ಬೆಳ್ಳಿ ತೆರೆಯ ಜೊತೆಗೆ ಕಿರು ತೆರೆಯಲ್ಲಿಯೂ ಗುರುತಿಸಿಕೊಂಡಿದ್ದ ಗುರು​; ಹೇಗಿತ್ತು ಕಿರುತೆರೆಯ ಜರ್ನಿ?

author-image
Gopal Kulkarni
Updated On
ಬೆಳ್ಳಿ ತೆರೆಯ ಜೊತೆಗೆ ಕಿರು ತೆರೆಯಲ್ಲಿಯೂ ಗುರುತಿಸಿಕೊಂಡಿದ್ದ ಗುರು​; ಹೇಗಿತ್ತು ಕಿರುತೆರೆಯ ಜರ್ನಿ?
Advertisment
  • ಕಿರುತೆರೆಯಲ್ಲೂ ಗುರುತಿಸಿಕೊಂಡಿದ್ದರು ನಿರ್ದೇಶಕ ಗುರುಪ್ರಸಾದ್
  • 4 ಕಾರ್ಯಕ್ರಮಗಳಲ್ಲಿ ಜಡ್ಜ್, ಬಿಗ್ ಬಾಸ್​ನಲ್ಲಿ ಸ್ಪರ್ಧಿಯೂ ಆಗಿದ್ರು
  • ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೂ ಕೆಲಸ ಮಾಡಿದ್ದ ಗುರುಪ್ರಸಾದ್

ಬೆಳ್ಳಿ ತೆರೆಯ ಮೇಲೆ ಮಠ ಸಿನಿಮಾ ಮೂಲಕ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ದ ಗುರುಪ್ರಸಾದ್​, ಅದೇ ರೀತಿಯ ಘಮಲು ಇರುವ ಎದ್ದೇಳು ಮಂಜುನಾಥ ಸಿನಿಮಾ ಮಾಡಿಯೂ ಕೂಡ ಗೆದ್ದಿದ್ದರು. ಬೆಳ್ಳಿ ತೆರೆಯ ಮೇಲೆ ಗುರುತಿಸಿಕೊಂಡಷ್ಟೇ ನಿರ್ದೇಶಕ ಗುರುಪ್ರಸಾದ್​ ಕಿರು ತೆರೆಯಲ್ಲಿಯೂ ಕೂಡ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ:ಗುರುಪ್ರಸಾದ್​ ಆತ್ಮ*ಹತ್ಯೆ ಹಿನ್ನೆಲೆ; ಅಪಾರ್ಟ್​ಮೆಂಟ್ ಸೀಜ್ ಮಾಡಿದ ಪೊಲೀಸರು

ಕಿರುತೆರೆಯ ಒಟ್ಟು ನಾಲ್ಕು ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿ ಗುರುತಿಸಿಕೊಂಡಿದ್ದರು ಗುರುಪ್ರಸಾದ್​, ಬಿಗ್​ಬಾಸ್​ ಸ್ಪರ್ಧಿ ಕೂಡ ಆಗಿದ್ರು. ತಕಧಿಮಿಥಾ ಡ್ಯಾನ್ಸಿಂಗ್ ಸ್ಟಾರ್, ಪುಟಾಣಿ ಪಂಟ್ರು ಸೀಸನ್ 2 ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಭರ್ಜರಿ ಕಾಮಿಡಿ ಶೋಗಳಿಗೆ ಗುರುಪ್ರಸಾದ್​ ತೀರ್ಪುಗಾರರ ಕುರ್ಚಿಯಲ್ಲಿ ಕುಳಿತುಕೊಂಡಿದ್ದರು.

ಇದನ್ನೂ ಓದಿ:52 ವರ್ಷ, 5 ಸಿನಿಮಾ.. ರಿಯಲಿಸ್ಟಿಕ್​​​ ಡೈರೆಕ್ಟರ್​ ಗುರುಪ್ರಸಾದ್​ಗೆ ಏನಾಯ್ತು? ಇಂಥಾ ನಿರ್ಣಯ ಯಾಕೆ?

ಇನ್ನು 2010ರಲ್ಲಿ ಎದ್ದೇಳು ಮಂಜುನಾಥ ಸಿನಿಮಾಗೆ ಬೆಸ್ಟ್ ಡೈರೆಕ್ಟರ್ ಫಿಲ್ಮಫೇರ್​ ಗೌರವ ಕೂಡ ಗುರುಪ್ರಸಾದ್​ರನ್ನ ಅರಸಿ ಬಂದಿತ್ತು. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲೂ ಗುರುಪ್ರಸಾದ್​ ತೆರೆಯ ಹಿಂದೆ ಕೆಲಸ ಮಾಡಿದ್ದರು. ಪುನೀತ್ ರಾಜ್​ಕುಮಾರ್ ಅವರಿಗೆ ಟಾಕ್ ಬ್ಯಾಕ್ ನೀಡುತ್ತಿದ್ದರು ಗುರುಪ್ರಸಾದ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment