newsfirstkannada.com

ಕುಟುಂಬದ ಮುಂದೆಯೇ ಉದ್ಯಮಿಯನ್ನು ಭೀಕರವಾಗಿ ಕೊಂದ ಹಂತಕರು; ಅಸಲಿಗೆ ಆಗಿದ್ದೇನು?

Share :

Published March 9, 2024 at 6:10am

  ಸಚಿನ್ ಹತ್ಯೆಯಾದ ಪ್ರಾಪರ್ಟಿ ಡೀಲರ್-ಗುಜರಿ ವ್ಯಾಪಾರಿ

  ಇಬ್ಬರು ಮಕ್ಕಳ ಮುಂದೆಯೇ ಮೂವರು ದುಷ್ಕರ್ಮಿಗಳಿಂದ ಹತ್ಯೆ

  ನೇಪಾಳದ ಗಡಿಯಲ್ಲಿ ಪಲಾಯನ ಮಾಡುತ್ತಿದ್ದಾಗ ಲಾಕ್

ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್ ನಡೆಸುತ್ತಿರುವ ಆಟಾಟೋಪಗಳಿಗೆ ಕಡಿವಾಣ ಹಾಕೋಗಾಗ್ತಿಲ್ಲ. ಪೊಲೀಸ್​ ಇಲಾಖೆ ತಂತ್ರಜ್ಞಾನದಲ್ಲಿ ಅದೆಷ್ಟೇ ಮುಂದುವರೆದಿದೆ. ಅಷ್ಟೇ ಏಕೆ ಮೋಸ್ಟ್​ ವಾಂಟೇಡ್ ಕ್ರಿಮಿನಲ್ ಲಾರೆನ್ಸ್​ ಬಿಷ್ಣೋಯಿಯನ್ನೇ ಹಿಡಿದು ಒಳಗಾಗಿರುವ ಪೊಲೀಸರಿಗೆ ಆತನ ಗ್ಯಾಂಗ್​ನ ಆಟಗಳಿಗೆ ಫುಲ್​ ಸ್ಟಾಪ್ ಹಾಕೋಕೆ ಆಗ್ತಿಲ್ಲ.

ಈಗ ಮತ್ತೊಂದು ಡೆಡ್ಲಿ ಅಟ್ಯಾಕ್ ಮಾಡಿ ಉದ್ಯಮಿಯೊಬ್ಬನನ್ನು ಆತನ ಕುಟುಂಬದ ಮುಂದೆಯೇ ಬರ್ಬರವಾಗಿ ಕೊಲೆ ಮಾಡಿದೆ. ಈ ಹತ್ಯೆ ನಡೆದಿರುವುದು ಹರ್ಯಾಣದ ರೋಹ್ಟಕ್​ನಲ್ಲಿ. ಫೆಬ್ರವರಿ 29ರಂದು ಪ್ರಾಪರ್ಟಿ ಡೀಲರ್ ಹಾಗೂ ಗುಜರಿ ವ್ಯಾಪಾರಿಯೊಬ್ಬನನ್ನು ಆತನ ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳ ಮುಂದೆಯೇ ಮೂವರು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.

ಮಗನನ್ನು ರಕ್ಷಿಸಲು ಬಂದ ತಾಯಿಗೂ ತಗುಲಿದ ಗುಂಡು

ಇನ್ನು, ಕಾರಲ್ಲಿ ಬಂದ ಮೂವರು ದುಷ್ಕರ್ಮಿಗಳು ಏಕಾಏಕಿ ಸಚಿನ್​ ಎಂಬಾತನ ಮೇಲೆ ಫೈರಿಂಗ್ ನಡೆಸಿದ್ದಾರೆ. ಈ ವೇಳೆ ಪತ್ನಿ ಮತ್ತು ಮಕ್ಕಳು ಹೌಹಾರಿದ್ದಾರೆ. ಮಗನಿಗೆ ಗುಂಡು ಹಾರಿಸದಂತೆ ತಡೆಯಲು ಬಂದ ತಾಯಿಯ ಕಾಲಿಗೂ ಗುಂಡು ತಗುಲಿದೆ. ಈ ಬರ್ಬರ ಹತ್ಯೆಯನ್ನು ನಾವೇ ಮಾಡಿದ್ದು ಅಂತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ಒಪ್ಪಿಕೊಂಡಿದೆ. ಕೊಲೆಯಾದ ಸಚಿನ್ ಮೇಲೆ 10 ರಿಂದ 15 ಬಾರಿ ಹಂತಕರು ಗುಂಡು ಹಾರಿಸಿದ್ದಾರೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸದ್ಯ ಪೊಲೀಸರು ಸಚಿನ್ ಕುಟುಂಬಸ್ಥರಿಂದ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಟುಂಬದ ಮುಂದೆಯೇ ಉದ್ಯಮಿಯನ್ನು ಭೀಕರವಾಗಿ ಕೊಂದ ಹಂತಕರು; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/03/cctv-death-1.jpg

Load More