/newsfirstlive-kannada/media/post_attachments/wp-content/uploads/2024/11/Guruprasad-1.jpg)
ಮಠ ಸಿನಿಮಾ ಖ್ಯಾತಿಯ ನಿರ್ದೇಶಕ ಗುರು ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದನಾಯಕನಹಳ್ಳಿ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸದ್ಯ ಇವರ ಸಾವಿನ ಬಳಿಕ ಸಾಲು ಸಾಲು ಆರೋಪಗಳು ಕೇಳಿಬರುತ್ತಿವೆ.
ನಿರ್ದೇಶಕ ಗುರುಪ್ರಸಾದ್ ಕಳೆದ ವರ್ಷ ಚೆಕ್ ಬೌನ್ಸ್ ಕೇಸ್ವೊಂದರಲ್ಲಿ ಅರೆಸ್ಟ್ ಆಗಿದ್ದರು.ಇದಾದ ಬಳಿಕ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ.
ಅಷ್ಟೇ ಅಲ್ಲದೆ ಜಯನಗರದ ಟೋಟಲ್ ಕನ್ನಡ ಪುಸ್ತಕ ಮಳಿಗೆಯಲ್ಲಿ ಪುಸ್ತಕ ಖರೀದಿಸಿ 65 ಸಾವಿರ ರೂಪಾಯಿ ಹಣ ನೀಡದೆ ಸತಾಯಿಸುತ್ತಿರುವುದಾಗಿ ಮಳಿಗೆ ಮಾಲೀಕ ಲಕ್ಷ್ಮೀಕಾಂತ್ ಆರೋಪಿಸಿದ್ದರು. ಹೀಗಾಗಿ ಆತ್ಮಹತ್ಯೆಯ ಹಿಂದೆ ಪೊಲೀಸರಿಗೆ ಹಲವು ಅನುಮಾನಗಳು ಮೂಡಿವೆ.
ಇದನ್ನೂ ಓದಿ: 52 ವರ್ಷ, 5 ಸಿನಿಮಾ.. ರಿಯಲಿಸ್ಟಿಕ್ ಡೈರೆಕ್ಟರ್ ಗುರುಪ್ರಸಾದ್ಗೆ ಏನಾಯ್ತು? ಇಂಥಾ ನಿರ್ಣಯ ಯಾಕೆ?
ಡೈರೆಕ್ಟರ್ ಗುರುಪ್ರಸಾದ್ ಕಳೆದ ಒಂದೇ ವರ್ಷದಲ್ಲಿ ಮೂರು ಮನೆ ಬದಲಿಸಿದ್ದರು ಎಂಬ ಮಾತುಗಳು ಕೇಳಿಬಂದಿವೆ. ಸಾಲಗಾರರ ಕಾಟಕ್ಕೆ ಪದೇಪದೇ ಮನೆ ಚೇಂಜ್ ಮಾಡುತ್ತಿದ್ದರು. ಹೀಗಾಗಿ ಗುರುಪ್ರಸಾದ್ ವಿರುದ್ಧ ಹಲವರು ಪೊಲೀಸರಿಗೆ ಕಂಪ್ಲೆಂಟ್ ಮಾಡಿದ್ದಾರೆ ಎಂಬ ಸಂಗತಿ ಬಯಲಿಗೆ ಬಂದಿದೆ.
ಇದನ್ನೂ ಓದಿ: ನಿರ್ದೇಶಕ ಗುರುಪ್ರಸಾದ್ ಯಾವ್ಯಾವ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದರು..?
ಗುರುಪ್ರಸಾದ್ ಬಸವೇಶ್ವರನಗರ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ನಂತರ ಜಯನಗರದ ಕನಕನಪಾಳ್ಯದ ಬಳಿ ವಾಸವಾಗಿದ್ದರು. ನಂತರ ಕೆಲ ದಿನಗಳ ಕಾಲ ಹೋಟೆಲ್ನಲ್ಲೂ ರೂಮ್ ಮಾಡಿದ್ದರು. ಕೆಲವೇ ತಿಂಗಳ ಹಿಂದೆ ನ್ಯೂ ಹೆವೆನ್ ಅಪಾರ್ಟ್ಮೆಂಟ್ಗೆ ಶಿಫ್ಟ್ ಆದರು. ಶಿಫ್ಟ್ ಆದ ಬಳಿಕ ಫ್ಲ್ಯಾಟ್ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿಯೂ ನೀಡಿರಲಿಲ್ಲ. ಸದ್ಯ ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ