ಹೈದ್ರಾಬಾದ್ ಟೀಮ್​ಗೆ ಸತತ 4ನೇ ಸೋಲು.. ಹ್ಯಾಟ್ರಿಕ್​ ಗೆಲುವು ಸಂಭ್ರಮಿಸಿದ ಗಿಲ್

author-image
Bheemappa
Updated On
ಹೈದ್ರಾಬಾದ್ ಟೀಮ್​ಗೆ ಸತತ 4ನೇ ಸೋಲು.. ಹ್ಯಾಟ್ರಿಕ್​ ಗೆಲುವು ಸಂಭ್ರಮಿಸಿದ ಗಿಲ್
Advertisment
  • ನಾಯಕನ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಶುಭ್​ಮನ್ ಗಿಲ್
  • ಒಂದೇ 1 ರನ್ನಿಂದ ಹಾಫ್​ಸೆಂಚುರಿ ಮಿಸ್ ಮಾಡಿಕೊಂಡ ಸುಂದರ್
  • ತವರಿನ ನೆಲದಲ್ಲಿ ಭಾರೀ ಮುಖಭಂಗಕ್ಕೆ ಒಳಗಾದ ಸನ್​ರೈಸರ್ಸ್​ ತಂಡ

ಪ್ರಿನ್ಸ್​ ಶುಭ್​ಮನ್ ಗಿಲ್ ಅವರ ಅಮೋಘವಾದ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟನ್ಸ್​ 7 ವಿಕೆಟ್​ಗಳಿಂದ ಮೊತ್ತೊಂದು ಗೆಲುವು ಪಡೆದಿದೆ. ಈ ಮೂಲಕ ಟೂರ್ನಿಯಲ್ಲಿ ಹೈದ್ರಾಬಾದ್ ಟೀಮ್ ಸತತ 4ನೇ ಸೋಲನ್ನು ಅನುಭವಿಸಿದ್ರೆ ಗುಜರಾತ್ ಟೈಟನ್ಸ್​ ಹ್ಯಾಟ್ರಿಕ್ ಗೆಲುವು ಪಡೆದಿದೆ.

ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್​ ಟೈಟನ್ಸ್ ನಾಯಕ ಶುಭಮನ್​ ಗಿಲ್ ಎದುರಾಳಿ ಹೈದ್ರಾಬಾದ್ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನ ಮಾಡಿದ್ದರು. ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ್ದ ಓಪನರ್ಸ್​ ಆರಂಭದಲ್ಲೇ ಬಿಗ್ ಶಾಕ್​ಗೆ ಒಳಗಾದರು. ಸ್ಫೋಟಕ ಬ್ಯಾಟ್ಸ್​ಮನ್​ಗಳಾದ ಟ್ರಾವಿಸ್ ಹೆಡ್​ 8, ಅಭಿಷೇಕ್ ಶರ್ಮಾ 18 ರನ್​ಗೆ ಸಿರಾಜ್​ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು.

ಇಶನ್ ಕಿಶನ್ 17, ನಿತೀಶ್ ಕುಮಾರ್ 31 ಕೆಲ ಹೊತ್ತು ಬೌಲರ್​ಗಳನ್ನು ಕಾಡಿದರು. ಹೆನ್ರಿಚ್ ಕ್ಲಾಸಿನ್ 27, ಅನಿಕೇತ್ ವರ್ಮಾ ಕೇವಲ 18, ನಾಯಕ ಕಮಿನ್ಸ್​ 22 ರನ್​ಗಳಿಂದ ಹೈದ್ರಾಬಾದ್ 8 ವಿಕೆಟ್​ಗೆ 153 ರನ್​ಗಳ ಟಾರ್ಗೆಟ್ ಅನ್ನು ಶುಭ್​ಮನ್​ ಗಿಲ್ ಪಡೆಗೆ ನೀಡಿತ್ತು.

ಇದನ್ನೂ ಓದಿ:ಸಿರಾಜ್​ ದಾಳಿಗೆ ಮಕಾಡೆ ಮಲಗಿದ ಹೈದ್ರಾಬಾದ್ ಬ್ಯಾಟರ್ಸ್​.. ಟಾರ್ಗೆಟ್ ಇಷ್ಟೇನಾ?

publive-image

ಈ ಗುರಿ ಬೆನ್ನು ಹತ್ತಿದ್ದ ಗುಜರಾತ್ ತಂಡದ ಓಪನರ್ಸ್​ ಸಾಯಿ ಸುದರ್ಶನ್, ಶುಭ್​ಮನ್ ಗಿಲ್​ ಉತ್ತಮ ಆರಂಭ ಪಡೆಯಲಿಲ್ಲ. ಸುದರ್ಶನ್ ಕೇವಲ 5 ರನ್​ಗೆ ವಿಕೆಟ್ ಒಪ್ಪಿಸಿದರು. ಇವರ ಬಳಿಕ ಕ್ರೀಸ್​ಗೆ ಆಗಮಿಸಿದ ವಾಷಿಂಗ್ಟನ್ ಸುಂದರ್ ಭರ್ಜರಿ ಬ್ಯಾಟಿಂಗ್ ಮಾಡಿದರು. 29 ಎಸೆತಗಳನ್ನು ಎದುರಿಸಿದ ಸುಂದರ್ 5 ಫೋರ್, 2 ಸಿಕ್ಸರ್​ಗಳಿಂದ 49 ರನ್​ ಗಳಿಸಿ ಆಡುವಾಗ ಬಿಗ್​ ಶಾಟ್​ ಮಾಡಿದರು. ಆದರೆ ಅದು ಕ್ಯಾಚ್ ಆಗಿದ್ದರಿಂದ ಕೇವಲ 1 ರನ್​ನಿಂದ ಹಾಫ್​ಸೆಂಚುರಿ ಮಿಸ್ ಮಾಡಿಕೊಂಡರು. ಸುಂದರ್ ಬಳಿಕ ಬ್ಯಾಟಿಂಗ್​ಗೆ ಬಂದ ಶೆರ್ಫೇನ್ ರುದರ್ಫೋರ್ಡ್ 16 ಬಾಲ್​ಗಳಲ್ಲಿ 35 ರನ್​ ಸಿಡಿಸಿದರು.

ತಾಳ್ಮೆಯ ಬ್ಯಾಟಿಂಗ್ ಪ್ರದರ್ಶನ್ ಮಾಡಿದ ಶುಭಮನ್​ ಗಿಲ್ ತಂಡವನ್ನು ಗೆಲುವಿನ ದಡಕ್ಕೆ ತೆಗೆದುಕೊಂಡು ಹೋದರು. ಕೇವಲ 36 ಎಸೆತಗಳಲ್ಲಿ 7 ಬೌಂಡರಿ ಸಮೇತ ಅರ್ಧ ಶತಕ ಪೂರೈಸಿದರು. ಈ ಪಂದ್ಯದಲ್ಲಿ ಗಿಲ್​ ಒಟ್ಟು 43 ಎಸೆತಗಳನ್ನ ಎದುರಿಸಿದ್ದು 9 ಗೌಂಡರಿಗಳಿಂದ 61 ರನ್​ಗಳನ್ನು ಗಳಿಸಿ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು. ಈ ಗೆಲುವಿನೊಂದಿಗೆ ಗುಜರಾತ್ ಟೈಟನ್ಸ್​ ಈ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲವು ಪಡೆದುಕೊಂಡಿದೆ. 4 ಮ್ಯಾಚ್​ಗಳಲ್ಲಿ ಕೇವಲ 1 ಪಂದ್ಯವನ್ನು ಮಾತ್ರ ಟೈಟನ್ಸ್​ ಸೋತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment