/newsfirstlive-kannada/media/post_attachments/wp-content/uploads/2025/03/GIRL_BOY_MP_1.jpg)
ಭೋಪಾಲ್: 12 ವರ್ಷದ ಬಾಲಕಿ, 4 ವರ್ಷದ ಬಾಲಕನ ಜೀವವನ್ನು ತೆಗೆದು ನಿರ್ಮಾಣ ಹಂತದ ಕಟ್ಟಡ ಬಳಿಯ ಹೊಂಡದಲ್ಲಿ ಬಿಸಾಕಿ ಹೋಗಿದ್ದಾಳೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದ ಜಾಡು ಹಿಡಿದು ಹೊರಟಿರುವ ಪೊಲೀಸರಿಗೆ, ಶ್ವಾನ ದಳ ಸಿಬ್ಬಂದಿಗೆ ಬಾಲಕಿ ಇಂತಹ ಕೃತ್ಯ ಮಾಡಬಹುದೇ ಎಂದು ದಿಗ್ಭ್ರಮೆ ಆಗಿದ್ದಾರೆ.
ಮಧ್ಯೆ ಪ್ರದೇಶದ ಗ್ರಾಲಿಯರ್ನ ಕಾಸ್ಮೋ ಆನಂದ ಟೌನ್‌ಶಿಪ್‌ನಲ್ಲಿ 4 ವರ್ಷದ ಬಾಲಕ ಕಾಣೆಯಾಗಿದ್ದಾನೆ ಎಂದು ಅವರ ತಂದೆ ರಾಜ್ಕುಮಾರ್, ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಬಾಲಕನ ಪೋಷಕರು ಕಟ್ಟಡದ ಕಾರ್ಮಿಕರು ಆಗಿದ್ದು 2 ತಿಂಗಳ ಹಿಂದೆಯಷ್ಟೇ ಉತ್ತರ ಪ್ರದೇಶದ ಲಲಿತಪುರದ ಮಹುಲೆನ್ ಗ್ರಾಮದಿಂದ ಆನಂದ ಟೌನ್‌ಶಿಪ್‌ಗೆ ಬಂದಿದ್ದರು. ಈ ಕುರಿತು ತನಿಖೆ ಕೈಗೊಂಡಿದ್ದ ಪೊಲೀಸರು, ಕೊನೆಯದಾಗಿ ಬಾಲಕ ಯಾರ ಜೊತೆ ಹೋಗಿದ್ದನು ಎನ್ನುವುದನ್ನು ಸಿಸಿಟಿವಿ ಮೂಲಕ ಕಂಡುಕೊಂಡಿದ್ದರು.
ಪ್ರಕರಣದ ಬಗ್ಗೆ ಬಾಲಕಿ ಹೇಳಿದ್ದೇನು?
12 ವರ್ಷದ ಬಾಲಕಿ ಜೊತೆ ಹೋಗಿರುವುದು ಗೊತ್ತಾಗಿದೆ. ಈ ವೇಳೆ ಪೊಲೀಸರು ಬಾಲಕಿಯನ್ನು ವಿಚಾರಣೆಗೆ ಒಳ ಪಡಿಸಿದ್ದಾರೆ. ವಿಚಾರಣೆ ಸಮಯದಲ್ಲಿ ಬಾಲಕಿ ದಾರಿ ತಪ್ಪಿಸುತ್ತಿದ್ದಳು. ಒಮ್ಮೆ ತಾನು ಹಣ್ಣುಗಳನ್ನು ತಿಂದು ಅವನನ್ನು ಬಿಟ್ಟು ಹೋಗಿದ್ದೆ ಎಂದು ಹೇಳಿದ್ದಳು. ನಾಯಿಗಳು ಅವನನ್ನು ಕಚ್ಚಿವೆ ಎಂದಿದ್ದಳು. ಇದೆಲ್ಲಾ ಆದ ಮೇಲೆ ಯಾರೋ ಸ್ವಾಮೀಜಿ ತನ್ನ ಮೇಲೆ ಮಾಟ-ಮಂತ್ರ ಮಾಡಿ ಅವನ ಸಾವಿಗೆ ಕಾರಣನಾದೆ ಎಂದು ಹೇಳಿದ್ದಾಳೆ. ಬಾಲಕಿಯ ಉತ್ತರಗಳು ಈ ರೀತಿ ಇದ್ದಿದ್ದರಿಂದ ಬೇರೆ ವಿಧಾನ ಬಳಸಿ ಬಾಯಿ ಬಿಡಿಸಿದ್ದಾರೆ ಎನ್ನಲಾಗಿದೆ.
ಹಣ್ಣು ಕೀಳಲು ಬಾಲಕನನ್ನ ಕರೆದುಕೊಂಡು ಹೋಗಿದ್ದಾಳೆ. ಆಗ ಕೆಲ ದುಷ್ಟಶಕ್ತಿಗಳಿಂದ ಪ್ರಭಾವಿತಳಾಗಿ ಈ ಘಟನೆ ಮಾಡಲಾಗಿದೆ ಎಂದು ಇನ್ನೊಮ್ಮೆ ಹೇಳಿದ್ದಾಳೆ. ಇದಾದ ಮೇಲೆ ಘಟನೆ ನಡೆಸಿದ ಸ್ಥಳವನ್ನು ತೋರಿಸಿದ್ದಾಳೆ. ಸತ್ಯ ಏನೆಂಬುದನ್ನು ತಿಳಿಯಳು ಮಹಿಳಾ ಪೊಲೀಸ್ ಸಿಬ್ಬಂದಿ ದೇವತೆಯಂತೆ ನಟಿಸಿ ಹುಡುಗಿಯಿಂದ ನಿಜ ಅಂಶ ಕಂಡುಕೊಂಡಿದ್ದಾರೆ ಎಂದು ಹೇಳಲಾಗಿದೆ.
ದೇಹದ ಮೇಲೆ ಹೊಡೆದ ಗುರುತುಗಳು
ಬಾಲಕನನ್ನ ಪತ್ತೆ ಹಚ್ಚಿದಾಗ ದೇಹದ ಮೇಲೆ ಹೊಡೆದ ಗುರುತುಗಳು ಇವೆ. ಕತ್ತು ಹಿಸುಕಿರುವುದು ಇದೆ. ಜೊತೆಗೆ ತಲೆಯನ್ನು ಕಲ್ಲಿನಿಂದ ಭೀಕರವಾಗಿ ಚಚ್ಚಲಾಗಿದೆ. ನಂತರ ದೇಹವನ್ನು ಯಾರಿಗೂ ಕಾಣದಂತೆ ಅಲ್ಲೇ ಪಕ್ಕದಲ್ಲಿದ್ದ ಪಾಳುಬಿದ್ದ ಕಟ್ಟಡದ ಜಾಗದಲ್ಲಿರುವ ಹೊಂಡದಲ್ಲಿ ಬೀಸಾಕಿ ಹೋಗಿದ್ದಾಳೆ. ಈ ಬಗ್ಗೆ ತನಿಖೆ ನಡೆಸಿರುವ ಪೊಲೀಸರು ದೇಹದ ಮೇಲಿನ ಗಾಯದ ಗುರುತುಗಳು ಇವೆ. ಆದರೆ ವಿಧಿವಿಜ್ಞಾನ ತಜ್ಞರು ಪ್ರಕರಣವನ್ನು ಪರಿಶೀಲಿಸುತ್ತಿದ್ದು ಅಂತಿಮವಾಗಿ ಮಾಹಿತಿ ನೀಡಬೇಕಿದೆ ಎಂದು ಎಸ್ಪಿ ಯಾದವ್ ಹೇಳಿದ್ದಾರೆ.
ಇದನ್ನೂ ಓದಿ: ಒಂದು ಕುಟುಂಬಕ್ಕೆ ಒಂದು ಸರ್ಕಾರಿ ಕೆಲಸ.. ಈ ಯೋಜನೆ ಇರುವುದು ಸತ್ಯನಾ..?
ಘಟನೆ ಹೇಗೆ ನಡೆಯಿತು ಎಂದು ತಿಳಿಯಲು ಪೊಲೀಸರು ಬಾಲಕಿಯ ಜೊತೆಗೆ 8 ವರ್ಷದ ಬಾಲಕನನ್ನು ಜೊತೆಗೆ ಬಿಟ್ಟಿದ್ದರು. ಮೊದಲು ಕೃತ್ಯ ನಡೆಸಲು ಹೇಗೆ.. ಹೇಗೆ ಮಾಡಿದ್ದಳು ಅದರಂತೆ ಮಾಡಿ ತೋರಿಸಿದ್ದಾಳೆ. ಇದನ್ನು ಒಟ್ಟು ಅರ್ಧ ಗಂಟೆ ಕಾಲ ಮಾಡಿದ್ದಳು. ಆಕೆ ಏನೇನು ಮಾಡುತ್ತಿದ್ದಳು ಎನ್ನುವುದನ್ನು ಪೊಲೀಸರು ಹಿಂಬಾಲಿಸಿ ಘಟನೆ ನಡೆಸ ಸ್ಥಳ, ದೇಹವನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.
ಇಂತಹ ಕೃತ್ಯಕ್ಕೆ ಕಾರಣವೇನು
ಈ ಪ್ರಕರಣದಲ್ಲಿ ಬಾಲಕಿಯ ಮಾನಸಿಕ ಸ್ಥಿತಿಯನ್ನು ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಮಾಟ-ಮಂತ್ರ ಅಥವಾ ತಾಂತ್ರಿಕ ಆಚರಣೆಗಳಿಂದ ಬಾಲಕಿ ಪ್ರಭಾವಿತ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಇದು ನಿಖರವಾಗಿ ಇಲ್ಲ. ಇಂತಹ ಕೃತ್ಯಕ್ಕೆ ಕಾರಣವೇನು ಎನ್ನುವುದನ್ನ ಅರ್ಥಮಾಡಿಕೊಳ್ಳಲು ಅಧಿಕಾರಿಗಳು ಯತ್ನಿಸುತ್ತಿದ್ದು ಈಗಲೂ ತನಿಖೆ ಮುಂದುವರೆದಿದೆ.
ಬಾಲಕನನ್ನ ಪತ್ತೆ ಹಚ್ಚವ ತನಿಖೆಯಲ್ಲಿ ಒಟ್ಟು 50 ಪೊಲೀಸ್ ಅಧಿಕಾರಿಗಳು ಜೊತೆಗೆ ಸ್ಥಳೀಯ ಪೊಲೀಸ್ ತಂಡ ಕೂಡ ಸೇರಿಕೊಂಡಿತ್ತು. ಶ್ವಾನ ದಳ ಇದರಲ್ಲಿ ಭಾಗಿಯಾಗಿತ್ತು. ಆದರೂ ಬಾಲಕನ ದೇಹ ಸಿಕ್ಕಿರಲಿಲ್ಲ. ಬಾಲಕಿಯ ತಪ್ಪೊಪ್ಪಿಗೆಯ ನಂತರವೇ ದೇಹ ಪತ್ತೆಯಾಗಿದೆ. ಸದ್ಯ ಈ ಪ್ರಕರಣದಿಂದ ಪೊಲೀಸರು, ಅಧಿಕಾರಿಗಳು ಆಶ್ಚರ್ಯಗೊಂಡಿದ್ದಾರೆ. ಸತ್ಯಕ್ಕಾಗಿ ತನಿಖೆ ಮುಂದುವರೆದಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ