ಬಿಗ್​ಬಾಸ್ ಇತಿಹಾಸದಲ್ಲೇ ಮೊದಲು.. ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡೋದಕ್ಕೆ ಸಜ್ಜಾದ್ರಾ ಈ ವಿಶೇಷ ಸ್ಪರ್ಧಿ

author-image
Veena Gangani
Updated On
BIGG BOSS: ಬಿಗ್​ಬಾಸ್​ ಶುರುವಾಗೋ ಮುನ್ನವೇ ಲೀಕ್ ಆಯ್ತು ಸ್ಪರ್ಧಿಗಳ ಹೆಸರು.. ಪಟ್ಟಿ ಇಲ್ಲಿದೆ!
Advertisment
  • ಬಿಗ್​ಬಾಸ್​ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ನಡೆಯುವ ಸೀಸನ್ ಇದು!
  • ಬಿಗ್​ಬಾಸ್​ ಶೋ ಶುರುವಾಗೋ ಮುನ್ನವೇ ವೀಕ್ಷಕರಲ್ಲಿ ಭಾರೀ ಕುತೂಹಲ
  • ಈ ಬಾರಿಯ ಬಿಗ್​ಬಾಸ್​ಗೆ ಯಾರೆಲ್ಲಾ ಸ್ಪರ್ಧಿಗಳ ಆಗಮನ ಆಗಲಿದೆ?

ವೀಕ್ಷಕರ ಚಿತ್ತ ಈಗ ಬಿಗ್​ಬಾಸ್​ ಮೇಲೆ ನೆಟ್ಟಿದೆ. ಈಗಾಗಲೇ ಕನ್ನಡ, ತೆಲುಗು ಸೇರಿ ಹಲವು ಭಾಷೆಗಳಲ್ಲಿ ಬಿಗ್​ಬಾಸ್​ ಶೋ ಆರಂಭಿಸಲು ತೆರೆಮರೆಯಿಂದ ಸಿದ್ಧತೆ ನಡೆಸಲಾಗುತ್ತಿದೆ. ಇದರ ಮಧ್ಯೆ ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ರಿಯಾಲಿಟಿ ಟಿವಿ ಶೋ ಬಿಗ್ ಬಾಸ್ 19 ಆರಂಭವಾಗುತ್ತಿದೆ.

ಇದನ್ನೂ ಓದಿ:ಗುಡ್​​ನ್ಯೂಸ್​ ಎಂದ ಭಾವನಾ ರಾಮಣ್ಣ.. 40ನೇ ವಯಸ್ಸಲ್ಲಿ ಅಮ್ಮ ಆಗ್ತಿದ್ದಾರೆ ಸ್ಯಾಂಡಲ್​ವುಡ್ ನಟಿ

ಹೀಗಾಗಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಬಿಗ್‌ಬಾಸ್ ಕಾರ್ಯಕ್ರಮ ಶುರುವಾಗೋ ಮುನ್ನವೇ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿದೆ. ಈ ಬಾರಿಯ ಬಿಗ್​ಬಾಸ್​ಗೆ ಯಾರೆಲ್ಲಾ ಎಂಟ್ರಿ ಕೊಡಲಿದ್ದಾರೆ ಎಂದು ವೀಕ್ಷಕರು ಚರ್ಚೆ ಶುರು ಮಾಡಿಕಂಡಿದ್ದಾರೆ. ಇದರ ಮಧ್ಯೆ ಈ ಬಾರಿಯ ಬಿಗ್​ಬಾಸ್​ ಸೀಸನ್ 19ಕ್ಕೆ ಯುಎಇಯ ಮೊದಲ ಕೃತಕ ಬುದ್ಧಿಮತ್ತೆ ಗೊಂಬೆ ಹಬುಬು ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

publive-image

ಹೌದು, ಬಿಗ್ ಬಾಸ್ ಸೀಸನ್ 16ರಲ್ಲಿ ತಜಕಿಸ್ತಾನದ ಗಾಯಕ, ಸಂಗೀತ ನಿರ್ದೇಶಕ, ಬ್ಲಾಗರ್ ಕೂಡ ಆಗಿದ್ದ ವಿಶ್ವದ ಅತ್ಯಂತ ಪುಟ್ಟ ಗಾಯಕ ಎಂಬ ದಾಖಲೆಯನ್ನು ಕೂಡ ಹೊಂದಿರುವ ಅಬ್ದು ರೋಜಿಕ್ ಭಾಗವಹಿಸಿದ್ದರು. ಸದ್ಯ ಇದೇ ಅಬ್ದು ರೋಜಿಕ್ ಅವರ ಯುಎಇ ಕಂಪನಿಯಾದ 'ಐಎಫ್‌ಸಿಎಂ'ನಲ್ಲಿ ಹಬುಬ್ ಡಾಲ್ ಎಂಬ ಎಐ ರೋಬೋಟ್ ಕಾರ್ಯ ನಿರ್ವಹಿಸುತ್ತಿದ್ದು, ಇದೇ ಹಬುಬ್ ಡಾಲ್ ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದೆ ಎಂದು ವರದಿಯಾಗಿದೆ. ಬಿಗ್ ಬಾಸ್ ಮನೆಗೆ ಬರುವ ಈ ಡಾಲ್ ಹಿಂದಿ ಸೇರಿ 7 ಭಾಷೆಗಳನ್ನು ಮಾತನಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆಯಂತೆ. ಹೀಗಾಗಿ ಈ ವಿಚಾರ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಸದ್ಯ 2025 ಜುಲೈ 30ರಿಂದ ಕಾರ್ಯಕ್ರಮ ಶುರುವಾಗಲಿದ್ದು, ಜನವರಿ 2026ರವರೆಗೆ ಕಾರ್ಯಕ್ರಮ ನಡೆಯಲಿದೆ. ಈ ಮೂಲಕ ಬಿಗ್​ಬಾಸ್​ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ನಡೆಯುವ ಸೀಸನ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment