newsfirstkannada.com

ಬೆಂಗಳೂರು ಜಿಮ್‌ ಟ್ರೈನರ್‌ ಸಾವಿಗೆ ಹೊಸ ಟ್ವಿಸ್ಟ್.. ಅಸಲಿಗೆ ಆಗಿದ್ದೇನು? ಇಂಚಿಂಚೂ ಮಾಹಿತಿ ಇಲ್ಲಿದೆ

Share :

Published May 16, 2024 at 8:28pm

  ಹೆಂಡತಿಗೆ ಹೆದರಿಸಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಪತಿರಾಯ?

  ಮದುವೆ ನಂತರವೂ ಕಾಲೇಜಿಗೆ ಹೋಗ್ತಿದ್ದ ಪತ್ನಿಯಿಂದ ಸಂಸಾರದಲ್ಲಿ ಕಿರಿಕ್

  ಫೋನ್​ನಲ್ಲಿ ಬ್ಯುಸಿ ಇರುತ್ತಿದ್ದ ಹೆಂಡತಿಯಿಂದ ಗಂಡನಿಗೆ ಇರುಸು ಮುರುಸು

ಬೆಂಗಳೂರು: ಕೆಲವೊಂದು ಸಾರಿ ನಾವು ಅಂದುಕೊಳ್ಳೋದೇ ಒಂದು. ಆದ್ರೆ ಆಗೋದೇ ಇನ್ನೊಂದು. ಇಲ್ಲಾಗಿದ್ದು ಅದೇ. ಹೆಂಡತಿಯನ್ನ ಬೆದರಿಸಬೇಕು ಅಂತ ಅಂದುಕೊಂಡವ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದ. ಆದ್ರೆ ಆ ಹುಚ್ಚು ಸಾಹಸ ಅವನ ಜೀವಕ್ಕೆ ಮುಳುವಾಗಿಬಿಟ್ಟಿದೆ.

ಅಮಿತ್ ದೂರದ ಬಿಹಾರದಿಂದ ಹೊಟ್ಟೆಪಾಡಿಗಾಗಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದು ಜಿಮ್ ಟ್ರೈನರ್ ಆಗಿ ಕೆಲಸ ಮಾಡ್ತಿದ್ದ. ಬೆಂಗಳೂರಲ್ಲಿ ಕೆಲಸ ಮಾಡ್ಕೊಂಡು ಆರಾಮಾಗಿಯೇ ಇದ್ದ. ಆದ್ರೆ ಅದ್ಯವಾಗ ಪ್ರೀತಿ ಅನ್ನೋ ಮಾಯೆಗೆ ಸಿಲುಕಿದ್ನೋ ಅಲ್ಲಿಂದಲೇ ಇವನ ಜೀವನ ನರಕವಾಗಿಬಿಟ್ಟಿದೆ. ಯಾಕಂದ್ರೆ ಕಳೆದ ಒಂದು ವರ್ಷದ ಹಿಂದೆ ಈ ಅಮಿತ್ ತಾನು ಕೆಲಸ ಮಾಡ್ತಿದ್ದ ಸ್ಥಳದಲ್ಲೇ ಹಾಸನದ ಯುವತಿಯೊಬ್ಬಳನ್ನ ಇಷ್ಟ ಪಟ್ಟಿದ್ದ. ಅವಳು ಕೂಡ ಇವನನ್ನ ಇಷ್ಟ ಪಟ್ಟಿದ್ಳು. ಅದ್ರಂತೆ ಇಬ್ಬರು ಮದುವೆ ಕೂಡ ಆಗಿದ್ರು. ಎಲ್ಲ ಚೆನ್ನಾಗಿತ್ತು ಅನ್ನೋಷ್ಟರಲ್ಲಿ ಸಂಸಾರದಲ್ಲಿ ಬಿರುಗಾಳಿ ಎದ್ದಿತ್ತು. ಇಷ್ಟ ಪಟ್ಟು ಆದ ಇದೇ ಮದುವೆ ಇವನ ಜೀವಕ್ಕೆ ಕುತ್ತು ತಂದು ಬಿಟ್ಟಿದೆ.

ಒಂದು ವರ್ಷದ ಹಿಂದೆ ಮದುವೆ! ಸಂಸಾರದಲ್ಲಿ ಆಗಿದ್ದೇನು?

ಜಿಮ್​ ಟ್ರೈನರ್ ಆಗಿ ಕೆಲಸ ಮಾಡ್ತಿದ್ದ ಅಮಿತ್ ಕಳೆದ ವರ್ಷ ಹುಡುಗಿಯೊಬ್ಬಳನ್ನ ಇಷ್ಟ ಪಟ್ಟಿದ್ದ. ಹಾಸನದ ಮೂಲದವಳಾಗಿದ್ದ ಯವತಿಯನ್ನ ಅಮಿತ್ ಪ್ರೀತಿ ಮಾಡ್ತಿದ್ದ. ಬಿಹಾರದ ಹುಡುಗ ಹಾಸನದ ಹುಡುಗಿ ಇಬ್ಬರ ಮಧ್ಯೆ ಪ್ರೀತಿ ಚಿಗುರೊಡೆದು ಕೊನೆಗೆ ಅದು ಮದುವೆ ಹಂತಕ್ಕೂ ಬಂದಿತ್ತು. ಆದ್ರೆ ಈ ಪ್ರೀತಿ ಅಮಿತ್ ಮನೆಯವರಿಗೆ ಇಷ್ಟ ಇರಲಿಲ್ಲ. ಹಾಗಂತ ಅಮಿತ್​ ಪ್ರೀತಿಸಿದವಳನ್ನ ಬಿಟ್ಟಿರಲಿಲ್ಲ ಪೋಷಕರ ವಿರೋಧದ ನಡುವೆ ಹಾಸನದ ಯುವತಿಯನ್ನ ಮದುವೆಯಾಗಿದ್ದ. ಆದ್ರೆ ಮದುವೆಯಾದ ಒಂದೇ ವರ್ಷಕ್ಕೆ ಇವರ ಸಂಸಾರದಲ್ಲಿ ಮನಸ್ತಾಪಗಳು ಶುರುವಾಗಿವೆ. ಪ್ರೀತಿಸಿ ಮದುವೆಯಾಗಿದ್ದ ಅಮಿತ್​ ಸಮಾಜದಲ್ಲಿ ಹೆಂಡತಿ ಒಂದೊಳ್ಳೆ ಸ್ಥಾನ ಸಿಗಲಿ ಅನ್ನೋ ಆಸೆ ಪಟ್ಟಿದ್ದ. ಇದೇ ಕಾರಣಕ್ಕೆ ಮದುವೆಯಾದ್ಮೇಲೆ ಅಮಿತ್ ಹೆಂಡತಿ ನರ್ಸಿಂಗ್ ಕೋರ್ಸ್ ಸೇರಿದ್ಳು. ಹಾಗಂತ ಅಮಿತ್ ಅದಕ್ಕೆ ವಿರೋಧ ಏನು ಮಾಡಿರಲಿಲ್ಲ. ಆದ್ರೆ ಕೋರ್ಸ್ ಸೇರಿದ ಬಳಿಕ ಅಮಿತ್ ಹೆಂಡತಿಯ ವರಸೆ ಬದಲಾಗಿದೆಯಂತೆ. ನರ್ಸಿಂಗ್ ಕೋರ್ಸ್ ಸೇರಿದ್ಮೇಲೆ ಅಮಿತ್ ಹೆಂಡತಿ ಫೋನ್​ನಲ್ಲಿ ಬ್ಯುಸಿಯಾಗಿ ದಿನಪೂರ್ತಿ ಫೋನ್​ನಲ್ಲಿ ಮಾತಾಡ್ತಾನೆ ಇದ್ದಳಂತೆ. ಆದ್ರೆ ಇದು ಅಮಿತ್​ಗೆ ಸಹಿಸಿಕೊಳ್ಳಲು ಆಗ್ತಿರಲಿಲ್ಲ. ಯಾರು? ಏನು ? ಅಂತ ಕೇಳ್ದಾಗ ಅಮಿತ್ ಹೆಂಡತಿ ಫ್ರೆಂಡ್ಸ್​ ಅಂತ ಹೇಳಿದ್ದಾಳೆ. ಆದ್ರೆ ಇದು ಇಷ್ಟಕ್ಕೆ ನಿಂತಿಲ್ಲ. ಪ್ರತಿದಿನ ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ಶುರುವಾಗಿದೆ. ಪ್ರತಿ ದಿನ ಕೂಗಾಡೋದು, ವಾಗ್ವಾದಗಳು ನಡೀತಾನೇ ಇದ್ವಂತೆ. ಫೋನ್​ನಲ್ಲಿ ಬ್ಯುಸಿಯಾಗಿದ್ದ ಅಮಿತ್ ಹೆಂಡತಿ ವರಸೆ ಬದಲಾಗಿತ್ತಂತೆ. ಗಂಡನ ಪ್ರಶ್ನೆಗೆ ಹಾರಿಕೆ ಉತ್ತರ ನೀಡ್ತಿದ್ಲಂತೆ.

ಇದನ್ನೂ ಓದಿ: ಹಾಡಹಗಲೇ ಸ್ಕ್ರೂ ಡ್ರೈವರ್​ನಿಂದ ಚುಚ್ಚಿ ಯುವಕನ ಬರ್ಬರ ಹತ್ಯೆ; ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

ಹೀಗಾಗಿ ಪ್ರತಿದಿನ ಇಬ್ಬರ ಮಧ್ಯೆ ಜಗಳ ನಡೀತಾನೇ ಇತ್ತಂತೆ. ಅದ್ಯಾವಗ ಗಂಡ ಹೆಂಡತಿ ನಡುವಿನ ಜಗಳ ವಿಕೋಪಕ್ಕೆ ಹೋಯ್ತು. ಕೊನೆಗೆ ಅಮಿತ್ ಪತ್ನಿ ಮನೆ ಬಿಟ್ಟು ಹೋಗಿ. ಗಂಡನಿಂದ ದೂರವಾಗಿ ಬೇರೆ ಕಡೆ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಳಂತೆ. ಆದ್ರೆ ಹೆಂಡತಿ ಮನೆ ಬಿಟ್ಟು ಹೋದ್ಳು ಅಂತ ಅಮಿತ್ ಮಾನಸಿಕವಾಗಿ ಕುಗ್ಗಿ ಹೋಗಿದ್ನಂತೆ. ಇದೇ ಕಾರಣಕ್ಕೆ ಬುಧವಾರ ಪತ್ನಿಗೆ ಮನೆಗೆ ಬರುವಂತೆ ಕಾಲ್ ಮಾಡಿದ್ದಾನೆ. ಆದ್ರೆ ಹೆಂಡತಿ ಆಗಲ್ಲ ಅಂದಿದ್ದಾಳೆ. ಆಗ ಅಮಿತ್ ಆಗದೇ ಇರೋ ದುಸ್ಸಾಹಸಕ್ಕೆ ಕೈ ಹಾಕಿದ್ದ. ಮಾಡಬಾರದ ಕೆಲಸ ಮಾಡಲು ಹೋಗಿ ಎಡವಟ್ಟು ಮಾಡ್ಕೊಂಡಬಿಟ್ಟಿದ್ದ. ಆದ್ರೀಗ ಅದೇ ಎಡವಟ್ಟಿನಿಂದ ಜಿಮ್ ಟ್ರೈನರ್ ಜೀವವನ್ನೆ ಕಳೆದುಕೊಂಡಿದ್ದಾನೆ.

ಹೆಂಡತಿಗೆ ಬೆದರಿಸಲು ಹೋಗಿ ಜೀವ ಕಳ್ಕೊಂಡ ಜಿಮ್ ಟ್ರೈನರ್

ಏನೋ ಮಾಡಲು ಹೋಗಿ ಇನ್ನೇನು ಆಗಿದೆ. ಅನ್ನೋ ಮಾತಿನಂತೆ ಅಮಿತ್ ವಿಚಾರದಲ್ಲೂ ನಡೆದಿದೆ. ಯಾಕಂದ್ರೆ ಹೆಂಡತಿಯನ್ನ ಮನೆಗೆ ಕರೀಬೇಕು ಅಂದುಕೊಂಡವನ್ನು ಸಾಯೋ ನಾಟಕ ಮಾಡೋದಕ್ಕೆ ಪ್ಲಾನ್ ಮಾಡಿದ್ದ. ಅದ್ರಂತೆ ಮನೆಯಲ್ಲಿದ್ದ ಫ್ಯಾನ್​ಗೆ ಹಗ್ಗ ಹಾಕಿ ಹೆಂಡತಿಗೆ ವಿಡಿಯೋ ಕಾಲ್ ಮಾಡಿದ್ದಾನೆ. ನೀನು ಬರದೇ ಇದ್ರೆ ನಾನು ಸೂಸೈಡ್ ಮಾಡಿಕೊಳ್ತೇನೆ ಅಂತ ಬೆದರಿಸೋಕೆ ಯತ್ನಿಸಿದ್ದಾನೆ. ಆದ್ರೆ ಈ ಟೈಮ್​​ನಲ್ಲಿ ಒಂದು ಎಡವಟ್ಟು ನಡೆದು ಹೋಗಿದೆ. ಅಮಿತ್ ಕೈಯಲ್ಲಿದ್ದ ಫೋನ್​ ಜಾರಿ ಕೆಳಗೆ ಬಿದ್ದು ಬಿಟ್ಟಿದೆ. ಆಗ ಅಮಿತ್ ಫೋನ್​ ಹಿಡಿಯೋಕೆ ಅಂತ ಮುಂದೆ ಬಾಗಿದಾಗ ಕುತ್ತಿಗೆಗೆ ಬಿಗಿದ್ದಿದ್ದ ಹಗ್ಗ ಬಿಗಿಯಾಗಿ ಅಮಿತ್ ಉಸಿರು ನಿಂತು ಹೋಗಿದೆ. ಹೆಂಡತಿಗೆ ಸುಮ್ನೆ ಬೆದರಿಸೋಕೆ ಅಂತ ಅಮಿತ್ ಕುತ್ತಿಗೆಗೆ ಹಗ್ಗ ಹಾಕೊಂಡಿದ್ದ. ಆದ್ರೆ ಇವನ ದುರಾದೃಷ್ಟ ಕೈಯಲ್ಲಿದ್ದ ಮೊಬೈಲ್ ಜಾರಿ ಅಮಿತ್​ ಜೀವಕ್ಕೆ ಕುತ್ತು ತಂದಿದೆ. ನಾಟಕ ಮಾಡೋಕೆ ಅಂತ ಹೋದವನು ಬದುಕಿನ ನಾಟಕವನ್ನೆ ಮುಗಿಸಿಬಿಟ್ಟಿದ್ದಾನೆ. ಕುತ್ತಿಗೆಗೆ ಬಿಗಿದ ಹಗ್ಗವೇ ಅಮಿತ್ ಉಸಿರಿಗೆ ಉರುಳಾಗಿತ್ತು. ಸದ್ಯ ಈ ಸಂಬಂಧ ಬಾಗಲಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸ್ತಿದ್ದಾರೆ. ಅದೇನೆ ಇರಲಿ ಗಂಡ ಹೆಂಡತಿ ಜಗಳ ಉಂಡು ಮಲಗೋ ವರೆಗೂ ಅಂತಾರೆ. ಆದ್ರೆ ಈ ದಂಪತಿ ಮಧ್ಯೆ ಶುರುವಾಗಿದ್ದ ಜಗಳ ಗಂಡನ ಕೊನೆಯಾಗಿದೆ. ಹೆಂಡತಿಗೆ ಹೆದರಿಸಲು ಹೋಗಿ ಜಿಮ್ ಟ್ರೈನರ್ ನಿಜವಾಗಲೂ ಜೀವ ಕಳೆದುಕೊಂಡಿದ್ದಾನೆ. ಏನೋ ಮಾಡಲು ಹೋಗಿ ಇನ್ನೇನೊ ಆಗಿರೋದು ನಿಜಕ್ಕೂ ದುರಂತವೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ಜಿಮ್‌ ಟ್ರೈನರ್‌ ಸಾವಿಗೆ ಹೊಸ ಟ್ವಿಸ್ಟ್.. ಅಸಲಿಗೆ ಆಗಿದ್ದೇನು? ಇಂಚಿಂಚೂ ಮಾಹಿತಿ ಇಲ್ಲಿದೆ

https://newsfirstlive.com/wp-content/uploads/2024/05/death52.jpg

Load More