/newsfirstlive-kannada/media/post_attachments/wp-content/uploads/2025/06/Ahmedabad-plane-crash-1.jpg)
ಅಹ್ಮದಾಬಾದ್ನಿಂದ ಲಂಡನ್ನತ್ತ ಹಾರಿದ್ದ ವಿಮಾನ ಅದೇ ವೇಗದಲ್ಲೇ ನೆಲಕ್ಕುರುಳಿ ಅಪಘಾತಕ್ಕೀಡಾಗಿದೆ. ಸುಮಾರು 37 ವರ್ಷಗಳ ಹಿಂದೆ ಇಂಥದ್ದೇ ಘೋರ ದುರಂತ ಇದೇ ನಗರದಲ್ಲಿ ಸಂಭವಿಸಿತ್ತು..
37 ವರ್ಷಗಳ ಹಿಂದೆ.. ಅಂದ್ರೆ ಅಕ್ಟೋಬರ್ 19, 1988 ರಲ್ಲಿ. ಇದೇ ಅಹ್ಮದಾಬಾದ್ನ ಸರ್ದಾರ್ ವಲ್ಲಭಭಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುರ್ಘಟನೆ ನಡೆದಿತ್ತು. ಇಂಡಿಯನ್ ಏರ್ಲೈನ್ಸ್ ಬೋಯಿಂಗ್ 737-200, ಫ್ಲೈಟ್ 113 ವಿಮಾನದ ಘೋರ ದುರಂತ ನಡೆದಿತ್ತು. ಆಗ ಆ ವಿಮಾನದಲ್ಲಿದ್ದ 135 ಜನರಲ್ಲಿ 133 ಪ್ರಯಾಣಿಕರು ಜೀವ ಕಳೆದುಕೊಂಡಿದ್ದರು.
ಇದನ್ನೂ ಓದಿ: ‘ಮೇಡೇ, ಮೇಡೇ, ಮೇಡೇ’ ಎಂದು ಕೂಗಿದ ಪೈಲಟ್.. ಮಾರಣಾಂತಿಕ ‘ಎಮೆರ್ಜೆನ್ಸಿ ಕರೆ’ಯ ಅರ್ಥವೇನು..?
ಆ ದಿನ ಪ್ರತಿಕೂಲ ಹವಾಮಾನ ವೈಪರಿತ್ಯದಿಂದಾಗಿ ಪೈಲಟ್ಗೆ ಸರಿಯಾಗಿ ಲ್ಯಾಂಡಿಂಗ್ ಪ್ರದೇಶ ಕಾಣದೇ ಸೀದಾ ಭತ್ತದ ಗದ್ದೆಗೆ ಲ್ಯಾಂಡ್ ಮಾಡಿಬಿಟ್ಟಿದ್ದರು. ಇದರಿಂದ ದೊಡ್ಡ ಅಪಘಾತ ನಡೆದಿತ್ತು.. ಈ ಏರ್ಪೋರ್ಟ್ನ ಮಾರಣಾಂತಿಕ ವಿಪತ್ತುಗಳ ಇತಿಹಾಸದಲ್ಲಿ ಈ ಕರಾಳ ಘಟನೆಯೂ ಒಂದಾಗಿದೆ.
ಅಂದು ಉಳಿದಿದ್ದು ಇಬ್ಬರೇ..
135 ಪ್ರಯಾಣಿಕರಿದ್ದ ಬೋಯಿಂಗ್ 737-200 ವಿಮಾನ ಅಪಘಾತವಾದಾಗ ಅದರಲ್ಲಿ 133 ಪ್ರಯಾಣಿಕರು ಜೀವ ಕಳೆದುಕೊಂಡಿದ್ದರು. ಆಗ ಜೀವಂತವಾಗಿ ಉಳಿದಿದ್ದು ಇಬ್ಬರು ಮಾತ್ರ. ಅವರೇ ಅಶೋಕ್ ಅಗರ್ವಾಲ್ ಮತ್ತು ವಿನೋದ್ ತ್ರಿಪಾಠಿ ಅನ್ನೋರು. ಆ ದಿನ ವಾತಾವರಣದ ಪ್ರಭಾವದಿಂದ ಆ ದುರಂತ ನಡೆದು 133 ಜನ ಉಸಿರು ಬಿಟ್ಟಿದ್ದರು.
ಇದನ್ನೂ ಓದಿ: ಭಾರತವನ್ನ ಬೆಚ್ಚಿಬೀಳಿಸಿದ 10 ಘೋರ ವಿಮಾನ ದುರಂತಗಳು.. ಒಂದಕ್ಕಿಂತ ಒಂದು ಕರಾಳ ಅಪಘಾತಗಳು..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ