/newsfirstlive-kannada/media/post_attachments/wp-content/uploads/2023/09/USA_RAVISHANKAR.jpg)
ವಸುದೈವ ಕುಟುಂಬಕಂ.. ಇದು ಜಗತ್ತಿಗೆ ಭಾರತ ಕೊಟ್ಟ ಸಂದೇಶ. ಈ ಸಂದೇಶ ಹೊತ್ತು ಸಾಂಸ್ಕೃತಿಕ ಭಿನ್ನತೆಯಲ್ಲಿ ಏಕತೆ ಸಾಧಿಸುವ ಅಪೂರ್ವ ಕಾರ್ಯಕ್ರಮವೊಂದು ಅಮೆರಿಕದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಶ್ರೀರವಿಶಂಕರ್ ಗುರೂಜಿ ನೇತೃತ್ವ ವಹಿಸಲಿದ್ದಾರೆ. ಈ ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ 180 ದೇಶಗಳ 17 ಸಾವಿರ ಕಲಾವಿದರು ತಮ್ಮ ದೇಶವನ್ನ ಪ್ರತಿನಿಧಿಸಲಿದ್ದಾರೆ.
7,000 ನರ್ತಕರನ್ನೊಳಗೊಂಡ ಗಾರ್ಭನೃತ್ಯ ವೈಭವ. 100 ಬ್ರೇಕ್ ಡ್ಯಾನ್ಸ್ನ ನರ್ತಕರು. 1,000 ಗಿಟಾರ್ ವಾದ್ಯ. ಹೀಗೆ ನೂರಾರು ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು. ಲಕ್ಷಾಂತರ ಜನ ಕಲಾ ಪ್ರಿಯರು ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಭಾರೀ ಸಿದ್ಧತೆಯನ್ನ ಮಾಡಿಕೊಳ್ಳುತ್ತಿದ್ದಾರೆ.
[caption id="attachment_20840" align="aligncenter" width="800"] ನೃತ್ಯ ಕಲಾವಿದರು[/caption]
ಅವಿಸ್ಮರಣೀಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ ವಾಷಿಂಗ್ಟನ್
ಗುರುದೇವ್ ಶ್ರೀ ಶ್ರೀ ರವಿಶಂಕರ್ ಗುರೂಜಿ ಮುಂದಾಳತ್ವದಲ್ಲಿ ವಿಶ್ವ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ. 17,000 ಕಲಾವಿದರನ್ನ ಒಳಗೊಂಡ ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಸುಂದರ ಸಾಂಸ್ಕೃತಿಕ ಸಮ್ಮಿಲನಕ್ಕೆ ಸಾಕ್ಷಿಯಾಗಲು ಇಡೀ ವಿಶ್ವದ ಕಣ್ಣುಗಳು ಕಾತರಿಸಿವೆ ಕೂತಿವೆ.
ಇದು ಆರ್ಟ್ ಆಫ್ ಲಿವಿಂಗ್ನ ವಿಶ್ವ ಸಾಂಸ್ಕೃತಿಕ ಉತ್ಸವದ ನಾಲ್ಕನೇ ಆವೃತ್ತಿ. ಈ ಕಾರಣಕ್ಕೆ ವಾರಾಂತ್ಯ ಜಗತ್ತಿನ ಕಣ್ಣುಗಳು ವಾಷಿಂಗ್ಟನ್ ಡಿಸಿ ಮೇಲಿರಲಿವೆ. ಸೆಪ್ಟೆಂಬರ್ 29, 30, ಅಕ್ಟೋಬರ್ 1ರವರೆಗೆ ಅಮೆರಿಕ ರಾಜಧಾನಿಯು ಅವಿಸ್ಮರಣೀಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ. ವಿಶ್ವ ವೈವಿಧ್ಯತೆಯಲ್ಲಿ ಏಕತೆಯ ಉತ್ಸವಕ್ಕೆ ಅಮೆರಿಕ ಆತಿಥ್ಯ ವಹಿಸಲಿದೆ.
ತಮ್ಮ ಪ್ರತಿಭೆ ಜಗತ್ತಿಗೆ ತೋರಲಿದ್ದಾರೆ 17,000 ಕಲಾವಿದರು
ಈ ಸುಂದರ ಸಂಭ್ರಮ ಕಾರ್ಯಕ್ರಮಕ್ಕೆ ಅದರ ವೇದಿಕೆಯ ವೈಭವ ಮೆರಗು ನೀಡ್ತಿದೆ. ಒಂದು ಫುಟ್ಬಾಲ್ ಮೈದಾನದಷ್ಟಿರುವ ವೇದಿಕೆಯ ಉತ್ಸವದಲ್ಲಿ 17,000 ಕಲಾವಿದರು ತಮ್ಮ ಪ್ರತಿಭೆ ಜಗತ್ತಿಗೆ ತೋರಲಿದ್ದಾರೆ. ಅನೇಕ ರಾಜ್ಯಗಳ ಮುಖ್ಯಸ್ಥರು, 100ಕ್ಕಿಂತಲೂ ಹೆಚ್ಚು ದೇಶಗಳ ಚಿಂತಕರು ಈ ನ್ಯಾಷನಲ್ ಮಾಲ್ನಲ್ಲಿ ಸೇರಲಿದ್ದು, ಅರ್ಧ ಮಿಲಿಯನ್ ಜನ ಕಣ್ತುಂಬಿ ಕೊಳ್ಳಲಿದ್ದಾರೆ. ಉತ್ಸವದಲ್ಲಿ 50 ಪ್ರದರ್ಶನಗಳು ನಡೆಯಲಿವೆ. ಅಲ್ಲದೆ, ಜಗತ್ತಿನ ಎಲ್ಲೆಡೆಯ ಆಹಾರಗಳ ಮೇಳ ನಡೆಯಲಿದೆ.
ವಿಶ್ವ ಸಾಂಸ್ಕೃತಿಕ ಒಲಿಂಪಿಕ್ಸ್
- ಭಾರತದ 7,000 ನರ್ತಕರನ್ನೊಳಗೊಂಡ ಗಾರ್ಭನೃತ್ಯ
- ಹೆಜ್ಜೆ ಹಾಕುವ 700 ಭಾರತೀಯ ಶಾಸ್ತ್ರೀಯ ನರ್ತಕರು
- ಈ ವರ್ಷ ಹಿಪ್ಹಾಪ್ನ 50ನೆಯ ವರ್ಷದ ಸಂಭ್ರಮ
- ಕುರ್ಟಿಸ್ ಬ್ಲೋ, ಎಸ್.ಹೆಚ್ ಎ- ರಾಕ್, ಸೀಕ್ವೆನ್ಸ್ ಗರ್ಲ್ಸ್
- 100 ಬ್ರೇಕ್ ಡ್ಯಾನ್ಸ್ ಕಲಾವಿದರು ಚೊಚ್ಚಲ ಪ್ರದರ್ಶನ
- ಉಕ್ರೇನ್ನ ಪಾರಂಪರಿಕ ಹೋಪಾಕ್ ನೃತ್ಯ ಪ್ರದರ್ಶನ
- ಕಾರ್ಯಕ್ರಮ ನೀಡಲಿರುವ ಉಕ್ರೇನ್ನ 1 ಸಾವಿರ ಜನ
- ಮಿಕ್ಕಿ ಫ್ರೀ ಯವಲ ನೇತೃತ್ವದಲ್ಲಿ ಸಾವಿರ ಕಲಾವಿದರು ಗಿಟಾರ್
- ಬಾಬ್ ಮಾರ್ಲೆಯವರ ಖ್ಯಾತ ಒನ್ ಲವ್ನ ಮರುಸೃಷ್ಟಿ
- ಚೀನಾದ 1 ಸಾವಿರ ಕಲಾವಿದರಿಂದ ಸಾಂಸ್ಕೃತಿಕ ಪ್ರದರ್ಶನ
[caption id="attachment_20841" align="aligncenter" width="800"] ಕಲಾವಿದರು ನೃತ್ಯ ಮಾಡುತ್ತಿರುವುದು[/caption]
1963ರ ವೇಳೆ ಇದೇ ನ್ಯಾಷನಲ್ ಮಾಲ್ನಲ್ಲಿ ಮಾರ್ಟಿನ್ ಲೂಥರ್ ಕಿಂಗ್ ತಮ್ಮ ಖ್ಯಾತ ಐ ಹಾವ್ ಎ ಡ್ರೀಮ್ ಎಂಬ ಜಗತ್ತಿಗೆ ಏಕತೆ, ಸಮನ್ವಯತೆ ಸಂದೇಶ ನೀಡಿದ್ದರು. ಈಗ ಇದೇ ನ್ಯಾಷನಲ್ ಮಾಲ್ನಲ್ಲಿ ರವಿಶಂಕರ್ ಗುರೂಜಿ, ಒಂದೇ ಜಾಗತಿಕ ಕುಟುಂಬ ಎಂಬ ಫಲಕದಡಿ ಗಡಿ, ಧರ್ಮ, ಮತ, ಪಂಥ ಮೀರಿ 180 ದೇಶಗಳ ಜನರನ್ನ ಸಾಂಸ್ಕೃತಿಕವಾಗಿ ಒಗ್ಗೂಡಿಸುವ ಕೆಲಸಕ್ಕೆ ಕೈಹಾಕಿದ್ದಾರೆ.
ಈ ಉತ್ಸವದಲ್ಲಿ ವಿಶ್ವದ ಗಣ್ಯರು ಭಾಗಿ ಆಗ್ತಿದ್ದಾರೆ. ವಿಶ್ವಸಂಸ್ಥೆಯ 8ನೇ ಜನರಲ್ ಸೆಕ್ರೆಟರಿ ಬಾನ್ ಕೀ ಮೂನ್, ಭಾರತದ ವಿದೇಶಾಂಗ ಸಚಿವ ಜೈಶಂಕರ್, ಅಮೆರಿಕದ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ, ಅಮೆರಿಕ ಸಂಸದ ಹಾನ್. ರಿಕ್ ಸ್ಕಾಟ್, ಹಾನ್. ನಾನ್ಸಿ ಪೆಲೋಸಿ, ಭಾರತದ ಮಾಜಿ ರಾಷ್ಟ್ರಪತಿ ಕೋವಿಂದ್ ಸೇರಿ ಹಲವರು ಭಾಗಿ ಆಗಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ವಿಶ್ವ ಸಾಂಸ್ಕೃತಿಕ ಮೇಳ ಜಗತ್ತಿನ ಗಮನ ಸೆಳೆಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ