/newsfirstlive-kannada/media/post_attachments/wp-content/uploads/2025/05/GT-2.jpg)
ಗುಜರಾತ್ ಟೈಟನ್ಸ್ 18ನೇ ಆವೃತ್ತಿಯ ಐಪಿಎಲ್ನಲ್ಲಿ ಪ್ಲೇ-ಆಫ್ ಪ್ರವೇಶಿಸಿದ ಮೊದಲ ತಂಡವಾಗಿ ಹೊರ ಹೊಮ್ಮಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಇಂದು ಗೆಲ್ಲುವ ಮೂಲಕ ಶುಬ್ಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ ಪ್ಲೇ-ಆಫ್ ಪ್ರವೇಶ ಮಾಡಿದೆ. ಆದರೆ ಪ್ಲೇ-ಆಫ್ನಲ್ಲಿ ಗುಜರಾತ್ನ ಸ್ಥಾನ ಇನ್ನೂ ನಿರ್ಧಾರವಾಗಿಲ್ಲ.
ಆ ಮೂಲಕ 2022ರಿಂದ ಐಪಿಎಲ್ ಆಡ್ತಿರುವ ಗುಜರಾತ್ ಟೈಟನ್ಸ್, ಮೂರು ಬಾರಿ ಪ್ಲೇ-ಆಫ್ ಪ್ರವೇಶ ಮಾಡಿದಂತಾಗಿದೆ. 2024ರಲ್ಲಿ ಮಾತ್ರ ಲೀಗ್ ಹಂತದಲ್ಲಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 2022ರಲ್ಲಿ ಫೈನಲ್ ಪ್ರವೇಶ ಮಾಡಿ ಕಪ್ ಎತ್ತುವ ಮೂಲಕ ಚೊಚ್ಚಲ ಟೂರ್ನಿಯಲ್ಲೇ, ಚಾಂಪಿಯನ್ ಆಗಿತ್ತು. 2023ರಲ್ಲಿ ಫೈನಲ್ ಪ್ರವೇಶ ಮಾಡಿ ಸಿಎಸ್ಕೆ ವಿರುದ್ಧ ಸೋಲನ್ನು ಕಂಡಿತು. ಈ ಬಾರಿ ಮತ್ತೊಮ್ಮೆ ಟ್ರೋಫಿ ಗೆಲ್ಲಲು ಪ್ಲೇ-ಆಫ್ ಪ್ರವೇಶ ಮಾಡಿದೆ.
ಇದನ್ನೂ ಓದಿ: ಆ ತಾಯಿ ಮಕ್ಕಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದಳು.. ಸ್ಥಳೀಯರ ಕಾಡಿದ 17 ಜನರ ಜೀವ ತೆಗೆದ ದೃಶ್ಯ
ಇನ್ನು ಇಂದಿನ ಪಂದ್ಯದ ಬಗ್ಗೆ ನೋಡೋದಾದ್ರೆ ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್, ಕೆಎಲ್ ರಾಹುಲ್ ಅವರ ಸ್ಫೋಟಕ ಶತಕದೊಂದಿಗೆ 199 ರನ್ಗಳಿಸಿತ್ತು. 200 ರನ್ಗಳ ಗುರಿ ಬೆನ್ನತ್ತಿದ್ದ ಗುಜರಾತ್ ಟೈಟನ್ಸ್, ಯಾವುದೇ ವಿಕೆಟ್ ಕಳೆದುಕೊಳ್ಳದೇ 19ನೇ ಓವರ್ ಅಂತ್ಯಕ್ಕೆ ಗೆದ್ದು ಬೀಗಿದೆ. ಗುಜರಾತ್ ಟೈಟನ್ಸ್ ಪರ ಸಾಯಿ ಸುದರ್ಶನ್, ಶುಬ್ಮನ್ ಗಿಲ್ ಅದ್ಭುತ ಇನ್ನಿಂಗ್ಸ್ ಕಟ್ಟಿದರು.
ಸಾಯಿ ಸುದರ್ಶನ್ 61 ಬಾಲ್ನಲ್ಲಿ 108 ರನ್ಗಳಿಸಿದರು. ಸಾಯಿ ಸುದರ್ಶನ್ 4 ಸಿಕ್ಸರ್, 12 ಬೌಂಡರಿ ಬಾರಿಸಿದರು. ಇನ್ನು ಗಿಲ್ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿದರು. 7 ಸಿಕ್ಸರ್ ಮೂರು ಬೌಂಡರಿ ಬಾರಿಸಿದ ಗಿಲ್, 53 ಬಾಲ್ನಲ್ಲಿ 93 ರನ್ಗಳಿಸಿದರು.
ಇದನ್ನೂ ಓದಿ: ಬೆಂಗಳೂರಿಗರೇ ನಿರ್ಲಕ್ಷ್ಯ ಬೇಡ ಎಚ್ಚರ, ಎಚ್ಚರ.. ಸಿಲಿಕಾನ್ ಸಿಟಿ ಜನರಿಗೆ ಆಘಾತಕಾರಿ ಸುದ್ದಿ ಇದು!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್