ಪ್ರಸಿದ್ಧ ಕೃಷ್ಣ ಅದ್ಭುತ ಸ್ಪೆಲ್.. ಗೆಲುವಿನೊಂದಿಗೆ SRH ಮನೆಗೆ ಕಳುಹಿಸಿದ ಗಿಲ್ ಪಡೆ..!

author-image
Ganesh
Updated On
ಕನ್ನಡಿಗನ ಬೌಲಿಂಗ್​​​ ಬಲಕ್ಕೆ ಡೆಲ್ಲಿ ವಿಚಲಿತ.. ಆದ್ರೂ ಬಿಗ್​ ಟಾರ್ಗೆಟ್​ ಕೊಟ್ಟ ಕ್ಯಾಪಿಟಲ್ಸ್​
Advertisment
  • ಹೋಮ್​​​ಗ್ರೌಂಡ್​​ನಲ್ಲಿ ಆರ್ಭಟಿಸಿದ ಗುಜರಾತ್​​
  • 38 ರನ್​ಗಳ ಜಯ ಸಾಧಿಸಿದ ಗುಜರಾತ್​​ ಟೈಟನ್ಸ್​
  • ಸಾಯಿ ಸುದರ್ಶನ್​ - ಶುಭ್​ಮನ್​ ಗಿಲ್​ ಶೈನಿಂಗ್​

ಅಹ್ಮದಾಬಾದ್​ನ​​ ನಮೋ ಮೈದಾನದಲ್ಲಿ ನಿನ್ನೆ ಗುಜರಾತ್​​ ದರ್ಬಾರ್​ ನಡೆಸಿತು. ಕ್ಯಾಪ್ಟನ್​ ಶುಭ್​ಮನ್​ ಗಿಲ್​, ಸಾಯಿ ಸುದರ್ಶನ್​, ಜೋಸ್​ ಬಟ್ಲರ್​ ಬೆಂಕಿ ಬ್ಯಾಟಿಂಗ್​​ ನಡೆಸಿದ್ರು. ಗುಜರಾತ್​ ಬೌಲರ್ಸ್ ಬಿಗಿ​​ ಬೌಲಿಂಗ್​ ಮುಂದೆ ಹೈದ್ರಾಬಾದ್​ನ ಬ್ಯಾಟಿಂಗ್​ ಹೀರೋಸ್​ ಮಂಡಿಯೂರಿದ್ರು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ಗಿಳಿದ ಗುಜರಾತ್​ ಟೈಟನ್ಸ್​ ಸಾಯಿ ಸುದರ್ಶನ್​, ಶುಭ್​ಮನ್​ ಗಿಲ್​ ಅಬ್ಬರಿಸಿದ್ರು. ನಮೋ ಅಂಗಳದ ಅಷ್ಟದಿಕ್ಕಿಗೂ ಚೆಂಡಿನ ದರ್ಶನ ಮಾಡಿಸಿದ ಈ ಜೋಡಿ ಹೈದ್ರಾಬಾದ್​ ಬೌಲಿಂಗ್​​ ದಾಳಿಯನ್ನ ಚಿಂದಿ ಉಡಾಯಿಸಿದ್ರು. ಪವರ್​ಫುಲ್​ ಆರಂಭ ಪಡೆದ ಗುಜರಾತ್​​ ಪವರ್​​ ಪ್ಲೇನಲ್ಲೇ ವಿಕೆಟ್​ ನಷ್ಟವಿಲ್ಲದೇ 82 ರನ್​ಗಳಿಸಿತು.

ಇದನ್ನೂ ಓದಿ: RCB vs CSK ಹೈವೋಲ್ಟೇಜ್ ಪಂದ್ಯ ನಡೆಯುತ್ತಾ.. ವೆದರ್ ರಿಪೋರ್ಟ್ ಏನ್ ಹೇಳುತ್ತೆ?

publive-image

23 ಎಸೆತ ಎದುರಿಸಿದ ಸಾಯಿ ಸುದರ್ಶನ್​​ 9 ಆಕರ್ಷಕ ಬೌಂಡರಿ ಬಾರಿಸಿದ್ರು. 208ರ ಸ್ಟ್ರೈಕ್​ರೇಟ್​ನಲ್ಲಿ ಬೀಸಿದ ಸುದರ್ಶನ್​ 48 ರನ್​ಗಳಿಸಿದ್ರು. ನಮೋ ಅಂಗಳದಲ್ಲಿ ಶೈನ್​ ಆದ ಶುಭ್​ಮನ್​ ಗಿಲ್​ ಮತ್ತೊಂದು ಹಾಫ್​ ಸೆಂಚುರಿ ಸಿಡಿಸಿದ್ರು. 10 ಬೌಂಡರಿ, 2 ಸಿಕ್ಸರ್​​ ಸಿಡಿಸಿದ ಶುಭ್​​ಮನ್​ 38 ಎಸೆತಗಳಲ್ಲಿ 76 ರನ್​ಗಳಿಸಿ ಔಟಾದ್ರು.

3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಜೋಸ್​ ಬಟ್ಲರ್​​ ಅಬ್ಬರಿಸಿದ್ರು. 3 ಬೌಂಡರಿ, 4 ಸಿಕ್ಸರ್​ ಚಚ್ಚಿದ ಬಟ್ಲರ್​​ ಅರ್ಧಶತಕ ಸಿಡಿಸಿದ್ರು. 3 ಬೌಂಡರಿ, 4 ಸಿಕ್ಸರ್​ ಬಾರಿಸಿದ ಬಟ್ಲರ್​​ 37 ಎಸೆತಗಳಲ್ಲಿ 64 ರನ್​ಗಳಿಸಿ ಮಿಂಚಿದ್ರು. ಕೊನೆಯ ಓವರ್​​ನಲ್ಲಿ ಜಯದೇವ್​ ಉನಾದ್ಕತ್​ ಮ್ಯಾಜಿಕ್​ ಮಾಡಿದ್ರು. 21 ರನ್​ಗಳಿಸಿದ್ದ ವಾಷಿಂಗ್ಟನ್​ ಸುಂದರ್​, ರಾಹುಲ್​ ತೆವಾಟಿಯಾ, ರಶೀದ್​ ಖಾನ್​ ವಿಕೆಟ್​ ಉರುಳಿಸಿದ್ರು. ಅಂತಿಮವಾಗಿ 20 ಓವರ್​ ಅಂತ್ಯಕ್ಕೆ 6 ವಿಕೆಟ್​ ಕಳೆದುಕೊಂಡ ಗುಜರಾತ್​ ಟೈಟನ್ಸ್​ 224 ರನ್​ಗಳ ಬಿಗ್​ ಸ್ಕೋರ್​ ಕಲೆ ಹಾಕಿತು.

ಬಿಗ್​ ಟಾರ್ಗೆಟ್​ ಚೇಸಿಂಗ್​ಗಿಳಿದ ಸನ್​ರೈಸರ್ಸ್​ ಹೈದ್ರಾಬಾದ್​ಗೆ ಬ್ಯಾಟ್ಸ್​ಮನ್​ಗಳು ಕೈ ಕೊಟ್ರು. ಗುಜರಾತ್​ ಬೌಲರ್​​ಗಳು ಶಿಸ್ತಿನ ಬೌಲಿಂಗ್​ ದಾಳಿಗೆ ದಂಗಾದ ಹೈದ್ರಾಬಾದ್​ ಬ್ಯಾಟರ್ಸ್​ ಮಂಡಿಯೂರಿದ್ರು. 4 ಬೌಂಡರಿ ಭರವಸೆ ಮೂಡಿಸಿದ್ದ ಹೆಡ್​ 20 ರನ್​ಗಳಿ ಆಟ ಅಂತ್ಯಗೊಳಿಸಿದ್ರೆ, ಇಶಾನ್​ ಕಿಶನ್​ ಮತ್ತೊಂದು ಫ್ಲಾಪ್​ ಶೋ ನೀಡಿದ್ರು. ಹೈದ್ರಾಬಾದ್​ ಪರ ಏಕಾಂಗಿ ಹೋರಾಟ ನಡೆಸಿದ ಅಭಿಶೇಕ್​ ಶರ್ಮಾ ಹಾಫ್​ ಸೆಂಚುರಿ ಇನ್ನಿಂಗ್ಸ್​ ಕಟ್ಟಿದ್ರು. 4 ಬೌಂಡರಿ, 6 ಸಿಕ್ಸರ್​ ಬಾರಿಸಿದ ಅಭಿಶೇಕ್​​ 41 ಎಸೆತಗಳಲ್ಲಿ 74 ರನ್​ಗಳಿಸಿದ್ರು.

ಇದನ್ನೂ ಓದಿ: ಗಿಲ್ ಭರ್ಜರಿ ಹ್ಯಾಟ್ರಿಕ್​ ಅರ್ಧಶತಕ.. 2 ರನ್​ ಇಂದ ಸುದರ್ಶನ್ ಹಾಫ್​ಸೆಂಚುರಿ ಮಿಸ್

publive-image

74 ರನ್​ಗಳಿಸಿದ್ದ ಅಭಿಶೇಕ್​ ಆಟಕ್ಕೆ ಇಶಾಂತ್​ ಶರ್ಮಾ ಬ್ರೇಕ್​ ಹಾಕಿದ್ರು. ಹೆನ್ರಿಷ್​ ಕ್ಲಾಸೆನ್​ ಪ್ರಸಿದ್ಧ್​ ಕೃಷ್ಣಗೆ ಶರಣಾದ್ರು. ಅನಿಕೇತ್​​ ವರ್ಮಾ, ಕಮಿಂಡು ಮೆಂಡೀಸ್​ ಆಟ ವೇಗಿ ಸಿರಾಜ್​​ ಮುಂದೆ ನಡೆಯಲಿಲ್ಲ.

ಪ್ರಸಿದ್ಧ ಕೃಷ್ಣ ಶೈನ್..

ಕನ್ನಡಿಗ ಪ್ರಸಿದ್ಧ ಕೃಷ್ಣ ಅವರು ಸೂಪರ್ ಬೌಲಿಂಗ್ ಮಾಡಿದರು. ತಮ್ಮ ಕೋಟಾದ ನಾಲ್ಕು ಓವರ್​ನಲ್ಲಿ 4.80 ಸರಾಸರಿಯೊಂದಿಗೆ ಕೇವಲ 19 ರನ್​ ನೀಡಿದರು. ಮಾತ್ರವಲ್ಲ, ಎದುರಾಳಿಯ ಎರಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಟ್ರಾವಿಸ್ ಹೆಡ್, ಕ್ಲಾಸೆನ್ ವಿಕೆಟ್​ ಪಡೆದುಕೊಂಡರು.

ನಿತೀಶ್​ ರೆಡ್ಡಿ, ಪ್ಯಾಟ್​ ಕಮಿನ್ಸ್ ಅಂತಿಮ ಕ್ಷಣದಲ್ಲಿ ನಡೆಸಿದ​ ಹೋರಾಟ ಗೆಲುವಿನ ದಡ ಸೇರಿಸಲಿಲ್ಲ. ಅಂತಿಮವಾಗಿ 20 ಓವರ್​ ಅಂತ್ಯಕ್ಕೆ 6 ವಿಕೆಟ್​ ಕಳೆದುಕೊಂಡ ಸನ್​ರೈಸರ್ಸ್​ ಹೈದ್ರಾಬಾದ್​ ​186 ರನ್​​ಗಳಿಸಲಷ್ಟೇ ಶಕ್ತವಾಯ್ತು. 38 ವಿಕೆಟ್​ಗಳ ಜಯ ಸಾಧಿಸಿದ ಗುಜರಾತ್​ ಟೈಟನ್ಸ್​ ಪಾಯಿಂಟ್ಸ್​ ಟೇಬಲ್​ನಲ್ಲಿ 2ನೇ ಸ್ಥಾನಕ್ಕೆ ಜಂಪ್​ ಮಾಡ್ತು. ಸೋತ ಸನ್​​ರೈಸರ್ಸ್​ ಹೈದ್ರಾಬಾದ್​ನ ಫ್ಲೇ ಆಫ್​ ಕನಸು ಬಹುತೇಕ ಕಮರಿತು.

ಇದನ್ನೂ ಓದಿ: ಹೈದ್ರಾಬಾದ್​ ಪ್ಲೇ ಆಫ್​ ಕನಸು ಭಗ್ನ..? ಬೃಹತ್ ಟಾರ್ಗೆಟ್​ ನೀಡಿದ್ದ ಗಿಲ್ ಪಡೆಗೆ ಗೆಲುವು

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment