Advertisment

ರಾಜ್ಯ ಯುವ ಕಾಂಗ್ರೆಸ್​ ಅಧ್ಯಕ್ಷರಾಗಿ ಮಂಜುನಾಥ್ ಪದಗ್ರಹಣ.. ಶಿಷ್ಯನಿಗೆ ಅಧಿಕಾರ ನೀಡಿ ಬೀಗಿದ ಡಿಕೆಶಿ

author-image
Gopal Kulkarni
Updated On
ರಾಜ್ಯ ಯುವ ಕಾಂಗ್ರೆಸ್​ ಅಧ್ಯಕ್ಷರಾಗಿ ಮಂಜುನಾಥ್ ಪದಗ್ರಹಣ.. ಶಿಷ್ಯನಿಗೆ ಅಧಿಕಾರ ನೀಡಿ ಬೀಗಿದ ಡಿಕೆಶಿ
Advertisment
  • ರಾಜ್ಯ ಯುವ ಕಾಂಗ್ರೆಸ್​ಗೆ ಮಂಜುನಾಥ್ ಸಾರಥ್ಯ
  • ಶಿಷ್ಯನಿಗೆ ಅಧಿಕಾರ ನೀಡಿ ಬೀಗಿದ ಡಿಸಿಎಂ ಡಿಕೆಶಿ!
  • ಒಕ್ಕಲಿಗ ಸಮುದಾಯದ ಮಂಜುನಾಥ್​ಗೆ ಡಿಕೆಶಿ ಅಭಯ

ಯುವ ಕಾಂಗ್ರೆಸ್​ಗೆ ಹೊಸ ಚೖತನ್ಯ ಸಿಕ್ಕಿದೆ. ಯುವ ಕಾಂಗ್ರೆಸ್ ಹೊಸ ತಂಡಕ್ಕೆ ಮಹತ್ವದ ಜವಾಬ್ದಾರಿ ಸಿಕ್ಕಿದೆ. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮಂಜುನಾಥ್ ಪದಗ್ರಹಣ ಮಾಡಿದ್ರು. ಅರಮನೆ ಮೈದಾನದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಭಾಗಿಯಾದ ಡಿಸಿಎಂ ಡಿಕೆಶಿ ಶಕ್ತಿ ಪ್ರದರ್ಶನ ಮಾಡಿದ್ರು.

Advertisment

ಇದನ್ನೂ ಓದಿ:ಮಿನಿಸ್ಟರ್ ಮಹಾದೇವಪ್ಪ ಮನೆಯಲ್ಲಿ ದಲಿತ ನಾಯಕರ ಸಭೆ.. ಒಗ್ಗಟ್ಟಿನ ಬಲ ಪ್ರದರ್ಶಿಸಿದ ಸಚಿವರು

ಹಳೆ ಬೇರು, ಹೊಸ ಚಿಗುರು. ಕಾಂಗ್ರೆಸ್​​ನಲ್ಲಿ ವಸಂತ ಕಾಲದ ಮಾವಿನ ಪರಿಮಳ. ರಾಜ್ಯ ಯುವ ಕಾಂಗ್ರೆಸ್​ನಲ್ಲೀಗ ಹೊಸ ನೀರು ​ಹರಿಯುತ್ತಿದೆ. ಯುವಪಡೆಗೆ ನವ ಸಾರಥಿ ಆಗಮನವಾಗಿದೆ.. ಕಾಂಗ್ರೆಸ್‌ ರಾಜ್ಯಾಧ್ಯಕ್ಷರಾಗಿ ಹೆಚ್.ಎಸ್.ಮಂಜುನಾಥ್ ಪದಗ್ರಹಣ ಮಾಡಿದ್ದಾರೆ. ನಿರ್ಗಮಿತ ನಲಪಾಡ್​ರಿಂದ ಅಧ್ಯಕ್ಷ ಸ್ಥಾನ ಪಲ್ಲಟವಾಗಿದೆ. ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರಾಗಿ ಮಂಜುನಾಥ್​​​ ಆಗಮನ ಆಗಿದೆ.

publive-image
ರಾಜ್ಯ ಯುವ ಕಾಂಗ್ರೆಸ್​ಗೆ ಹೊಸ ಸಾರಥ್ಯ ಸಿಕ್ಕಿದೆ. ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧನೆ ಆಗಿದೆ. ಕಾರ್ಯಕ್ರಮದಲ್ಲಿ ಖುದ್ದು ಭಾಗಿಯಾಗಿ ಯುವ ಪಡೆಗೆ ಸಂಘಟನೆಯ ಜವಾಬ್ದಾರಿಯ ಮಂತ್ರೋಪದೇಶ ಮಾಡಿದ್ರು.. ನಿನ್ನೆ ಅಧಿವೇಶನಕ್ಕೆ ಗೈರಾಗಿದ್ದ ಡಿಸಿಎಂ ಡಿಕೆಶಿ, ಯೂತ್​​​ ಕಾಂಗ್ರೆಸ್​​​ನ ಪದಗ್ರಹಣ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಅಂತ್ಯದವರೆಗೂ ಉಪಸ್ಥಿತರಿದ್ದು ಗಮನ ಸೆಳೆದ್ರು.

Advertisment

publive-image

ಮಂಜುನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಮುಂಬರುವ ಸ್ಥಳೀಯ ಸಂಸ್ಥೆ, ಬಿಬಿಎಂಪಿ, 2028ರ ಸಾರ್ವತ್ರಿಕ ಚುನಾವಣೆಯಲ್ಲಿ ಯುವ ಪಡೆ ಮುನ್ನಡೆಸುವ ಹೊಣೆಗಾರಿಕೆ ಒಪ್ಪಿಸಿದ್ರು..
NSUI ವಿದ್ಯಾರ್ಥಿ ಸಂಘಟನೆಯಿಂದ ರಾಜಕೀಯ ಪದಾರ್ಪಣೆ ಮಾಡಿದ ಮಂಜುನಾಥ್​​, ಕಾಂಗ್ರೆಸ್ ಪಕ್ಷದ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಮುಂಚೂಣಿಯಲ್ಲಿ ಕೆಲಸ ಮಾಡಿದ್ದಾರೆ.. ಎರಡು ಬಾರಿ ಎನ್ಎಸ್​ಯುವೈ ರಾಜ್ಯಾಧ್ಯಕ್ಷರಾಗಿದ್ದ ಮಂಜುನಾಥ್​​​, ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಕಾರ್ಯಧ್ಯಕ್ಷರಾಗಿ ಪಕ್ಷದ ಕಾರ್ಯ ನಿರ್ವಹಿಸಿದ್ದಾರೆ.. ಪ್ರಬಲ ಒಕ್ಕಲಿಗ ಸಮುದಾಯದ ಮಂಜುನಾಥ್​ಗೆ ಡಿಸಿಎಂ ಡಿಕೆಶಿ ಅಭಯ ಹಸ್ತವಿದೆ.

publive-image

ಅಧಿಕಾರ ಸ್ವೀಕರಿಸಿ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್​ನ ನೂತನ ಸಾರಥಿ ಮಂಜುನಾಥ್ ಗೌಡ, ಹಿರಿಯರ ಮಾರ್ಗದರ್ಶನ ಸ್ಮರಿಸಿದ್ರು. ಯುವ ಕಾಂಗ್ರೆಸ್ ಸಾರಥ್ಯ ಪಡೆದಿರುವ ಮಂಜುನಾಥ್ ತಂಡಕ್ಕೆ ಸಾಕಷ್ಟು ಸವಾಲುಗಳಿವೆ. ಮುಂಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ, ಯುವ ಮತದಾರರನ್ನ ಪಕ್ಷದತ್ತ ಸೆಳೆಯುವ ಕೆಲಸ, ಪ್ರಮುಖವಾಗಿ ಗ್ಯಾರಂಟಿ ಯೋಜನೆಗಳನ್ನ ಜನರಿಗೆ ಮನವರಿಕೆ, ಪಾರದರ್ಶಕ ಆಡಳಿತ, ಯುವ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ವಿಚಾರಗಳನ್ನ ನಾಡಿನ ಜನತೆಗೆ ಸಾರಿ ಹೇಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment