newsfirstkannada.com

ಕನಕ ಜಯಂತಿ ಕಾರ್ಯಕ್ರಮದ ವೇಳೆ ಹೈಡ್ರಾಮ.. ಯತೀಂದ್ರ ಸಿದ್ದರಾಮಯ್ಯಗೆ ಅವಾಚ್ಯ ಶಬ್ದದಿಂದ ನಿಂದಿಸಿದ ಯುವಕ

Share :

Published January 28, 2024 at 8:00am

Update January 28, 2024 at 8:02am

  ರಾಮಮಂದಿರ ಕಟ್ಟಿದಾಕ್ಷಣ ರಾಮರಾಜ್ಯ ಸೃಷ್ಟಿಯಾಗುವುದಿಲ್ಲ

  ಬಿಜೆಪಿ ರಾಮಮಂದಿರವನ್ನು ರಾಜಕೀಯಕ್ಕೆ ಬಳಸಿಕೊಳ್ತಿದ್ದಾರೆ

  ಯತೀಂದ್ರ ಸಿದ್ದರಾಮಯ್ಯ ಭಾಷಣದ ವೇಳೆ ನಿಂದಿಸಿದ ಯುವಕ

ಗುಂಡ್ಲುಪೇಟೆ: ಕನಕ ಜಯಂತಿ ಕಾರ್ಯಕ್ರಮದ ವೇಳೆ ಗುಂಡ್ಲುಪೇಟೆ ಮೈದಾನದಲ್ಲಿ ಹೈಡ್ರಾಮ ನಡೆದಿದೆ. ಬೈಕ್​ನಲ್ಲಿ ಬಂದಿದ್ದ ರಂಜಿತ್ ಎಂಬಾತ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯಗೆ ಅವಾಚ್ಯ ಶಬ್ದದಿಂದ ನಿಂದಿಸಿ ಪರಾರಿಯಾಗಿದ್ದಾನೆ.

ಬಿಜೆಪಿ ರಾಮಮಂದಿರ ನಿರ್ಮಾಣವನ್ನು ರಾಜಕೀಯಕ್ಕೆ ಬಳಸಿಕೊಳ್ತಿದ್ದಾರೆ. ರಾಮಮಂದಿರ ಕಟ್ಟಿದಾಕ್ಷಣ ರಾಮರಾಜ್ಯ ಸೃಷ್ಟಿಯಾಗುವುದಿಲ್ಲ. ಬಡವರನ್ನು, ದೀನದಲಿತರನ್ನು, ಅಬಲೆ ಮಹಿಳೆಯರಿಗೆ ನ್ಯಾಯ ಸಿಕ್ಕಾಗ ಮಾತ್ರ ರಾಮರಾಜ್ಯವಾಗುತ್ತೆ ಎಂದು ಯತೀಂದ್ರ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದರು. ಈ ವೇಳೆ ರಂಜಿತ್ ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ.

ಬಳಿಕ ರಂಜಿತ್​ನನ್ನ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಕೆಲಕಾಲ ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನಕ ಜಯಂತಿ ಕಾರ್ಯಕ್ರಮದ ವೇಳೆ ಹೈಡ್ರಾಮ.. ಯತೀಂದ್ರ ಸಿದ್ದರಾಮಯ್ಯಗೆ ಅವಾಚ್ಯ ಶಬ್ದದಿಂದ ನಿಂದಿಸಿದ ಯುವಕ

https://newsfirstlive.com/wp-content/uploads/2024/01/Yathindra-Siddaramaiah-2.jpg

Load More