೀಡಿದೆ.
ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಮೊದಲ ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ಬ್ಯಾಟಿಂಗ್ನಲ್ಲಿ ಘರ್ಜನೆ ಮಾಡಿತು. ಆರಂಭಿಕ ಆಟಗಾರರ ತಾಳ್ಮೆಯ ಬ್ಯಾಟಿಂಗ್ನಿಂದ ದೊಡ್ಡ ಮೊತ್ತದ ರನ್ಗಳನ್ನು ರಾಜಸ್ಥಾನ್ ಮುಂದಿದೆ.
ಇದನ್ನೂ ಓದಿ: ಐಪಿಎಲ್ನಲ್ಲಿ ಚೀಪ್ ಆ್ಯಂಡ್ ಬೆಸ್ಟ್ ಪ್ಲೇಯರ್ಸ್ ಇವರು.. RCBಯಲ್ಲೂ ಇಬ್ಬರು ಮ್ಯಾಚ್ ವಿನ್ನರ್ಸ್!
ಗುಜರಾತ್ ಪರವಾಗಿ ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ನಾಯಕ ಶುಭ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದರು. 10 ಓವರ್ಗಳ ವರೆಗೆ ಒಳ್ಳೆಯ ಪಾರ್ಟನರ್ಶಿಪ್ನಲ್ಲಿ ಬ್ಯಾಟಿಂಗ್ ಮಾಡಿದರು. ಇದರಿಂದ ಸಾಯಿ ಸುದರ್ಶನ್ 39 ರನ್ ಗಳಿಸಿ ಆಡುವಾಗ ರಿಯಾನ್ ಪರಾಗ್ಗೆ ಕ್ಯಾಚ್ ಕೊಟ್ಟು ಕ್ರೀಸ್ ಖಾಲಿ ಮಾಡಿದರು. ಇವರ ನಂತರ ಬ್ಯಾಟಿಂಗ್ಗೆ ಜೋಶ್ ಬಟ್ಲರ್ ಆಗಮಿಸಿದರು.
ಆದ್ರೆ ಇನ್ನೊಂದೆಡೆ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ್ದ ಶುಭ್ಮನ್ ಗಿಲ್ ರಾಜಸ್ಥಾನ್ ಬೌಲರ್ಗಳನ್ನು ಕಾಡಿದರು. ಬೇಗನೆ ವಿಕೆಟ್ ಒಪ್ಪಿಸದ ಗಿಲ್ ಅರ್ಧಶತಕ ಬಾರಿಸಿದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಗಿಲ್, ಕೇವಲ 50 ಬಾಲ್ಗಳಲ್ಲಿ 5 ಬೌಂಡರಿ ಹಾಗೂ 4 ಬಿಗ್ ಸಿಕ್ಸರ್ನಿಂದ 84 ರನ್ ಗಳಿಸಿ ರಿಯಾನ್ ಪರಾಗ್ಗೆ ಕ್ಯಾಚ್ ನೀಡಿ ಹೊರ ನಡೆದರು.
3ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ವಿದೇಶಿ ಆಟಗಾರ ಜೋಶ್ ಬಟ್ಲರ್ ಗುಜರಾತ್ಗೆ ಉತ್ತಮ ರನ್ಗಳ ಕೊಡುಗೆ ನೀಡಿದರು. ಕೇವಲ 26 ಎಸೆತಗಳನ್ನು ಎದುರಿಸಿದ ಬಟ್ಲರ್, 3 ಬೌಂಡರಿ, 4 ಭರ್ಜರಿ ಸಿಕ್ಸ್ ಬಾರಿಸಿ ಅರ್ಧಶತಕ ಪೂರೈಸಿದರು. ಈ ಟೂರ್ನಿಯಲ್ಲಿ ಇದು ಜೋಶ್ ಬಟ್ಲರ್ ಅವರ 4ನೇ ಹಾಫ್ಸೆಂಚುರಿ ಆಗಿದೆ. ಇನ್ನು ಸುಂದರ್ ಈ ಪಂದ್ಯದಲ್ಲೂ ವಿಫಲ ಬ್ಯಾಟಿಂಗ್ ಮಾಡಿದರು. ಇದರಿಂದ ಗುಜರಾತ್ ಟೈಟನ್ಸ್ 4 ವಿಕೆಟ್ ಕಳೆದುಕೊಂಡು 20 ಓವರ್ಗಳಲ್ಲಿ 210 ರನ್ಗಳ ದೊಡ್ಡ ಗುರಿಯನ್ನು ಎದುರಾಳಿಗೆ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ