/newsfirstlive-kannada/media/post_attachments/wp-content/uploads/2025/02/CEC.jpg)
ದೇಶದ 26ನೇ ಮುಖ್ಯ ಚುನಾವಣಾಧಿಕಾರಿಯಾಗಿ ಜ್ಞಾನೇಶ್ ಕುಮಾರ್ (Election Commissioner Gyanesh Kumar) ಅವರು ನೇಮಕವಾಗಿದ್ದಾರೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ (PM Modi) ನೇತೃತ್ವದ ಆಯ್ಕೆ ಸಮಿತಿ ನೂತನ ಚುನಾವಣಾ ಅಧಿಕಾರಿಯ (Chief Election Commissioner) ಆಯ್ಕೆ ಸಂಬಂಧ ಮಹತ್ವದ ಸಭೆ ನಡೆಸಿತ್ತು. ಈ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಭಾಗಿಯಾಗಿದ್ದರು.
ಇದನ್ನೂ ಓದಿ: ವಿಚಿತ್ರ ಸಾಹಸಕ್ಕೆ ಕೈಹಾಕಿದ ಚೀನಾ! ಸಮುದ್ರ ಆಳದಲ್ಲಿ ಸ್ಪೇಸ್ ಸ್ಟೇಷನ್, ಭಯ ಹುಟ್ಟಿಸಿದ ಈ ಕಡಲ ಬೇಟೆ..!
ಕೇರಳ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿ ಜ್ಞಾನೇಶ್ ಕುಮಾರ್ ಅವರನ್ನು ನೂತನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರಾಗಿರುವ ರಾಜೀವ್ ಕುಮಾರ್ (Rajiv Kumar) ಇಂದು ನಿವೃತ್ತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜ್ಞಾನೇಶ್ ಕುಮಾರ್ ಅವರನ್ನು CECಯನ್ನಾಗಿ ಮಾಡಲಾಗಿದೆ.
ಜ್ಞಾನೇಶ್ ಕುಮಾರ್ ಯಾರು?
ಜ್ಞಾನೇಶ್ ಕುಮಾರ್ 1988ರ ಬ್ಯಾಚ್ IAS ಅಧಿಕಾರಿ. ಜನವರಿ 31, 2024 ರಂದು ಸೇವೆಗೆ ನಿವೃತ್ತರಾಗಿದ್ದಾರೆ. ಜ್ಞಾನೇಶ್ ಕುಮಾರ್ ಕೇರಳ ಕೇಡರ್ ಅಧಿಕಾರಿ. ಇವರಿಗೆ ಸಂಸದೀಯ ವ್ಯವಹಾರಗಳ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭ ಇದೆ. ಇದಲ್ಲದೇ ಕೇಂದ್ರ ಸಹಕಾರ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಜ್ಞಾನೇಶ್ ಕುಮಾರ್ ಗೃಹ ಸಚಿವಾಲಯದಲ್ಲಿದ್ದಾಗ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೇಂದ್ರ ಸರ್ಕಾರ 370ನೇ ವಿಧಿ ರದ್ದು ಮಾಡಿದಾಗ ಗೃಹ ಸಚಿವಾಲಯದಲ್ಲಿ ಜಮ್ಮು ಮತ್ತು ಕಾಶ್ಮೀರ ಭಾಗದ ಉಸ್ತುವಾರಿಯಾಗಿದ್ದರು.
ಇದನ್ನೂ ಓದಿ: ಮೋದಿ ಟೀಕಿಸೋ ಭರದಲ್ಲಿ ರಾಗಾ ಯಡವಟ್ಟು?ಬ್ಯಾನ್ ಆದ ಚೀನಿ ಡ್ರೋನ್ ಹಾರಿಸಿದ ರಾಹುಲ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ