newsfirstkannada.com

ಜಿಮ್ ಟ್ರೈನರ್ ಸೂಸೈಡ್‌ ಕೇಸ್‌ಗೆ ಹೊಸ ಟ್ವಿಸ್ಟ್‌.. ಪತ್ನಿಗೆ ವಿಡಿಯೋ ಕಾಲ್ ಮಾಡಿದ ಮೇಲೆ ಆಗಿದ್ದೇನು?

Share :

Published May 16, 2024 at 2:20pm

Update May 16, 2024 at 2:22pm

    ಪತ್ನಿಗೆ ವಿಡಿಯೋ ಕಾಲ್ ಮಾಡುತ್ತಲೇ ಜಿಮ್ ಟ್ರೈನರ್ ಆತ್ಮಹತ್ಯೆ?

    ಯುವತಿ ಅಪ್ರಾಪ್ತೆ ಇದ್ದಾಗಿನಿಂದ ಪ್ರೀತಿಸುತ್ತಿದ್ದ ಜಿಮ್‌ ಟ್ರೈನರ್‌ ಅಮಿತ್

    18 ವರ್ಷ ತುಂಬುತ್ತಿದ್ದಂತೆ ಪೋಷಕರ ವಿರೋಧದ ಮಧ್ಯೆಯೂ ಮದುವೆ

ಬೆಂಗಳೂರು: ಪತ್ನಿಗೆ ವಿಡಿಯೋ ಕಾಲ್ ಮಾಡುತ್ತಲೇ ಜಿಮ್ ಟ್ರೈನರ್ ಸಾವನ್ನಪ್ಪಿದ ಪ್ರಕರಣದಲ್ಲಿ ಬಾಗಲಗುಂಟೆ ಪೊಲೀಸರ ತನಿಖೆ ಆರಂಭವಾಗಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಅಂದ್ರೂ ತನಿಖೆಯಲ್ಲಿ ಕೆಲವೊಂದು ಅನುಮಾನಗಳು ವ್ಯಕ್ತವಾಗಿದೆ.

ಜಿಮ್ ಟ್ರೈನರ್ ಅಮಿತ್ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ಅವರು ಮಾಹಿತಿ ನೀಡಿದ್ದಾರೆ. ಬಿಹಾರ ಮೂಲದ ಅಮಿತ್ ಕುಮಾರ್ ಬೆಂಗಳೂರಲ್ಲಿ ಜಿಮ್ ಸಮೀಪವೇ ವಾಸವಿದ್ದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಯುವತಿ ಅಪ್ರಾಪ್ತೆ ಇದ್ದಾಗಿನಿಂದ ಪ್ರೀತಿಸುತ್ತಿದ್ದ ಅಮಿತ್, 18 ವರ್ಷ ತುಂಬುತ್ತಿದ್ದಂತೆ ಪೋಷಕರ ವಿರೋಧದ ಮಧ್ಯೆಯೂ ವಿವಾಹವಾಗಿದ್ದ. ಕಳೆದ ವರ್ಷವಷ್ಟೇ ಇಬ್ಬರ ವಿವಾಹವಾಗಿತ್ತು.

ಇದನ್ನೂ ಓದಿ: ಬೆಂಗಳೂರು: ಬಾತ್ ರೂಂನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ PUC ವಿದ್ಯಾರ್ಥಿನಿ ಮೃತದೇಹ.. ಸಾವಿನ ಸುತ್ತ ಅನುಮಾನದ ಹುತ್ತ 

ಮದುವೆಯಾಗಿ 3 ತಿಂಗಳು ಮಾತ್ರ ಅಮಿತ್ ದಂಪತಿ ಅನ್ಯೋನ್ಯವಾಗಿದ್ದರು. ಸದ್ಯ ಮಹಿಳೆಗೆ 19 ವರ್ಷ ವಯಸ್ಸು. ಮದುವೆ ಬಳಿಕವು ಯುವತಿ ಕಾಲೇಜಿಗೆ ಹೋಗ್ತಿದ್ದರು. ನರ್ಸಿಂಗ್‌ ಕಾಲೇಜಿಗೆ ಹೋದ ಮೇಲೆ ಅಮಿತ್‌ಗೆ ಪತ್ನಿ ಮೇಲೆ ಅನುಮಾನ ಶುರುವಾಗಿತ್ತು. ಬೇರೆಯವರ ಜೊತೆಗೆ ಆತ್ಮೀಯವಾಗಿರಬಹುದು ಎನ್ನುತ್ತಿದ್ದನಂತೆ. ಹೀಗಾಗಿ ಪ್ರತಿ ಬಾರಿಯೂ ಆಕೆಯನ್ನ ಕಂಟ್ರೋಲ್‌ಗೆ ತೆಗೆದುಕೊಳ್ಳಲು ಪ್ರಯತ್ನ ಮಾಡ್ತಿದ್ದ ಎನ್ನಲಾಗಿದೆ.

ಕಾಲೇಜಿಗೆ ಸೇರಿದ ಬಳಿಕ ಅಮಿತ್ ಪತ್ನಿ ಫ್ರೆಂಡ್ಸ್ ಅಂತಾ ಪದೇ ಪದೇ ಫೋನ್‌ ಕಾಲ್‌ನಲ್ಲಿದ್ದಳು. ಇದೇ ವಿಚಾರಕ್ಕೆ ಆಗಾಗ ಪತಿ, ಪತ್ನಿ ನಡುವೆ ಜಗಳ ಆಗ್ತಾ ಇತ್ತು. ಹೀಗಾಗಿ ಪತ್ನಿ ಗಂಡನಿಂದ ದೂರವಾಗಿ ಬೇರೊಂದು ಕಡೆ ವಾಸವಾಗಿದ್ದಳು. ನಿನ್ನೆ ಸಂಜೆ ಅಮಿತ್, ಹೆಂಡತಿಯನ್ನು ಮನೆಗೆ ಬರುವಂತೆ ಪದೇ ಪದೇ ಕಾಲ್ ಮಾಡಿದ್ದಾನೆ. ವಿಡಿಯೋ ಕಾಲ್‌ನಲ್ಲಿ ಮನೆಗೆ ಬಂದಿಲ್ಲ ಅಂದರೆ ನೇಣು ಬಿಗಿದುಕೊಳ್ಳೋದಾಗಿ ಬೆದರಿಕೆ ಹಾಕಿದ್ದಾನೆ.

ಸೈದುಲು ಅಡಾವತ್, ಉತ್ತರ ವಿಭಾಗ ಡಿಸಿಪಿ

ಅಮಿತ್ ಆತ್ಮಹತ್ಯೆಗೆ ಯತ್ನ ಮಾಡಿರೋದು ಕೂಡ ಇದೇ ಮೊದಲಲ್ಲ. ಆಕೆಯನ್ನ ಕಂಟ್ರೋಲ್‌ಗೆ ತೆಗೆದುಕೊಳ್ಳಲು ಆತ್ಮಹತ್ಯೆಯ ಡ್ರಾಮಾ ಮಾಡ್ತಿದ್ದ. ವಿಡಿಯೋ ಕಾಲ್ ಮಾಡಿ ಪತ್ನಿಯನ್ನ ಬೆದರಿಸುತ್ತಿದ್ದ. ನಿನ್ನೆ ಕೂಡ ವಿಡಿಯೋ ಕಾಲ್ ಮಾಡಿ ಸಾಯೋದಾಗಿ ಬೆದರಿಕೆ ಹಾಕಿದ್ದಾನೆ. ರೂಮ್ ಡೋರ್ ಲಾಕ್ ಮಾಡಿಕೊಂಡಿದ್ದ ಅಮಿತ್ ಕುಮಾರ್ ವಿಡಿಯೋ ಕಾಲ್ ಮಾಡಿದ್ದಾನೆ. ಬಳಿಕ ರೂಮ್‌ನಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಹೆಂಡತಿ ಮೇಲಿನ ಅನುಮಾನಕ್ಕೆ ಹೆದರಿಸಲು ಹೋದ ಅಮಿತ್ ಅಚಾನಕ್ಕಾಗಿ ಸಾವನ್ನಪ್ಪಿದ್ನಾ ಅಥವಾ ಸಾವಿಗೆ ನಿಖರ ಕಾರಣ ಏನು ಅನ್ನೋದನ್ನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಿಮ್ ಟ್ರೈನರ್ ಸೂಸೈಡ್‌ ಕೇಸ್‌ಗೆ ಹೊಸ ಟ್ವಿಸ್ಟ್‌.. ಪತ್ನಿಗೆ ವಿಡಿಯೋ ಕಾಲ್ ಮಾಡಿದ ಮೇಲೆ ಆಗಿದ್ದೇನು?

https://newsfirstlive.com/wp-content/uploads/2024/05/Bangalore-Gym-Trainer-Death.jpg

Load More