/newsfirstlive-kannada/media/post_attachments/wp-content/uploads/2025/05/GILL_ABHISHEK_SAI.jpg)
ನಾಯಕ ಶುಭ್​ಮನ್ ಗಿಲ್ ಹಾಗೂ ಜೋಶ್​ ಬಟ್ಲರ್​ ಅವರ ಅಮೋಘವಾದ ಅರ್ಧಶತಕದಿಂದ ಗುಜರಾತ್​ ಟೈಟನ್ಸ್​ ಭರ್ಜರಿ ಗೆಲವು ಸಾಧಿಸಿದೆ. ಈ ಸೋಲಿನ ಮೂಲಕ ಹೈದ್ರಾಬಾದ್ ತಂಡ ಪ್ಲೇ ಆಫ್​ ಕನಸನ್ನು ಕೈಬಿಟ್ಟಂತೆ ಆಗಿದೆ.
ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಹೈದ್ರಾಬಾದ್ ನಾಯಕ ಪ್ಯಾಟ್ ಕಮಿನ್ಸ್, ಫೀಲ್ಡಿಂಗ್ ಆಯ್ಕೆಮಾಡಿಕೊಂಡರು. ಇದರಿಂದ ಗುಜರಾತ್​ ಟೈಟನ್ಸ್​ ಮೊದಲ ಬ್ಯಾಟಿಂಗ್​ ಮಾಡುವ ಅವಕಾಶ ಪಡೆಯಿತು. ಟೈಟನ್ಸ್​ ಪರವಾಗಿ ಓಪನರ್ಸ್ ಅಗಿ ಬ್ಯಾಟಿಂಗ್​​ಗೆ ಬಂದ ಕ್ಯಾಪ್ಟನ್ ಶುಭ್​ಮನ್ ಗಿನ್, ಸಾಯಿ ಸುದರ್ಶನ್ ಭರ್ಜರಿ ಆರಂಭ ಪಡೆದರು.
/newsfirstlive-kannada/media/post_attachments/wp-content/uploads/2025/05/GILL_50.jpg)
ಪಂದ್ಯದಲ್ಲಿ 23 ಬಾಲ್​ಗಳನ್ನು ಎದುರಿಸಿದ ಸುದರ್ಶನ್ ಕೇವಲ 9 ಬೌಂಡರಿಗಳಿಂದ 48 ರನ್​ ಗಳಿಸಿ ಕೀಪರ್​ಗೆ ಕ್ಯಾಚ್ ಕೊಟ್ಟರು. ಹೈದ್ರಾಬಾದ್​ ಬೌಲರ್​ಗಳನ್ನ ಬೆಂಡೆತ್ತಿದ ಗಿಲ್, ಕೇವಲ 26 ಬಾಲ್​ಗಳಲ್ಲಿ 6 ಬೌಂಡರಿ ಜೊತೆಗೆ 2 ಬಿಗ್​ ಸಿಕ್ಸರ್​ಗಳಿಂದ ಹಾಫ್​ಸೆಂಚುರಿ ಬಾರಿಸಿದರು. ಪಂದ್ಯದಲ್ಲಿ ಒಟ್ಟು 38 ಎಸೆತ ಎದುರಿಸಿದ ಗಿಲ್ 10 ಫೋರ್, 2 ಸಿಕ್ಸರ್​​ನಿಂದ 76 ರನ್​ ಗಳಿಸಿ ರನೌಟ್​ ಆದರು.
ಸುದರ್ಶನ್ ಬಳಿಕ ಕ್ರೀಸ್​ಗೆ ಬಂದಿದ್ದ ಜೋಶ್​ ಬಟ್ಲರ್​ ಅಮೋಘ ಬ್ಯಾಟಿಂಗ್​ನಿಂದ 3 ಫೋರ್, 4 ಸಿಕ್ಸರ್​ನಿಂದ 37 ಎಸೆತದಲ್ಲಿ 64 ರನ್​ ಚಚ್ಚಿದರು. ವಾಷಿಂಗ್ಟನ್ ಸುಂದರ್ ಕೂಡ 21 ರನ್​ಗಳ ಕಾಣಿಕೆ ನೀಡಿದರು. ಇದರಿಂದ ಗುಜರಾತ್​ 20 ಓವರ್​ನಲ್ಲಿ 6 ವಿಕೆಟ್​ಗೆ 225 ರನ್​ಗಳ ಬೃಹತ್​ ಟಾರ್ಗೆಟ್​ ನೀಡಿತ್ತು.
ಈ ಗುರಿ ಹಿಂದೆ ಬಿದ್ದ ಹೈದ್ರಾಬಾದ್​ ಆರಂಭದಲ್ಲಿ ಭಾರೀ ನಷ್ಟ ಅನುಭವಿಸಿತು. ಏಕೆಂದರೆ ಸ್ಫೋಟಕ ಓಪನರ್​ ಟ್ರಾವಿಸ್​ ಹೆಡ್​ ಕೇವಲ 20 ರನ್​ಗೆ ಔಟ್ ಆದರು. ಹೆಡ್​ ನಂತರ ಬ್ಯಾಟಿಂಗ್​ಗೆ ಬಂದಿದ್ದ ಇಶನ್ ಕಿಶನ್ 13 ರನ್​ಗೆ ಕ್ಯಾಚ್ ಕೊಟ್ಟರು. ಆರಂಭಿಕರಾಗಿ ಕ್ರೀಸ್​ಗೆ ಬಂದಿದ್ದ ಅಭಿಷೇಕ್ ಶರ್ಮಾ ಗುಜರಾತ್​ ಬೌಲರ್​ಗಳಿಗೆ ಹಿಗ್ಗಾಮುಗ್ಗಾ ಬಾರಿಸಿ ಕೇಲವ 28 ಎಸೆತದಲ್ಲಿ 50 ರನ್​ಗಳನ್ನು ಸಿಡಿಸಿದರು. ಈ ಪಂದ್ಯದಲ್ಲಿ ಒಟ್ಟು 40 ಬಾಲ್ ಆಡಿದ ಅಭಿಷೇಕ್ ಶರ್ಮಾ 4 ಫೊರ್, 6 ಆಕಾಶದೆತ್ತರದ ಸಿಕ್ಸರ್​ಗಳಿಂದ 74 ರನ್​ ಗಳಿಸಿ ಆಡುವಾಗ ಸಿರಾಜ್​ಗೆ ಕ್ಯಾಚ್ ನೀಡಿದರು.
ಇದನ್ನೂ ಓದಿ: RCB vs CSK ಹೈವೋಲ್ಟೇಜ್ ಪಂದ್ಯ ನಡೆಯುತ್ತಾ.. ವೆದರ್ ರಿಪೋರ್ಟ್ ಏನ್ ಹೇಳುತ್ತೆ?
/newsfirstlive-kannada/media/post_attachments/wp-content/uploads/2024/04/SRH_ABHISHEK.jpg)
ಅಭಿಷೇಕ್ ಬೆನ್ನಲ್ಲೇ ಹೆನ್ರಿಚ್ ಕ್ಲಾಸೆನ್ ಕೂಡ 23 ರನ್​ಗೆ ಆಟ ಮುಗಿಸಿದರು. ಅನಿಕೇತ್ ವರ್ಮಾ 3, ಕಮಿಂದ್ ಮೆಂಡೀಸ್ ಡಕೌಟ್​ ಆಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪೆವಿಲಿಯನ್​ಗೆ ಹೆಜ್ಜೆ ಹಾಕಿದರು. ಕೊನೆಯಲ್ಲಿ ಕ್ಯಾಪ್ಟನ್​ ಕಮಿನ್ಸ್​ ಹಾಗೂ ನಿತೀಶ್ ಕುಮಾರ್ ರನ್​ಗೆ ಪರದಾಡಿದರು. ಹೀಗಾಗಿ ಹೈದ್ರಾಬಾದ್ 20 ಓವರ್​ನಲ್ಲಿ 6 ವಿಕೆಟ್​ಗೆ 186 ರನ್ ಮಾತ್ರ ಗಳಿಸಿ, 38 ರನ್​ಗಳಿಂದ ಸೋಲೋಪ್ಪಿಕೊಂಡಿತು.
ಸದ್ಯ 10 ಪಂದ್ಯಗಳನ್ನು ಆಡಿರುವ ಎಸ್​ಆರ್​ಹೆಚ್​ ಈಗಾಗಲೇ 7 ಪಂದ್ಯಗಳಲ್ಲಿ ಹೀನಾಯವಾಗಿ ಸೋತು 6 ಅಂಕ ಮಾತ್ರ ಗಳಿಸಿದೆ. ಗುಜರಾತ್​ ವಿರುದ್ಧ ಗೆದ್ದಿದ್ರೆ ಪ್ಲೇ ಆಫ್​ ಇನ್ನು ಜೀವಂತ ಇರುತ್ತಿತ್ತು. ಆದರೆ ಅದನ್ನು ಸೋತಿದೆ. ಇನ್ನೊಂದು ಪಂದ್ಯದಲ್ಲಿ ಹೈದ್ರಾಬಾದ್​ ಸೋತರೇ ಸಂಪೂರ್ಣವಾಗಿ ಪ್ಲೇಆಫ್​ನಿಂದ ಹೊರ ಬೀಳಲಿದೆ. ಕಳೆದ ಬಾರಿ ರನ್ನರ್ ಅಪ್ ಆಗಿದ್ದ ತಂಡ ಈ ಬಾರಿ ಹೀನಾಯ ಸ್ಥಿತಿಯಲ್ಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us