newsfirstkannada.com

×

ದೃಶ್ಯಂ ಸಿನಿಮಾ ರೀತಿಯಲ್ಲಿ ಕೊ*ಲೆ! ಪ್ರೇಯಸಿಯನ್ನು ಕೊಂದು ಜಿಲ್ಲಾಧಿಕಾರಿ ಬಂಗಲೆಯಲ್ಲೇ ಹೂತಿಟ್ಟಿದ್ದ ಲವ್ವರ್​!

Share :

Published October 28, 2024 at 6:22am

    ಆಕೆಗೂ ಮದುವೆಯಾಗಿತ್ತು.. ಈತನ ಜೊತೆಗೆ ಅಫೇರ್​ ಇತ್ತು

    ಜಿಮ್​ ಟ್ರೈನರ್​ ಕೈಯಾರೆ ಹತ್ಯೆಯಾದ ಬ್ಯುಸಿನೆಸ್‌ಮ್ಯಾನ್ ಪತ್ನಿ

    ಮಾರುವೇಷದಲ್ಲಿ ತಿರುಗಾಡಿದ್ದ ಕಿಲ್ಲರ್ ಜಿಮ್ ಟ್ರೈನರ್ ಸಿಕ್ಕಿಬಿದ್ದದ್ದು ಹೇಗೆ?

ದೃಶ್ಯ ಸಿನಿಮಾ ಮಾದರಿಯಲ್ಲೇ ಪ್ರೇಯಸಿಯನ್ನ ಕೊಲೆ ಮಾಡಿ ಡಿಸಿ ಕಚೇರಿಯಲ್ಲಿ ಹೂತಿಟ್ಟ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಜಿಮ್ ಟ್ರೇನರ್​ ವಿಮಲ್-ಏಕ್ತಾ ಗುಪ್ತಾ ನಡುವೆ ಅಫೇರ್ ಇತ್ತು. ಆದರೆ ಜಿಮ್ ಟ್ರೇನರ್ ವಿಮಲ್​ ಬೇರೆ ಮದುವೆಯಾಗುವ ಸಿದ್ಧತೆ ಮಾಡ್ಕೊಂಡಿದ್ದ. ಈ ವಿಷಯ ತಿಳಿದು ಬೇಸರಗೊಂಡಿದ್ದ ಏಕ್ತಾ ಗುಪ್ತಾ ಜಿಮ್ ಟ್ರೈನರ್ ವಿಮಲ್ ಸೋನಿ ಜೊತೆ ಜಗಳವಾಡಿದ್ದಳು. ಮದುವೆಗೆ ಅಡ್ಡಿಪಡಿಸೋದಾಗಿ ಬ್ಲಾಕ್ ಮೇಲ್ ಮಾಡಿದ್ದಕ್ಕೆ ಕೊಲೆ ಮಾಡಿ ಮ್ಯಾಜಿಸ್ಟ್ರೇಟ್ ಬಂಗಲೆ ಪಕ್ಕದಲ್ಲೇ ಶವ ಹೂತಿಟ್ಟ ಬಗ್ಗೆ ಬಾಯ್ಬಿಟ್ಟಿದ್ದಾನೆ.

ಕಾನ್ಪುರದ ಬ್ಯುಸಿನೆಸ್‌ಮ್ಯಾನ್ ರಾಹುಲ್ ಗುಪ್ತಾನ ಪತ್ನಿ ಏಕ್ತಾ ಗುಪ್ತ ಜೂನ್ 24 ರಂದು ಜಿಮ್‌ಗೆ ಹೋಗಿದ್ದಳು. ಅಂದಿನಿಂದ ನಾಪತ್ತೆಯಾಗಿದ್ದಳು. 4-5 ವರ್ಷಗಳಿಂದ ಜಿಮ್‌ಗೆ ಹೋಗುತ್ತಿದ್ದ ಏಕ್ತಾ ಗುಪ್ತ. ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ನಾಲ್ಕು ತಿಂಗಳ ಬಳಿಕ ಆಕೆ ಶವ ಸಿಕ್ಕಿದೆ. ಅದೂ ಕೂಡ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಂಗಲೆ ಪಕ್ಕದಲ್ಲೇ!.

ಬಂಧಿಸಿದ ಬಳಿಕ ಹೊರಬಿತ್ತು ಅಸಲಿ ದೃಶ್ಯಂ!

ಕಣ್ಮರೆಯಾಗಿದ್ದ ಏಕ್ತಾ ಗುಪ್ತಾಳಿಗಾಗಿ ಹುಡುಕಾಡುತ್ತಿದ್ದ ಪೊಲೀಸರು ಶಂಕೆ ಮೇಲೆ ಜಿಮ್ ಟ್ರೈನರ್ ವಿಮಲ್ ಸೋನಿ ಬಂಧಿಸಿ ವಿಚಾರಣೆ ನಡೆಸಿದ್ರು. ಪೊಲೀಸ್ ವಿಚಾರಣೆ ವೇಳೆ ಜಿಮ್ ಟ್ರೈನರ್ ಸತ್ಯ ಹೊರಗೆಡವಿದ್ದ. ಡಿಸ್ಟ್ರಿಕ್ಟ್ ಮ್ಯಾಡಿಸ್ಟ್ರೇಟ್ ಬಂಗಲೆಯಲ್ಲಿ ಶವ ಹೂತಿರೋದಾಗಿ ತಪ್ಪೊಪ್ಪಿಕೊಂಡಿದ್ದ.

ಕೊಲೆಗೆ ಕಾರಣವೇನು?  

ಜಿಮ್ ಟ್ರೈನರ್ ಮತ್ತು ಏಕ್ತಾ ಗುಪ್ತಾಳ ನಡುವೆ ಅಫೇರ್ ಇತ್ತು. ಆದರೆ, ಜಿಮ್ ಟ್ರೈನರ್ ಬೇರೊಂದು ಮದುವೆಗೆ ಸಿದ್ಧವಾಗಿದ್ದ. ಎಂಗೇಜ್‌ಮೆಂಟ್ ಕೂಡ ನಡೆದು ಹೋಗಿತ್ತು. ಇದರಿಂದಾಗಿ ಪ್ರೇಯಸಿ ಏಕ್ತಾ ಗುಪ್ತಾ ಬೇಸರಗೊಂಡಿದ್ದಳು. ಜಿಮ್ ಟ್ರೈನರ್ ಜೊತೆ ಜಗಳವಾಡಿದ್ದಳು. ಮದುವೆಗೆ ಅಡ್ಡಿಪಡಿಸೋದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಳು.

ಎಲ್ಲರೂ ಅಂದುಕೊಂಡಿದ್ದೇ ಬೇರೆ!

ಏಕ್ತಾಳನ್ನು ಕೊಲೆಗೈದಿದ್ದ ಜಿಮ್ ಟ್ರೇನರ್ ತಲೆಮರೆಸಿಕೊಂಡಿದ್ದ. ಇತ್ತ ಡೆಡ್‌ಬಾಡಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಬಂಗಲೆಯಲ್ಲೇ ಹೂತಿಟ್ಟಿದ್ದ. ಹಾಗಾಗಿ, ಪೊಲೀಸರಿಗೆ ಕೊಲೆಯ ಶಂಕೆ ಬಂದಿರಲಿಲ್ಲ. ಜಿಮ್ ಟ್ರೈನರ್ ಜೊತೆೆ ಈಕೆ ಓಡಿಹೋಗಿರೋ ಬಗ್ಗೆ ಅನುಮಾನಗೊಂಡಿದ್ದರು. ಆದರೂ ಕೂಡ ತನಿಖೆ ಮುಂದುವರೆಸಿಕೊಂಡು ಬಂದಿದ್ದರು.

ಬಂಗಲೆಯಲ್ಲಿ ಹೆಣ ಹೂತಿಟ್ಟಿದ್ದು ಹೇಗೆ?

ಜಿಮ್ ಟ್ರೈನರ್ ಜಿಎಂ ಬಂಗಲೆೆಯಿದ್ದ ಕಾಂಪ್ಲೆಕ್ಸ್‌ಗೆ ಸದಾ ಬಂದು ಹೋಗುತ್ತಿದ್ದ. ಬ್ಯಾಡ್ಮಿಂಟನ್ ಆಡಲು ಬರುತ್ತಿದ್ದ. ಸುತ್ತಲ ಜಾಗದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದ. ಕಾರಿನಲ್ಲಿ ಏಕ್ತಾ ಗುಪ್ತಾಳ ಡೆಡ್‌ಬಾಡಿಯನ್ನು ತಂದು ಡಿಎಂ ಕಾಂಪೌಂಡ್ ಪಕ್ಕದಲ್ಲೇ ಇದ್ದ ಕ್ಲಬ್‌ನ ಆವರಣದಲ್ಲಿದ್ದ ಮರಗಳ ನಡುವೆ ಗುಂಡಿ ತೋಡಿ ಹೂತಿದ್ದ. ಬಳಿಕ, ಅಲ್ಲಿಂದ ನಾಪತ್ತೆಯಾಗಿದ್ದ.

ಮಾರುವೇಷದಲ್ಲಿ ತಿರುಗಾಡಿದ್ದ ಕಿಲ್ಲರ್ ಜಿಮ್ ಟ್ರೇನರ್!

ಕೊಲೆಗೈದು ಹೂತಿಟ್ಟ ಬಳಿಕ ಬೇರೆ ಬೇರೆ ನಗರಗಳು, ರಾಜ್ಯಗಳಿಗೆ ಹೋಗಿ ತಲೆಮರೆಸಿಕೊಂಡಿದ್ದ ಜಿಮ್ ಟ್ರೈನರ್ ಅಪ್ಪಿ ತಪ್ಪಿ ಮೊಬೈಲ್ ಯೂಸ್ ಮಾಡ್ತಿರಲಿಲ್ಲ. ಪೊಲೀಸ್ ತಂಡ ಆತನಿಗಾಗಿ ನಿರಂತರವಾಗಿ ಶೋಧ ನಡೆಸ್ತಿತ್ತು. ಒಂದು ಹೋಟೆಲ್‌ನಲ್ಲಿ 20 ದಿನ ವೆಯ್ಟರ್ ಆಗಿ ಕೆಲಸ ಮಾಡಿದ್ದ, ಅಷ್ಟು ಹುಷಾರಾಗಿದ್ದವನು ಅದೊಂದು ದಿನ ಕಾನ್ಪುರದ ತನ್ನ ಸ್ನೇಹಿತನಿಗೆ ಕರೆೆ ಮಾಡಿದ್ದ. ಪೊಲೀಸರಿಗೆ ಅಷ್ಟು ಸಾಕಿತ್ತು.

ಹೇಳಿದ್ದು ಒಂದೆರಡು ಸುಳ್ಳಲ್ಲ!

ಮೊದಲು ಗಂಗಾ ನದಿಗೆ ಎಸೆದೆ ಎಂದು ಸುಳ್ಳು ಹೇಳಿದ್ದ. ಮತ್ತೊಮ್ಮೆ ಬೇರೊಂದು ಜಾಗದಲ್ಲಿ ಎಸೆದೆ ಎಂದಿದ್ದ. ಕೊನೆಗೆ ಸತ್ಯ ಬಾಯ್ಬಿಟ್ಟಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೃಶ್ಯಂ ಸಿನಿಮಾ ರೀತಿಯಲ್ಲಿ ಕೊ*ಲೆ! ಪ್ರೇಯಸಿಯನ್ನು ಕೊಂದು ಜಿಲ್ಲಾಧಿಕಾರಿ ಬಂಗಲೆಯಲ್ಲೇ ಹೂತಿಟ್ಟಿದ್ದ ಲವ್ವರ್​!

https://newsfirstlive.com/wp-content/uploads/2024/10/Kanpura.jpg

Load More