ಕೊಲೆಯಾದ ವ್ಯಕ್ತಿ ತೊಡೆ ಮೇಲೆ ಬರೋಬ್ಬರಿ 22 ಹೆಸರು ಪತ್ತೆ.. ಬೆಚ್ಚಿಬಿದ್ದ ಪೊಲೀಸ್ರು!

author-image
Veena Gangani
Updated On
ಕೊಲೆಯಾದ ವ್ಯಕ್ತಿ ತೊಡೆ ಮೇಲೆ ಬರೋಬ್ಬರಿ 22 ಹೆಸರು ಪತ್ತೆ.. ಬೆಚ್ಚಿಬಿದ್ದ ಪೊಲೀಸ್ರು!
Advertisment
  • ಗುರು ವಾಘಮಾರೆಯನ್ನು ಕೊಲೆ ಮಾಡಿದ್ದ ನಾಲ್ವರನ್ನು ಬಂಧಿಸಿದ ಪೊಲೀಸ್​
  • ಪೊಲೀಸರು ಅಪರೂಪದಲ್ಲೇ ಅಪರೂಪದ ಕೇಸ್​ ಎಂದಿದ್ದೇಕೆ?
  • ಹತ್ಯೆಯಾದ ವ್ಯಕ್ತಿಯ ತೊಡೆ ನೋಡಿ ಅಚ್ಚರಿಗೊಂಡ ಪೊಲೀಸ್ ಅಧಿಕಾರಿಗಳು

ಮುಂಬೈ: ವರ್ಲಿಯಲ್ಲಿನ ಸ್ಪಾವೊಂದರಲ್ಲಿ ಭೀಕರ ಕೊಲೆಯಾಗಿರೋ ವ್ಯಕ್ತಿಯ ತೊಡೆಯ ಮೇಲೆ ಬರೋಬ್ಬರಿ 22 ಮಂದಿಯ ಹೆಸರು ಇರೋ ಹಚ್ಚೆಗಳು ಪತ್ತೆಯಾಗಿದೆ. ಇದನ್ನು ನೋಡಿದ ಪೊಲೀಸರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ.

ಇದನ್ನೂ ಓದಿ:ಬೆಂಗಳೂರಲ್ಲಿ ನಾಯಿ ಮಾಂಸ ಮಾರಾಟ ಆರೋಪ; ಪುನೀತ್​​ ಕೆರೆಹಳ್ಳಿ ತಂಡದಿಂದ ದಾಳಿ; ಮುಂದೇನಾಯ್ತು?

publive-image

ಬುಧವಾರ ಮುಂಜಾನೆ ಮುಂಬೈನ ವರ್ಲಿಯಲ್ಲಿರುವ ಸಾಫ್ಟ್ ಟಚ್ ಸ್ಪಾದಲ್ಲಿ ಗುರು ವಾಘಮಾರೆ (48) ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಗುರು ವಾಘಮಾರೆ ತನ್ನ ಗೆಳತಿಯೊಂದಿಗೆ ಸಿಯಾನ್‌ನಲ್ಲಿ ಪಾರ್ಟಿ ಮಾಡುತ್ತಿದ್ದ. ಪಾರ್ಟಿ ಮುಗಿಸಿದ ಬಳಿಕ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಸ್ಪಾ ಬಂದಿದ್ದ. ಇದನ್ನು ಗಮನಿಸಿದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಸ್ಪಾಗೆ ನುಗ್ಗಿ ವಾಘಮಾರೆಯನ್ನು ಚಾಕುವಿನಿಂದ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಸ್ಪಾನಲ್ಲಿ ಹತ್ಯೆಗೀಡಾದವನ ತೊಡೆ ಮೇಲೆ 22 ಮಂದಿಯ ಹೆಸರುಗಳು ಇರುವುದು ಪತ್ತೆಯಯಾಗಿದೆ. ಇದನ್ನೇ ನೋಡಿದ ಪೊಲೀಸರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ.

publive-image

ಇದನ್ನೂ ಓದಿ:ಬಿಗ್‌ಬಾಸ್ ಸೀಸನ್‌ 11ಗೆ ಭರ್ಜರಿ ತಯಾರಿ; ಪಾರು ಖ್ಯಾತಿಯ ಮೋಕ್ಷಿತಾ ಹೋಗೋದು ಪಕ್ಕಾನಾ?

ಸದ್ಯ ಈ ಕೊಲೆ ಸಂಬಂಧ ಮುಂಬೈ ಪೊಲೀಸ್ ಅಧಿಕಾರಿಗಳು ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ. ಈ ಕೊಲೆ ಕೇಸ್​ನಲ್ಲಿ ವಾಘಮಾರೆ ಗೆಳತಿಯ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಯಾಗಿರೋ ಸ್ಪಾ ಮಾಲೀಕ ಸಂತೋಷ್ ಶೇರೆಕರ್ ಎಂಬಾತನ ಹೆಸರು ಹಚ್ಚೆಯಲ್ಲಿ ಸೇರಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೊತೆಗೆ ತನ್ನ ಕೊಲೆಗೆ ಸಂಚು ರೂಪಿಸಬಹುದಾದ ಶತ್ರುಗಳ ಹೆಸರನ್ನು ಈ ಹಿಂದೆಯೇ ತನ್ನ ತೊಡೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದನಂತೆ. ಇದನ್ನು ಕಂಡ ಪೊಲೀಸರು ಇದು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment