Advertisment

ಪತ್ನಿಗೆ ವಿಡಿಯೋ ಕಾಲ್ ಮಾಡುತ್ತಲೇ ಪ್ರಾಣಬಿಟ್ಟ ಜಿಮ್ ಟ್ರೈನರ್.. ಹೆದರಿಸಲು ಹೋಗಿ ಜೀವ ಹೋಯ್ತು..

author-image
Ganesh
Updated On
ಬೆಂಗಳೂರು ಜಿಮ್‌ ಟ್ರೈನರ್‌ ಸಾವಿಗೆ ಹೊಸ ಟ್ವಿಸ್ಟ್.. ಅಸಲಿಗೆ ಆಗಿದ್ದೇನು? ಇಂಚಿಂಚೂ ಮಾಹಿತಿ ಇಲ್ಲಿದೆ
Advertisment
  • ಬೆಂಗಳೂರಲ್ಲಿ ಜಿಮ್ ಟ್ರೈನರ್ ಆತ್ಮಹತ್ಯೆಗೆ ಶರಣು
  • ಪತಿ-ಪತ್ನಿ ಮಧ್ಯೆ ಏನಾಗಿತ್ತು? ಯಾಕೆ ಆ ನಿರ್ಧಾರ?
  • ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು

ಬೆಂಗಳೂರು: ಪತ್ನಿಗೆ ವಿಡಿಯೋ ಕಾಲ್ ಮಾಡುತ್ತಲೇ ಜಿಮ್ ಟ್ರೈನರ್ ಆತ್ಮಹತ್ಯೆಗೆ ಶರಣಾದ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿಹಾರ ಮೂಲದ ಅಮಿತ್ ಕುಮಾರ್ (28) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

Advertisment

10 ವರ್ಷದ ಹಿಂದೆ ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದ ಅಮಿತ್, ಒಂದು ವರ್ಷದ ಹಿಂದೆ ಜಿಮ್ ಸಮೀಪವೇ ವಾಸವಿದ್ದ ಯುವತಿಯನ್ನು ಪ್ರೀತಿಸಿ ಮದುವೆ ಆಗಿದ್ದರು. ಪೋಷಕರ ವಿರೋಧದ ನಡುವೆಯೂ ಅಮಿತ್ ಕುಮಾರ್ ವಿವಾಹ ನಡೆದಿತ್ತು.

ಇದನ್ನೂ ಓದಿ:ಸಚಿನ್ ತೆಂಡುಲ್ಕರ್​​​​​ ಭದ್ರತೆಗೆ ನಿಯೋಜಿಸಿದ್ದ VVIP ಸೆಕ್ಯೂರಿಟಿ ಸಾವಿಗೆ ಶರಣು.. ಆಗಿದ್ದೇನು..

ಪತ್ನಿ ನರ್ಸಿಂಗ್ ಕೋರ್ಸ್​ಗೆ ಸೇರಿದ ಬಳಿಕ ಪತಿಗೆ ಸಮಯ ನೀಡ್ತಿರಲಿಲ್ಲ. ಫ್ರೆಂಡ್ಸ್ ಅಂತೇಳಿ ಪದೇ ಪದೆ ಪೋನ್ ಕಾಲ್ ನಲ್ಲಿರ್ತಿದ್ದಳಂತೆ. ಇದೇ ವಿಚಾರಕ್ಕೆ ಆಗಾಗ ಪತಿ-ಪತ್ನಿ ನಡುವೆ ಗಲಾಟೆ ಆಗುತ್ತಿತ್ತು. ವೈಮನಸ್ಸು ಜೋರಾದ ಹಿನ್ನೆಲೆಯಲ್ಲಿ ಪತಿಯನ್ನು ತೊರೆದು ಪತ್ನಿ ಬೇರೆಡೆ ವಾಸವಿದ್ದಳು. ಆಗ ಮನೆಗೆ ವಾಪಸ್ ಬರುವಂತೆ ಪದೇ ಪದೇ ಕರೆ ಮಾಡಿ ಅಮಿತ್ ಮನವಿ ಮಾಡಿಕೊಂಡಿದ್ದರಂತೆ.

Advertisment

ಇದನ್ನೂ ಓದಿ:SRH vs GT ನಡುವೆ ಇವತ್ತು ಮೆಗಾ ಫೈಟ್​.. ಹೈದರಾಬಾದ್​ ಸೋತರೆ ಆರ್​ಸಿಬಿಗೆ ಭಾರೀ ಲಾಭ.. ಅದು ಹೇಗೆ..?

ಅಂತೆಯೇ ನಿನ್ನೆಯ ದಿನ ಬಾಗಲಗುಂಟೆಯಲ್ಲಿನ ನಿವಾಸದಲ್ಲಿದ್ದ ಅಮಿತ್​ ಆಕೆಗೆ ಮತ್ತೊಮ್ಮೆ ಫೋನ್ ಮಾಡಿದ್ದಾರೆ. ನೀನು ಬರದಿದ್ದರೆ ನೇಣು ಬಿಗಿದುಕೊಂಡು ಸಾಯುತ್ತೇನೆ ಎಂದು ಹೆದರಿಸಿದ್ದಾರೆ. ಖುರ್ಚಿ ಮೇಲೆ ನಿಂತು ನೇಣು ಬಿಗಿದುಕೊಂಡು ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದರು. ಈ ವೇಳೆ ಮೊಬೈಲ್ ಕೈಯಿಂದ ತಪ್ಪಿ ನೆಲಕ್ಕೆ ಬಿದ್ದಿದೆ. ಆಗ ಮೊಬೈಲ್ ಹಿಡಿದುಕೊಳ್ಳಲು ಪ್ರಯತ್ನಿಸುತ್ತಿರುವಾಗ ಖುರ್ಚಿಯಿಂದ ಕಾಲು ಜಾರಿ ನೇಣು ಬಿಗಿದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:‘ಬೇಕಂತ ಕೊಲೆ ಮಾಡ್ಲಿಲ್ಲ ಸರ್..’ ಪೊಲೀಸರ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮೋನಿಕಾ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment