/newsfirstlive-kannada/media/post_attachments/wp-content/uploads/2025/04/GT_VS_KKR.jpg)
ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆಗಿನ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಭರ್ಜರಿ ಗೆಲುವು ಸಾಧಿಸಿದೆ. ಓಪನರ್ ಬ್ಯಾಟರ್ಗಳಾದ ಸಾಯಿ ಸುದರ್ಶನ್ ಹಾಗೂ ಶುಭ್ಮನ್ ಗಿಲ್ ಅವರ ಅಮೋಘ ಅರ್ಧಶತಕದ ನೆರವಿನಿಂದ ಗುಜರಾತ್ ಗೆಲುವನ್ನು ಮುಂದುವರೆಸಿದೆ.
ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಜಿಂಕ್ಯಾ ರಹಾನೆ ಟಾಸ್ ಗೆದ್ದು ಎದುರಾಳಿ ಗುಜರಾತ್ ಟೈಟನ್ಸ್ ಅನ್ನು ಬ್ಯಾಟಿಂಗ್ಗೆ ಆಹ್ವಾನವಿತ್ತರು. ಹೀಗಾಗಿ ಗುಜರಾತ್ ಪರ ಮೊದಲ ಬ್ಯಾಟಿಂಗ್ಗೆ ಆಗಮಿಸಿದ ಕ್ಯಾಪ್ಟನ್ ಶುಭ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಅತ್ಯುತ್ತಮ ಆರಂಭ ಪಡೆದರು. ಭರ್ಜರಿ ಬ್ಯಾಟಿಂಗ್ ಮಾಡಿದ ಗಿಲ್ ಮತ್ತೊಂದು ಅರ್ಧಶತಕ ಬಾರಿಸಿದರು.
ಇದನ್ನೂ ಓದಿ: RCB vs RR ಹೈವೋಲ್ಟೇಜ್ ಮ್ಯಾಚ್.. ಪಂದ್ಯದಿಂದಲೇ ರಾಯಲ್ಸ್ ಕ್ಯಾಪ್ಟನ್ ಔಟ್, ಆಗಿದ್ದೇನು?
ಪಂದ್ಯದಲ್ಲಿ ಕೇವಲ 34 ಎಸೆತ ಎದುರಿಸಿದ ಶುಭ್ಮನ್ ಗಿಲ್ 6 ಬೌಂಡರಿ ಹಾಗೂ 1 ಸಿಕ್ಸರ್ನಿಂದ 50 ರನ್ ಗಳಿಸಿದರು. ಬಳಿಕ ಬ್ಯಾಟಿಂಗ್ ಮುಂದುವರೆಸಿ ಗಿಲ್ ಒಟ್ಟು 55 ಎಸೆತದಲ್ಲಿ 10 ಫೋರ್, 3 ಸಿಕ್ಸರ್ನಿಂದ 90 ರನ್ ಗಳಿಸಿ ಔಟ್ ಆದರು. ಗಿಲ್ಗೆ ಒಳ್ಳೆ ಸಾಥ್ ಕೊಟ್ಟ ಸಾಯಿ ಸುದರ್ಶನ್ ಕೂಡ ಹಾಫ್ಸೆಂಚುರಿ ಬಾರಿಸಿದರು. ಜೋಶ್ ಬಟ್ಲರ್ ಕೂಡ ಮತ್ತೆ ಅಬ್ಬರಿಸಿ 23 ಎಸೆತದಲ್ಲಿ 8 ಬೌಂಡರಿಗಳಿಂದ 41 ರನ್ ಗಳಿಸಿದ್ದು ತಂಡಕ್ಕೆ ನೆರವಾಯಿತು. ಹೀಗಾಗಿ ಗುಜರಾತ್ ಟೈಟನ್ಸ್ 20 ಓವರ್ಗಳಲ್ಲಿ 3 ವಿಕೆಟ್ಗೆ 198 ರನ್ಗಳ ಟಾರ್ಗೆಟ್ ನೀಡಿತ್ತು.
ಈ ರನ್ಗಳ ಹಿಂದೆ ಬಿದ್ದ ಕೆಕೆಆರ್ ಆರಂಭದಲ್ಲೇ ಆತಂಕಕ್ಕೆ ಒಳಗಾಯಿತು. ಏಕೆಂದರೆ ರಹಮಾನುಲ್ಲಾ ಗುರ್ಬಾಜ್ 1, ಸುನಿಲ್ ನರೈನ್ 17 ರನ್ಗೆ ಔಟ್ ಆದರು. ವೆಂಕಟೇಶ್ ಅಯ್ಯರ್ ಮತ್ತೆ ಬ್ಯಾಟಿಂಗ್ನಲ್ಲಿ ವಿಫಲರಾಗಿದ್ದು 14ಕ್ಕೆ ಕ್ಯಾಚ್ ಕೊಟ್ಟರು. ಇನ್ನು ಕ್ಯಾಪ್ಟನ್ ಅಜಿಂಕ್ಯಾ ರಹಾನೆ, ಹಾಫ್ಸೆಂಚುರಿ ಸಿಡಿಸಿ, ತಂಡವನ್ನು ಗೆಲ್ಲಿಸಲು ಪ್ರಯತ್ನಿಸಿದರೂ ಆದರೆ, ಅದು ಸಾಧ್ಯವಾಗಲಿಲ್ಲ. ಆ್ಯಂಡ್ರೆ ರಸೆಲ್ ಅಬ್ಬರಿಸಲು ಮುಂದಾಗಿದ್ದರು. ಆದ್ರೆ ರಶೀದ್ ಖಾನ್ ಅವಕಾಶ ಮಾಡಿಕೊಡಲಿಲ್ಲ. ರಿಂಕು ಸಿಂಗ್ (17) ಬಳಿಕ ಬಂದ ಎಲ್ಲ ಬ್ಯಾಟರ್ಗಳು ಹೀಗೆ ಬಂದು ಹಾಗೇ ಪೆವಿಲಿಯನ್ಗೆ ಕಡೆಗೆ ಹೊರಟರು. ಇದರಿಂದ ಕೆಕೆಆರ್ ತವರಿನಲ್ಲೇ ಹೀನಾಯ ಸೋಲು ಕಂಡಿತು. ಗುಜರಾತ್ ಟೈಟನ್ಸ್ 39 ರನ್ಗಳಿಂದ ಜಯ ಸಾಧಿಸಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ