newsfirstkannada.com

‘ಜ್ಞಾನವಾಪಿ ಮಸೀದಿಗೂ ಮುನ್ನ..’ ವಿವಾದಕ್ಕೆ ಮತ್ತೊಂದು ತಿರುವು ಕೊಟ್ಟ ಪುರಾತತ್ವ ಇಲಾಖೆ

Share :

Published January 26, 2024 at 6:50am

Update January 26, 2024 at 8:36am

    ‘ಜ್ಞಾನವಾಪಿ ಮಸೀದಿಗೂ ಮುನ್ನ ಅಲ್ಲಿ ಮಂದಿರವಿತ್ತು’

    ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವರದಿ

    ಕನ್ನಡ, ತೆಲುಗು, ದೇವನಾಗರಿ ಲಿಪಿಯ ಶಾಸನಗಳು ಪತ್ತೆ

ಜ್ಞಾನವಾಪಿ ಮಸೀದಿಯೋ? ಶೃಂಗಾರ್ ಗೌರಿ ಮಂದಿರವೋ? ಈ ಪ್ರಶ್ನೆ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ. ಆದ್ರೀಗ ಈ ಗೊಂದಲ ಬಗೆಹರಿಯುವ ಕಾಲ ಸನ್ನಿಹಿತವಾಗುತ್ತಿದೆ. ಕೋರ್ಟ್‌ ಕಟಕಟೆಗೆ ಬಂದು ನಿಂತಿದ್ದ ವಿವಾದಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಈ ಮೂಲಕ ಹಿಂದೂಗಳ ಹೋರಾಟಕ್ಕೆ ಜಯ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ.

ಕಾಶಿ ವಿಶ್ವನಾಥನ ಗರ್ಭಗುಡಿ ಪಕ್ಕದಲ್ಲೇ ಧರ್ಮ ಸಂಘರ್ಷದ ಹೊಗೆ ಎದ್ದಿತ್ತು. ಪುರಾತನ ಹಿಂದೂ ದೇಗುಲವಿದ್ದ ಸ್ಥಳದಲ್ಲಿ ಜ್ಞಾನವಾಪಿ ಮಸೀದಿ ತಲೆಎತ್ತಿದೆ ಎಂಬ ವಿವಾದ ಸೃಷ್ಟಿಯಾಗಿತ್ತುರ. ಹಲವು ದಶಕಗಳಿಂದ ಹಿಂದೂ-ಮುಸ್ಲಿಂ ತಿಕ್ಕಾಟಕ್ಕೂ ಇದು ದಾರಿ ಮಾಡಿ ಕೊಟ್ಟಿತ್ತು. ಸದ್ಯ ಶತಮಾನಗಳ ಸಂಘರ್ಷಕ್ಕೆ ಕೊನೆಗಾಲ ಬರುವ ಎಲ್ಲಾರ ಕುರುಹುಗಳು ಕಾಣಿಸುತ್ತಿವೆ.

ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸರ್ವೇ ಕಾರ್ಯ ನಡೆದಿತ್ತು. ಈ ಸರ್ವೇಯಲ್ಲಿ ಮಸೀದಿ ಆವರಣದೊಳಗೆ ಶಿವಲಿಂಗ, ನಂದಿ, ಘಂಟೆ ಸೇರಿ ಹಲವು ಕುರುಹು ಪತ್ತೆಯಾಗಿದ್ವು. ಇದೀಗ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಡೆಸಿದ್ದ ಸರ್ವೆಯ ವರದಿಯಲ್ಲಿ ಸತ್ಯಾಂಶ ಬಹಿರಂಗವಾಗಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿಯನ್ನು ಹಿಂದೂ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಪುರಾತತ್ವ ಇಲಾಖೆ ತನ್ನ ವರದಿಯಲ್ಲಿ ಹೇಳಿದೆ. ಮತ್ತೊಂದು ಅಚ್ಚರಿಯ ಸಂಗತಿಯೆಂದ್ರೆ ಈ ಮಸೀದಿಯ ಗೋಡೆಯ ಮೇಲೆ ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಯ ಲಿಪಿಯ ಶಾಸನಗಳು ಪತ್ತೆಯಾಗಿವೆ ಅಂತ ಮಹತ್ವದ ಸಂಗತಿ ಬಯಲಾಗಿದೆ.

ಎಎಸ್ಐ ವರದಿಯಲ್ಲೇನಿದೆ?

  • ಮಸೀದಿ ಸ್ಥಳದಲ್ಲಿ ಹಿಂದೊಮ್ಮೆ ದೇಗುಲ ಇದ್ದಿರಬಹುದು
  • ಅಸ್ತಿತ್ವದಲ್ಲಿನ ರಚನೆ ನಿರ್ಮಾಣಕ್ಕೆ ಮುನ್ನ ದೇಗುಲವಿತ್ತು
  • ಚಿಕ್ಕ ಮಂದಿರವಲ್ಲ, ದೊಡ್ಡ ಭವ್ಯ ಮಂದಿರ ನಿರ್ಮಾಣ
  • ಮಸೀದಿಯ ಪಶ್ಚಿಮ ಗೋಡೆ ಹಿಂದೂ ದೇಗುಲದ ಭಾಗ
  • ವಜೂಖಾನೆಯಲ್ಲಿ ದೇವತೆಗಳ ಮೂರ್ತಿ ಸಹ ಸಿಕ್ಕಿದೆ
  • ದೇಗುಲದ ಕಂಬಗಳ ಮೇಲಿನ ಚಿಹ್ನೆ ಅಳಿಸುವ ಯತ್ನ
  • ಮಸೀದಿಗೆ ಹಲವು ಮಾರ್ಪಾಡುಗಳನ್ನ ಮಾಡಲಾಗಿದೆ
  • ಕಂಬಗಳು, ಪ್ಲಾಸ್ಟರ್ ಅನ್ನು ಮರುಬಳಕೆ ಮಾಡಲಾಗಿದೆ
  • ಕಂಬಗಳ ಮೇಲಿನ ಕೆತ್ತನೆಗಳನ್ನ ತೆಗೆದುಹಾಕಲು ಯತ್ನ
  • 17ನೇ ಶತಮಾನದಲ್ಲಿ ಮಂದಿರ ನಾಶ ಮಾಡಲಾಗಿದೆ

  • 32 ಹಿಂದೂ ಮಂದಿರಗಳ ಶಾಸನಗಳು ಪತ್ತೆಯಾಗಿದೆ
  • ಶಾಸನಗಳು ಕನ್ನಡ, ತೆಲುಗು, ದೇವನಾಗರಿ ಲಿಪಿಯಲ್ಲಿವೆ

ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದ ಕುರಿತು ಎಎಸ್‌ಐ ಸಮೀಕ್ಷೆಯ ವರದಿಯನ್ನು ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯವರಿಗೆ ನೀಡಬೇಕು ಎಂದು ವಾರಣಾಸಿ ನ್ಯಾಯಾಲಯ ತೀರ್ಪು ನೀಡಿದ ಒಂದು ದಿನದ ನಂತರ ಎಎಸ್‌ಈ ವರದಿ ಬಹಿರಂಗವಾಗಿದೆ. ಹಿಂದೂ ಪರ ವಕೀಲ ವಿಷ್ಣುಶಂಕರ್ ಜೈನ್ ವರದಿಯೊಳಗಿನ ಅಂಶಗಳನ್ನ ಬಹಿರಂಗಪಡಿಸಿದ್ದಾರೆ.

ಒಟ್ಟಾರೆ, ಜ್ಞಾನವಾಪಿ ಮಂದಿರವೋ? ಮಸೀದಿಯೋ ಎಂಬ ವಿವಾದ ಈ ವರದಿಯಿಂದ ತೆರೆ ಬಿದ್ದಿಲ್ಲ.. ಇದೀಗ ಈ ವರದಿಯ ಬಗ್ಗೆ ಮತ್ತೆ ಮಸೀದಿ ಆಡಳಿತ ಮಂಡಳಿ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.. ನ್ಯಾಯಲಯ ನೀಡುವ ತೀರ್ಪಿನ ಬಳಿಕ ಮಂದಿರ-ಮಸೀದಿ ಎಂಬ ವಿವಾದಕ್ಕೆ ತೆರೆಬೀಳಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಜ್ಞಾನವಾಪಿ ಮಸೀದಿಗೂ ಮುನ್ನ..’ ವಿವಾದಕ್ಕೆ ಮತ್ತೊಂದು ತಿರುವು ಕೊಟ್ಟ ಪುರಾತತ್ವ ಇಲಾಖೆ

https://newsfirstlive.com/wp-content/uploads/2024/01/Gyanvapi-Case.jpg

Load More