ಬೆಂಗಳೂರಿನಲ್ಲಿ 168 ಪ್ರಯಾಣಿಕರಿದ್ದ ಇಂಡಿಯೋ ವಿಮಾನದಿಂದ MAYDAY ಕಾಲ್.. ಮುಂದೇನಾಯ್ತು..?

author-image
Veena Gangani
Updated On
ಬರೋಬ್ಬರಿ 500 ವಿಮಾನ ಖರೀದಿಗೆ ಬಿಗ್ ಡೀಲ್‌; ಏರ್ ಇಂಡಿಯಾವನ್ನೇ ಹಿಂದಿಕ್ಕಿದ ಇಂಡಿಗೋ ವಿಶ್ವ ದಾಖಲೆ
Advertisment
  • ಬೆಂಗಳೂರಿನಲ್ಲಿ ಇಂಡಿಗೋ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್​
  • ಇಂಧನದ ಕೊರತೆಯಿಂದಾಗಿ ಮೇ ಡೇ ಕಾಲ್ ನೀಡಿದ್ದ ಪೈಲಟ್
  • ಪ್ರಯಾಣಿಕರು ಆತಂಕದಿಂದ ಸೀಟಿನ ತುದಿ ಕುಳಿತುಕೊಳ್ಳುವ ಪರಿಸ್ಥಿತಿ

ಅಹಮದಾಬಾದ್ ಏರ್ ಇಂಡಿಯಾ ವಿಮಾನ ಮೇ ಡೇ ಕಾಲ್ ನೀಡಿದ್ದ ಬಳಿಕ ಮತ್ತೊಂದು ವಿಮಾನವೂ ಮೇ ಡೇ ಕಾಲ್ ನೀಡಿದೆ. ಗೌಹಾಟಿ- ಚೆನ್ನೈ ಇಂಡಿಗೋ ವಿಮಾನದಿಂದ ಬೆಂಗಳೂರಿನ ಎಟಿಸಿಗೆ ಮೇ ಡೇ ಕಾಲ್ ನೀಡಲಾಗಿತ್ತು ಎಂದು ಎಟಿಸಿ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ.. ಗೋವಿನ ಕೆಚ್ಚಲು ಕೊಯ್ದು ವಿಕೃತಿ..

publive-image

ಇದರಿಂದಾಗಿ ವಿಮಾನವನ್ನು ಎಮರ್ಜೆನ್ಸಿ ಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಲ್ಯಾಂಡಿಂಗ್ ಮಾಡಲಾಯಿತು. ವಿಮಾನದಲ್ಲಿ ಇಂಧನದ ಕೊರತೆಯಿಂದಾಗಿ ಪೈಲಟ್ ಮೇ ಡೇ ಕಾಲ್ ನೀಡಿದ್ದರು. ಬೆಂಗಳೂರು ಏರ್ ಪೋರ್ಟ್ ನಿಂದ 35 ಮೈಲು ದೂರದಲ್ಲಿದ್ದಾಗ ಮೇ ಡೇ ಕಾಲ್ ಅನ್ನು ಪೈಲಟ್‌ ಎಟಿಸಿಗೆ ನೀಡಿದ್ದರು.

ಇಂಡಿಗೋ ವಿಮಾನದಲ್ಲಿ 168 ಮಂದಿ ಪ್ರಯಾಣಿಕರಿದ್ದರು. ವಿಮಾನದಲ್ಲಿ ಪ್ರಯಾಣಿಕರು ಆತಂಕದಿಂದ ಸೀಟು ತುದಿಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿತ್ತು. ಇಂಧನ ಕೊರತೆಯಾಗುತ್ತಿದ್ದಂತೆ, ಪೈಲಟ್ ಎರಡನೇ ಆಲೋಚನೆ ಮಾಡದೇ, ಎಮರ್ಜೆನ್ಸಿ ಲ್ಯಾಂಡಿಂಗ್‌ಗೆ ನಿರ್ಧಾರ ಮಾಡಿದ್ದರು. ತಕ್ಷಣ ಬೆಂಗಳೂರು ಎಟಿಸಿಯಿಂದ ವಿಮಾನದ ಎಮರ್ಜೆನ್ಸಿ ಲ್ಯಾಂಡಿಂಗ್ ಗೆ ಗ್ರೌಂಡ್ ಸ್ಟಾಪ್​​ಗೆ ಸೂಚನೆಯನ್ನು ನೀಡಲಾಗಿತ್ತು.

publive-image

ಅಗ್ನಿಶಾಮಕ ದಳದ ಸಿಬ್ಬಂದಿ, ಮೆಡಿಕಲ್ ಸಿಬ್ಬಂದಿ ಗ್ರೌಂಡ್ ನಲ್ಲಿ ರೆಡಿಯಾಗಿದ್ದರು. ರಾತ್ರಿ 8.20 ಕ್ಕೆ ಬೆಂಗಳೂರಿನ ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿತ್ತು. ವಿಮಾನಕ್ಕೆ ಇಂಧನ ಭರ್ತಿ ಮಾಡಿಸಿಕೊಂಡು ರಾತ್ರಿ ಚೆನ್ನೈಗೆ ಪ್ರಯಾಣ ಬೆಳೆಸಿದ್ದ ಇಂಡಿಗೋ ವಿಮಾನ ರಾತ್ರಿ 11.25 ರಲ್ಲಿ ಚೆನ್ನೈನಲ್ಲಿ ಸೇಫ್ ಲ್ಯಾಂಡಿಂಗ್ ಮಾಡಿತ್ತು. ಬೆಂಗಳೂರಿನಲ್ಲಿ ಇಂಡಿಗೋ ವಿಮಾನದ ಪೈಲಟ್ ಗಳನ್ನು ಬದಲಾವಣೆ ಮಾಡಿ, ಬೇರೆ ಪೈಲಟ್ ಗಳಿಂದ ಚೆನ್ನೈನತ್ತ ವಿಮಾನ ರವಾನೆ ಮಾಡಲಾಗಿತ್ತು ಎಂದು ಬೆಂಗಳೂರು ಎಟಿಸಿ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment